ADVERTISEMENT

ಚುನಾವಣಾ ಸೋಲಿಗೆ ಇವಿಎಂಗಳನ್ನು ದೂಷಿಸಲಿರುವ ‘ಇಂಡಿಯಾ’ ಬಣ: ಅಮಿತ್‌ ಶಾ

ಪಿಟಿಐ
Published 29 ಮೇ 2024, 9:39 IST
Last Updated 29 ಮೇ 2024, 9:39 IST
<div class="paragraphs"><p>ಕೇಂದ್ರ ಗೃಹ ಸಚಿವ ಅಮಿತ್‌ ಶಾ</p></div>

ಕೇಂದ್ರ ಗೃಹ ಸಚಿವ ಅಮಿತ್‌ ಶಾ

   

ಪಿಟಿಐ ಚಿತ್ರ

ಮಹಾರಾಜ್‌ಗಂಜ್(ಉತ್ತರ ಪ್ರದೇಶ): ಲೋಕಸಭಾ ಚುನಾವಣೆಯಲ್ಲಿ ತಮ್ಮ ಸೋಲಿಗೆ ವಿದ್ಯುನ್ಮಾನ (ಇವಿಎಂ) ಮತಯಂತ್ರಗಳ ಲೋಪವೇ ಕಾರಣ ಎಂದು ದೂಷಿಸಲು ಇಂಡಿಯಾ ಮೈತ್ರಿಕೂಟದ ಪಕ್ಷಗಳು ನಿರ್ಧರಿಸಿವೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಬುಧವಾರ ಆರೋಪಿಸಿದ್ದಾರೆ.

ADVERTISEMENT

ಚುನಾವಣಾ ರ್‍ಯಾಲಿಯಲ್ಲಿ ಮಾತನಾಡಿದ ಅವರು, ಕಾಂಗ್ರೆಸ್‌ ಮತ್ತು ಸಮಾಜವಾದಿ ಪಕ್ಷಗಳ ವಿರುದ್ಧ ಹರಿಹಾಯ್ದರು. ಮೊದಲ ಐದು ಹಂತದ ಮತದಾನದಲ್ಲಿ ಬಿಜೆಪಿ ಬಹುಮತ ಸಾಧಿಸಲು ಬೇಕಿರುವ ಸಂಖ್ಯೆಯನ್ನು ದಾಟಿದೆ ಎಂದು ಹೇಳಿದ್ದಾರೆ.

ಜೂನ್‌ 4ರ ನಂತರ ರಾಹುಲ್‌ ಗಾಂಧಿ ಹಾಗೂ ಸಮಾಜವಾದಿ ಪಕ್ಷದ ಮುಖಂಡ ಅಖಿಲೇಶ್‌ ಯಾದವ್‌ ಅವರು ಪತ್ರಿಕಾಗೋಷ್ಠಿ ನಡೆಸಿ ನಮ್ಮ ಸೋಲಿಗೆ ಇವಿಎಂಗಳ ದುರ್ಬಳಕೆ ಹಾಗೂ ಅದರ ಲೋಪಗಳೇ ಕಾರಣ ಎಂದು ಹೇಳುತ್ತಾರೆ ಎಂದು ವ್ಯಂಗ್ಯವಾಡಿದ್ದಾರೆ.ಜಾಮೀನು ಅವಧಿ ವಿಸ್ತರಣೆ ಅರ್ಜಿ: ಕೇಜ್ರಿವಾಲ್ ಮನವಿ ತಿರಸ್ಕರಿಸಿದ ಸುಪ್ರೀಂ ಕೋರ್ಟ್

ಪ್ರಧಾನಿ ಮೋದಿ ಅವರು ಐದು ಹಂತದ ಮತದಾನದಲ್ಲಿ 310 ಸ್ಥಾನಗಳನ್ನು ಪಡೆಯಲಿದ್ದಾರೆ. ರಾಹುಲ್‌ ಅವರಿಗೆ 40 ಸ್ಥಾನಗಳು ದೊರೆಯಬಹುದು ಹಾಗೂ ಸಮಾಜವಾದಿ ಪಕ್ಷವು 4 ಕ್ಷೇತ್ರಗಳಲ್ಲಿ ಗೆಲುವು ಸಾಧಿಸಲು ಸಶಕ್ತವಾಗಬಹುದು ಎಂದು ಹೇಳಿದ್ದಾರೆ.

ಉತ್ತರ ಪ್ರದೇಶದ ಮಹಾರಾಜ್‌ಗಂಜ್‌ನಲ್ಲಿ ಮೈ ಶುಗರ್‌ ಕಾರ್ಖಾನೆ ಸ್ಥಾಪಿಸುವುದಾಗಿ ತಿಳಿಸಿದ ಶಾ, ಕಾಶ್ಮೀರ ಭಾರತದ ಭಾಗವಾಗಿದೆ ಅದನ್ನು ಮರಳಿ ಪಡೆಯುತ್ತೇವೆ ಎಂದು ಪುನರುಚ್ಚರಿಸಿದ್ದಾರೆ.

ಏಳನೇ ಹಂತದ ಮತದಾನವು ಜೂನ್ 1ರಂದು ನಡೆಯಲಿದ್ದು, ಅಂದೇ ಮಹಾರಾಜ್‌ಗಂಜ್‌ನಲ್ಲಿ ಮತದಾನ ನಡೆಯಲಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.