ಶಬರಿಮಲೆ: ಅಯ್ಯಪ್ಪ ಧರ್ಮಸೇನಾ ಅಧ್ಯಕ್ಷ ರಾಹುಲ್ ಈಶ್ವರ್ ಅವರ ಅಭಿಪ್ರಾಯಗಳು ತಂತ್ರಿ ಕುಟುಂಬದ ಅಭಿಪ್ರಾಯಗಳು ಅಲ್ಲ ಎಂದು ತಾಳಮನ್ ಮಠಂ ಸದಸ್ಯರು ಹೇಳಿದ್ದಾರೆ.ಶಬರಿಮಲೆ ಅಯ್ಯಪ್ಪ ದೇಗುಲದ ಪ್ರಧಾನ ಅರ್ಚಕರ ಕುಟುಂಬವಾಗಿದೆ ತಾಳಮನ್ ಮಠಂ.
ಶಬರಿಮಲೆಯ ಧಾರ್ಮಿಕ ವಿಧಿ ವಿಧಾನಗಳ ಬಗ್ಗೆ ಮಾತನಾಡಲು ರಾಹುಲ್ ಈಶ್ವರ್‌ಗೆ ಹಕ್ಕು ಇಲ್ಲ. ತಾನು ಹೇಳುತ್ತಿರುವುದು ತಂತ್ರಿ ಕುಟುಂಬದ ನಿಲುವು ಎಂದು ರಾಹುಲ್ ಹೇಳುತ್ತಿದ್ದಾರೆ. ಆದರೆ ಅವರಿಗೆ ಶಬರಿಮಲೆ ಮತ್ತು ತಂತ್ರಿ ಕುಟುಂಬದೊಂದಿಗೆ ಯಾವುದೇ ಸಂಬಂಧ ಇಲ್ಲ.
ಅವರ ಅಭಿಪ್ರಾಯ, ನಿಲುವುಗಳನ್ನು ನಾವು ಬೆಂಬಲಿಸುತ್ತಿಲ್ಲ.ದೇವಾಲಯದಲ್ಲಿ ರಕ್ತದ ಹನಿ ಬೀಳಿಸುವ ರಾಹುಲ್ ಅವರ ಯೋಜನೆಯನ್ನು ನಾವು ವಿರೋಧಿಸುತ್ತೇವೆ. ದೇವಾಲಯದ ನಂಬಿಕೆ, ವಿಧಿ ವಿಧಾನಗಳನ್ನು ರಕ್ಷಿಸುವ ಹೊಣೆ ನಮ್ಮದು. ಅದರಿಂದ ತಂತ್ರಿ ಕುಟುಂಬ ಹಿಂದೆ ಸರಿಯುವುದಿಲ್ಲ. ಆದರೆ ಈ ನಂಬಿಕೆಯ ಹೆಸರಿನಲ್ಲಿ ಸಂಘರ್ಷವನ್ನುಂಟು ಮಾಡುವುದು ಸರಿಯಲ್ಲ.
ದೇವಸ್ವಂ ಮಂಡಳಿ ಜತೆ ನಾವು ಉತ್ತಮ ಬಾಂಧವ್ಯ ಹೊಂದಿದ್ದೇವೆ.ಮುಖ್ಯಮಂತ್ರಿಯವರ ಭಾಷಣದಿಂದಲೂ ನಮಗೆ ಬೇಸರವಾಗಿದೆ.ಸನ್ನಿಧಾನದಲ್ಲಿ ಶಾಂತಿ ಮತ್ತು ಭಕ್ತಿಯ ವಾತಾವರಣ ನೆಲೆಸಲಿಎಂದುಕಂದರಾರ್ ಮೋಹನರಾರು ತಂತ್ರಿ ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.