ADVERTISEMENT

ಮಹಿಳಾವಾದಿಗಳು ಶಬರಿಮಲೆಗೆ ಬಂದರೆ ಸುಳ್ಳು #MeToo ಆರೋಪಗಳು ಕೇಳಿ ಬರಬಹುದು

​ಪ್ರಜಾವಾಣಿ ವಾರ್ತೆ
Published 30 ಅಕ್ಟೋಬರ್ 2018, 11:05 IST
Last Updated 30 ಅಕ್ಟೋಬರ್ 2018, 11:05 IST
ರಾಹುಲ್ ಈಶ್ವರ್
ರಾಹುಲ್ ಈಶ್ವರ್   

ಕೊಚ್ಚಿ: ಮಹಿಳಾವಾದಿ ಹೆಂಗಸರು ಶಬರಿಮಲೆ ದೇಗುಲಕ್ಕೆ ಪ್ರವೇಶಿಸಿದರೆ ಅಲ್ಲಿ ಸುಳ್ಳು #MeTooಆರೋಪಗಳು ಕೇಳಿ ಬರುವ ಸಾಧ್ಯತೆಗಳಿವೆ ಎಂದು ಅಯ್ಯಪ್ಪ ಧರ್ಮಸೇನಾ ಅಧ್ಯಕ್ಷ ರಾಹುಲ್ ಈಶ್ವರ್ ಹೇಳಿದ್ದಾರೆ.
ಕೊಚ್ಚಿಯಲ್ಲಿ ಮಂಗಳವಾರ ಸುದ್ದಿಗೋಷ್ಠಿ ನಡೆಸಿದ ರಾಹುಲ್, ಲಕ್ಷೋಪಲಕ್ಷ ಅಯ್ಯಪ್ಪ ಭಕ್ತರು ನೈಷ್ಠಿಕ ಬ್ರಹ್ಮಚರ್ಯ ಸ್ವೀಕರಿಸಿ ಶಬರಿಮಲೆಗೆ ಬರುತ್ತಾರೆ.ಆ ನೂಕು ನುಗ್ಗಲಿನಲ್ಲಿ ಸನ್ನಿಧಾನಕ್ಕೆ ಮಹಿಳಾವಾದಿಗಳಾದ ಹೆಂಗಸರನ್ನು ಪ್ರವೇಶಿಸಲು ಬಿಟ್ಟರೆ ಸುಳ್ಳು ಮೀಟೂ ಆರೋಪಗಳು ಕೇಳಿಬರಬಹುದು.

ರಾಹುಲ್ ಈಶ್ವರ್ ವಿರುದ್ದ ಮೀಟೂ ಆರೋಪ ಕೇಳಿಬಂದಿದ್ದು, ಈ ಬಗ್ಗೆ ಪ್ರತಿಕ್ರಿಯಿಸುವುದಕ್ಕಾಗಿ ಸುದ್ದಿಗೋಷ್ಠಿ ಕರೆದಿದ್ದರು.
ನನ್ನ ವಿರುದ್ದ ಕೇಳಿಬಂದ ಮೀಟೂ ಆರೋಪಗಳು ನಿರಾಧಾರ. ಇದೇ ರೀತಿಯ ಆರೋಪಗಳು ಇನ್ನಷ್ಟು ಕೇಳಿ ಬರಬಹುದು.ಇದು ಶಬರಿಮಲೆ ಭಕ್ತರ ವಿರುದ್ಧ ಮಹಿಳಾವಾದಿಗಳು ನಡೆಸಿರುವ ಸಂಚು.ನಾನು ಮೀಟೂ ಅಭಿಯಾನವನ್ನು ಬೆಂಬಲಿಸುತ್ತೇನೆ. ಆದರೆ ವಿರೋಧಿಗಳ ತೇಜೋವಧೆಗಾಗಿ ಮೀಟೂ ದುರುಪಯೋಗ ಮಾಡುವುದು ಕೆಟ್ಟ ಪ್ರವೃತ್ತಿ ಎಂದು ರಾಹುಲ್ ಹೇಳಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ರಾಹುಲ್ ಅವರ ಅಜ್ಜಿ ದೇವಕಿಅಂತರ್ಜನಂ, ಅಮ್ಮ ಮಲ್ಲಿಕಾ ನಂಬೂದಿರಿ, ಪತ್ನಿ ದೀಪಾ, ವಕೀಲೆ ಶಾಂತಿ ಮಾಯಾದೇವಿ ಮೊದಲಾದವರು ಭಾಗಿಯಾಗಿದ್ದರು.

ADVERTISEMENT

ರಾಹುಲ್ ಈಶ್ವರ್ ತಮ್ಮ ಮೊಮ್ಮಗನಾಗಿದ್ದು, ಅವನು ದೈವಭಕ್ತ ಎಂದು ಅಜ್ಜಿ ದೇವಿಕಾ ಹೇಳಿದ್ದಾರೆ.ನನ್ನ ಪತಿ, ಶಬರಿಮಲೆಯಲ್ಲಿ ತಂತ್ರಿಯಾಗಿದ್ದ ಕಂದರಾರ್ ಮಹೇಶ್ವರರ್ ರಾಹುಲ್ ಈಶ್ವರ್ ಮೂಲಕ ನ್ಯಾಯಾಲಯದಲ್ಲಿನ ಪ್ರಕರಣಗಳನ್ನುದಾಖಲಿಸಿ ಜನರಿಗೆ ನ್ಯಾಯ ಒದಗಿಸುವ ಕಾರ್ಯ ಮಾಡಿದ್ದರು ಎಂದಿದ್ದಾರೆ ದೇವಕಿ.

ರಾಹುಲ್ ತಂತ್ರಿ ಕುಟುಂಬದ ಸದಸ್ಯ ಅಲ್ಲ ಎಂದು ಹೇಳಿ ದೇವಕಿ ಅಂತರ್ಜನ ಅವರ ಹಿರಿಯ ಮಗ, ಶಬರಿಮಲೆಯ ಮಾಜಿ ತಂತ್ರಿ ಕಂದರಾರ್ ಮೋಹನರ್ ಹೇಳಿಕೆ ನೀಡಿದ್ದರು.ಮಗನ ಮಗನಿಗೆ ಮಾತ್ರ ತಂತ್ರಿ ಸ್ಥಾನ ನೀಡುವ ಸಂಪ್ರದಾಯ ಕುಟುಂಬದಲ್ಲಿದ್ದು ಮಗಳ ಮಗನಿಗೆ ಈ ಸ್ಥಾನ ನೀಡಲಾಗುವುದಿಲ್ಲ ಎಂದು ಮೋಹನರ್ ಹೇಳಿದ್ದರು.ಕಂದರಾರ್ ಮೋಹನರ್ ಅವರ ಸಹೋದರಿ ಮಲ್ಲಿಕಾ ನಂಬೂದಿರಿ ಅವರ ಮಗನಾಗಿದ್ದಾನೆ ರಾಹುಲ್ ಈಶ್ವರ್.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.