ADVERTISEMENT

ಅಯ್ಯಪ್ಪಧರ್ಮ ಸೇನಾ ಮುಖ್ಯಸ್ಥ ರಾಹುಲ್‌ ಈಶ್ವರ್‌ ಬಂಧನ

ಶಬರಿಮಲೆ ಅಯ್ಯಪ್ಪಸ್ವಾಮಿ ದೇವಾಲಯಕ್ಕೆ ಮಹಿಳೆಯರ ಪ್ರವೇಶಕ್ಕೆ ವಿರೋಧ

​ಪ್ರಜಾವಾಣಿ ವಾರ್ತೆ
Published 28 ಅಕ್ಟೋಬರ್ 2018, 19:15 IST
Last Updated 28 ಅಕ್ಟೋಬರ್ 2018, 19:15 IST
ರಾಹುಲ್‌ ಈಶ್ವರ್
ರಾಹುಲ್‌ ಈಶ್ವರ್   

ತಿರುವನಂತಪುರ (ಪಿಟಿಐ): ಶಬರಿಮಲೆ ದೇವಸ್ಥಾನಕ್ಕೆ ಎಲ್ಲ ವಯೋಮಿತಿಯ ಮಹಿಳೆಯರ ಪ್ರವೇಶಕ್ಕೆ ಅನುಮತಿ ನೀಡಿರುವುದನ್ನು ಖಂಡಿಸಿ,ಉದ್ರೇಕಕಾರಿ ಹೇಳಿಕೆ ನೀಡಿದ ಆರೋಪದ ಮೇಲೆ ‘ಅಯ್ಯಪ್ಪ ಧರ್ಮಸೇನಾ’ ಅಧ್ಯಕ್ಷ ರಾಹುಲ್‌ ಈಶ್ವರ್‌ ಅವರನ್ನು ಪೊಲೀಸರು ಭಾನುವಾರ ಬಂಧಿಸಿದ್ದಾರೆ.

ಕೊಚ್ಚಿಯಿಂದ ಆಗಮಿಸಿದ ಪೊಲೀಸರ ತಂಡವು ಇಲ್ಲಿನ ಫ್ಲ್ಯಾಟ್‌ನಲ್ಲಿದ್ದ ಈಶ್ವರ್‌ ಅವರನ್ನು ಬಂಧಿಸಿದೆ. ಅಲ್ಲದೇ, ಈಶ್ವರ್‌ ವಿರುದ್ಧ ಐಪಿಸಿಯ ವಿವಿಧ ಕಲಂನ ಅಡಿಯಲ್ಲಿ ಪ್ರಕರಣಗಳನ್ನು ದಾಖಲಿಸಿದೆ.

ಕೊಚ್ಚಿಗೆ ಕರೆತಂದ ಬಳಿಕ ನ್ಯಾಯಾಧೀಶರ ಮುಂದೆ ಹಾಜರುಪಡಿಸಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.

ADVERTISEMENT

ಶಬರಿಮಲೆ ದೇವಸ್ಥಾನದ ತಂತ್ರಿ ಕುಟುಂಬದ ಸದಸ್ಯರಲ್ಲಿ ಒಬ್ಬರಾಗಿರುವ ಈಶ್ವರ್‌ ಅವರು ಕಳೆದ ವಾರ ಕೊಚ್ಚಿಯಲ್ಲಿ ನಡೆಸಿದ ಪತ್ರಿಕಾಗೋಷ್ಠಿಯಲ್ಲಿ ನೀಡಿದ ಹೇಳಿಕೆ ಸಾಕಷ್ಟು ವಿವಾದಕ್ಕೂ ಕಾರಣವಾಗಿತ್ತು.

ರಾಹುಲ್‌ ಹೇಳಿದ್ದೇನು ?

‘10ರಿಂದ 50 ವರ್ಷದ ಒಳಗಿನ ಮಹಿಳೆಯರು ಶಬರಿಮಲೆಯ ದೇವಾಲಯದ ಒಳಗೆ ಪ್ರವೇಶಿಸಲು ಯತ್ನಿಸದಂತೆ 20 ಅಯ್ಯಪ್ಪ ಭಕ್ತರು ದೇವಸ್ಥಾನದ ಆವರಣದಲ್ಲಿ ನೆರೆದಿದ್ದರು. ಮಹಿಳೆಯರು ಒಂದೊಮ್ಮೆ ದೇವಾಲಯದ ಒಳಗೆ ಪ್ರವೇಶಿಸಲು ಮುಂದಾಗಿದ್ದರೆ, ದೇವಸ್ಥಾನ ಆವರಣದಲ್ಲಿ ಕೈಕೊಯ್ದು ರಕ್ತ ಸ್ರವಿಸುತ್ತಿದ್ದರು. ಇದರಿಂದ ದೇವಸ್ಥಾನದ ಆವರಣ ಅಪವಿತ್ರವಾಗುತ್ತಿತ್ತು, ಶುದ್ಧೀಕರಣ ಆಚರಣೆಗಾಗಿ ದೇವಾಲಯವನ್ನು ಮೂರು ದಿನಗಳ ಕಾಲ ಆರ್ಚಕರು ಮುಚ್ಚುತ್ತಿದ್ದರು'.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.