ತಿರುವನಂತಪುರಂ: ತನ್ನ ವಿರುದ್ಧ ಕೇಳಿ ಬಂದಿರುವ #MeToo ಆರೋಪ ರಾಜಕೀಯ ಪ್ರೇರಿತ ಮತ್ತು ಮಹಿಳಾವಾದಿಗಳ ಸಂಚು ಎಂದು ಅಯ್ಯಪ್ಪಧರ್ಮ ಸೇನಾ ಮುಖ್ಯಸ್ಥ ರಾಹುಲ್ ಈಶ್ವರ್ ಹೇಳಿದ್ದಾರೆ.
ತಾನು ಮೀಟೂ ಅಭಿಯಾನವನ್ನು ಗೌರವಿಸುತ್ತೇನೆ.ಆದರೆ ಇಂಥಾ ಸುಳ್ಳು ಆರೋಪಗಳಿಂಗಾಗಿ ಮೀ ಟೂ ಅಭಿಯಾನದ ಉದ್ದೇಶ ದಿಕ್ಕು ತಪ್ಪುತ್ತದೆ.ನನ್ನ ವಿರುದ್ಧ ಕೇಳಿ ಬಂದ ಆರೋಪಕ್ಕೆ ನನ್ನ ಪತ್ನಿ, ಅಮ್ಮ, ಅಜ್ಜಿ ಪತ್ರಿಕಾಗೋಷ್ಠಿ ನಡೆಸಿ ಪ್ರತಿಕ್ರಿಯೆ ನೀಡುತ್ತಾರೆ ಎಂದಿದ್ದಾರೆ ರಾಹುಲ್.
ಯಾರಿಗೆ ಬೇಕಾದರೂ ಯಾರ ಮೇಲೆ ಆರೋಪ ಮಾಡಿಬಿಡಬಹುದು ಎಂಬುದು ದುಃಖದ ಸಂಗತಿ. 47 ವರ್ಷಗಳ ಹಿಂದೆ ಕಿರುಕುಳ ಮಾಡಿದ್ದಾರೆ ಎಂದು ಸಿನಿಮಾ ನಟ ಜಿತೇಂದ್ರ ವಿರುದ್ಧಆರೋಪ ಕೇಳಿಬಂದಿದೆ.ನನ್ನ ವಿರುದ್ಧದ ಆರೋಪ 15 ವರ್ಷದ ಹಿಂದಿನದ್ದು, ಯಾವ ವರ್ಷ ನಡೆದದ್ದು ಎಂಬುದ ಬಗ್ಗೆಯೇ ಅವರಿಗೆ ಸ್ಪಷ್ಟತೆ ಇಲ್ಲ.ಆ ಆರೋಪ ನಿರಾಧಾರ ಎಂದು ಹೇಳುವುದಾದರೂ ಹೇಗೆ?
ನಾಳೆ ನಮ್ಮ ಮನೆಯಲ್ಲಿ ಮಗನೋ, ಅಪ್ಪನೋ, ಸಹೋದರರ ವಿರುದ್ಧ ಇಂಥಾ ಸುಳ್ಳು ಆರೋಪಗಳು ಕೇಳಿ ಬರಬಹುದು.ಇದನ್ನು ಅಮ್ಮ, ಸಹೋದರಿಯರೂ ಯೋಚಿಸಬೇಕು. ತಮ್ಮ ನಿಲುವುಗಳ ವಿರುದ್ಧ ಇರುವವರನ್ನು ಕಟಕಟೆಯಲ್ಲಿ ನಿಲ್ಲಿಸುವುದಕ್ಕಾಗಿ ಮೀಟೂ ಆರೋಪ ಮಾಡಬಾರದು.ನನ್ನ ಮೇಲಿರುವ ಆರೋಪ ನಿರಾಧಾರ ಎಂದು ಫೇಸ್‌ಬುಕ್ ಲೈವ್ ವಿಡಿಯೊ ಮೂಲಕ ರಾಹುಲ್ ಪ್ರತಿಕ್ರಿಯಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.