ನವದೆಹಲಿ: ಲಡಾಖ್ ಹಾಗೂ ಉತ್ತರಾಖಂಡ ಗಡಿಯಲ್ಲಿ ಚೀನಾ ಭದ್ರತಾ ಪಡೆಗಳ ಅತಿಕ್ರಮಣವನ್ನು ಪ್ರಸ್ತಾಪಿಸುವ ಮೂಲಕ, ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ಅವರು ಕೇಂದ್ರ ಸರ್ಕಾರದ ವಿರುದ್ಧ ಮತ್ತೊಮ್ಮೆ ಭಾನುವಾರ ವಾಗ್ದಾಳಿ ನಡೆಸಿದರು.
2014ರ ಲೋಕಸಭಾ ಚುನಾವಣೆ ಪ್ರಚಾರದ ವೇಳೆ ಪ್ರಧಾನಿ ನರೇಂದ್ರ ಮೋದಿ ಹೇಳುತ್ತಿದ್ದ ‘56 ಇಂಚಿನ ಎದೆ’ ಹೇಳಿಕೆಗಳನ್ನು ಸಹ ಪ್ರಸ್ತಾಪಿಸಿದ ಅವರು, ಪ್ರಧಾನಿ ವಿರುದ್ಧವೂ ಟೀಕಾಪ್ರಹಾರ ಮಾಡಿದ್ದಾರೆ.
‘ಚೀನಾ ಪ್ಲಸ್ ಪಾಕಿಸ್ತಾನ ಪ್ಲಸ್ ಮಿಸ್ಟರ್ 56 ಇಂಚ್ ಎಂಬುದು ಭಾರತದ ಪ್ರದೇಶವನ್ನು ಚೀನಾ ಅತಿಕ್ರಮಣ ಮಾಡುತ್ತಿರುವುದರ ಹೆಚ್ಚಳ’ ಎಂದು ಅವರು ಹಿಂದಿಯಲ್ಲಿ ಟ್ವೀಟ್ ಮಾಡಿದ್ದಾರೆ. ಲಡಾಖ್ ಹಾಗೂ ಉತ್ತರಾಖಂಡ ಎಂಬ ಹ್ಯಾಷ್‌ಟ್ಯಾಗ್‌ಗಳನ್ನು ಹಂಚಿಕೊಂಡಿದ್ದಾರೆ.
ಚೀನಾದ ಪೀಪಲ್ಸ್ ಲಿಬರೇಷನ್ ಆರ್ಮಿಯ (ಪಿಎಲ್‌ಎ) 100ಕ್ಕೂ ಅಧಿಕ ಯೋಧರು ಆಗಸ್ಟ್ 30ರಂದು ಉತ್ತರಾಖಂಡದಬಾರಾಹೋತಿ ಸೆಕ್ಟರ್‌ಗೆ ಹೊಂದಿಕೊಂಡಿರುವ ವಾಸ್ತವ ನಿಯಂತ್ರಣ ರೇಖೆ (ಎಲ್‌ಎಸಿ) ಬಳಿ ಅತಿಕ್ರಮಣ ಮಾಡಿದ್ದರು. ಕೆಲ ಕಾಲ ಭಾರತದ ಗಡಿಯೊಳಗಿದ್ದ ಚೀನಾ ಯೋಧರು, ನಂತರ ಹಿಂದಿರುಗಿದ್ದರು.
ಘಟನೆ ಕುರಿತು ಈ ವರೆಗೆ ಕೇಂದ್ರ ಸರ್ಕಾರದಿಂದ ಅಧಿಕೃತ ಪ್ರತಿಕ್ರಿಯೆ ಹೊರಬಿದ್ದಿಲ್ಲ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.