ADVERTISEMENT

ರಾಹುಲ್‌ ಗಾಂಧಿ– ಸ್ಪೀಕರ್‌ ಓಂ ಬಿರ್ಲಾ ನಡುವೆ ‘ಜಟಾಪಟಿ’

​ಪ್ರಜಾವಾಣಿ ವಾರ್ತೆ
Published 1 ಜುಲೈ 2024, 16:34 IST
Last Updated 1 ಜುಲೈ 2024, 16:34 IST
ರಾಹುಲ್‌ ಗಾಂಧಿ
ರಾಹುಲ್‌ ಗಾಂಧಿ   

ನವದೆಹಲಿ: ವಿರೋಧ ಪಕ್ಷದ ನಾಯಕರಾಗಿ ಲೋಕಸಭೆಯಲ್ಲಿ ಮಾತನಾಡುವ ವೇಳೆ ರಾಹುಲ್‌ ಗಾಂಧಿ ಮತ್ತು ಸ್ಪೀಕರ್‌ ಓಂ ಬಿರ್ಲಾ ನಡುವೆ ಸೋಮವಾರ ಹಲವು ಸಲ ‘ಜಟಾಪಟಿ’ ನಡೆಯಿತು. ಒಂದು ಹಂತದಲ್ಲಿ ರಾಹುಲ್‌ ಅವರು ತಮ್ಮ ಮೈಕ್‌ ಏಕೆ ಆಫ್‌ ಆಗಿದೆ ಎಂದು ಪ್ರಶ್ನಿಸಿದರಲ್ಲದೆ, ‘ನಿಷ್ಪಕ್ಷಪಾತ’ದಿಂದ ಇರುವಂತೆ ಸ್ಪೀಕರ್‌ ಅವರನ್ನು ಕೇಳಿಕೊಂಡರು.

ತಮ್ಮ ಭಾಷಣ ಮುಕ್ತಾಯದ ಹಂತಕ್ಕೆ ಬಂದಾಗ ರಾಹುಲ್‌ ಅವರು, ‘ಸ್ಪೀಕರ್‌ ಆಗಿ ಆಯ್ಕೆಯಾದ ಬಿರ್ಲಾ ಅವರನ್ನು ಅಭಿನಂದಿಸಲು ನಾನು ಮತ್ತು ಪ್ರಧಾನಿ ಮೋದಿ ಅವರು ಜತೆಯಾಗಿ ಪೀಠದ ಬಳಿ ಹೋದೆವು. ಸ್ಪೀಕರ್‌ ಅವರು ನಮ್ಮಿಬ್ಬರ ಕೈಕುಲುಗಿದರು’ ಎಂದರು.

‘ನಾನು ನಿಮ್ಮ ಕೈ ಕುಲುಕಿದಾಗ ನೀವು ನೇರವಾಗಿ ನಿಂತಿದ್ದೀರಿ. ಆದರೆ ಮೋದಿ ಅವರು ಕೈಲುಕಿದಾಗ ನೀವು ಸ್ವಲ್ಪ ಮುಂದಕ್ಕೆ ಬಾಗಿದಿರಿ’ ಎಂದು ರಾಹುಲ್‌ ಹೇಳಿದರು. ಕಾಂಗ್ರೆಸ್‌ ಮುಖಂಡನ ಈ ಮಾತಿಗೆ ಆಡಳಿತ ಪಕ್ಷದ ಸಂಸದರು ಆಕ್ಷೇಪ ವ್ಯಕ್ತಪಡಿಸಿದರು. 

ADVERTISEMENT

ಅವರ ಮಾತಿಗೆ ಪ್ರತಿಕ್ರಿಯಿಸಿದ ಸ್ಪೀಕರ್, ‘ಹಿರಿಯರನ್ನು ಭೇಟಿಯಾದಾಗ ಅವರಿಗೆ ತಲೆಬಾಗಬೇಕು ಅಥವಾ ಪಾದಗಳನ್ನು ಮುಟ್ಟಬೇಕು ಎಂಬುದನ್ನು ನನ್ನ ಸಂಸ್ಕೃತಿ ಕಲಿಸುತ್ತದೆ’ ಎಂದು ತಿರುಗೇಟು ನೀಡಿದರು.

‘ನನ್ನ ಭಾಷಣದ ನಡುವೆ ಮೈಕ್ ಆಫ್ ಮಾಡಿದ್ದು ಏಕೆ’ ಎಂದು ರಾಹುಲ್‌ ಪ್ರಶ್ನಿಸಿದರು. ಅದಕ್ಕೆ ಬಿರ್ಲಾ, ನಿಮ್ಮ ಸರದಿ ಬಂದಾಗ ಮಾತನಾಡಲು ಅವಕಾಶ ನೀಡಲಾಗುವುದು ಎಂದು ಪ್ರತಿಕ್ರಿಯಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.