ADVERTISEMENT

ಜಾತಿಗಣತಿ ಭಾರತದ ಎಕ್ಸ್‌ರೇ: ರಾಹುಲ್ ಗಾಂಧಿ ಪ್ರತಿಪಾದನೆ

ಭಾರತ್ ಜೋಡೊ ನ್ಯಾಯಯಾತ್ರೆ ವೇಳೆ ರಾಹುಲ್ ಗಾಂಧಿ ಪ್ರತಿಪಾದನೆ

​ಪ್ರಜಾವಾಣಿ ವಾರ್ತೆ
Published 16 ಮಾರ್ಚ್ 2024, 16:05 IST
Last Updated 16 ಮಾರ್ಚ್ 2024, 16:05 IST
ಮಹಾರಾಷ್ಟ್ರದ ಮುಂಬೈನಲ್ಲಿ ರಾಹುಲ್ ಗಾಂಧಿ ಮತ್ತು ಪ್ರಿಯಾಂಕಾ ಗಾಂಧಿ ಅವರು ಭಾರತ್ ಜೋಡೊ ನ್ಯಾಯಯಾತ್ರೆಯ ರೋಡ್ ಶೋನಲ್ಲಿ ಭಾಗವಹಿಸಿದರು –ಎಎಫ್‌ಪಿ ಚಿತ್ರ
ಮಹಾರಾಷ್ಟ್ರದ ಮುಂಬೈನಲ್ಲಿ ರಾಹುಲ್ ಗಾಂಧಿ ಮತ್ತು ಪ್ರಿಯಾಂಕಾ ಗಾಂಧಿ ಅವರು ಭಾರತ್ ಜೋಡೊ ನ್ಯಾಯಯಾತ್ರೆಯ ರೋಡ್ ಶೋನಲ್ಲಿ ಭಾಗವಹಿಸಿದರು –ಎಎಫ್‌ಪಿ ಚಿತ್ರ   

ಮುಂಬೈ: ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ಅವರು ಕೈಗೊಂಡಿರುವ 6,700 ಕಿ.ಮೀ ವ್ಯಾಪ್ತಿಯ 66 ದಿನಗಳ ‘ಭಾರತ್ ಜೋಡೊ ನ್ಯಾಯ ಯಾತ್ರೆ’ಯು ಶನಿವಾರ  ಸಂಜೆ ಧಾರವಿಯಲ್ಲಿ ಸಮಾಪ್ತಿಗೊಂಡಿತು. ಇದಕ್ಕೂ ಮುನ್ನ ರಾಹುಲ್ ಗಾಂಧಿ ಮತ್ತು ಪ್ರಿಯಾಂಕಾ ಗಾಂಧಿ ವಾದ್ರಾ ಅವರು ತೆರೆದ ಕಾರಿನಲ್ಲಿ ಮುಂಬೈನ ಪ್ರತಿ ರಸ್ತೆಗಳಲ್ಲಿ ಸಂಚರಿಸಿದರು. 

ಆ ಬಳಿಕ ಧಾರಾವಿಯಲ್ಲಿ ಪಕ್ಷದ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದ ರಾಹುಲ್, ‘ಧಾರಾವಿಯು ನಿಜವಾದ ಮೇಕ್ ಇನ್ ಇಂಡಿಯಾ ಆಗಿದೆ. ಭಾರತದ ಎಕ್ಸ್‌ರೇ ಮತ್ತು ಎಂಆರ್‌ಐ ಆಗಿರುವ ಜಾತಿಗಣತಿಯನ್ನು ನಡೆಸುವುದಾಗಿ ನಾವು ಭರವಸೆ ನೀಡಿದ್ದೇವೆ’ ಎಂದು ಹೇಳಿದರು. ಆಗ ಕಾರ್ಯಕ್ರಮದಲ್ಲಿ ನೆರೆದಿದ್ದ ಜನಸಮೂಹದಿಂದ ಕರತಾಡನದ ದನಿ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT