ADVERTISEMENT

ಮೋದಿ 'ಪ್ರೈಮ್ ಟೈಮ್ ಮಿನಿಸ್ಟರ್': ರಾಹುಲ್ ಗಾಂಧಿ

​ಪ್ರಜಾವಾಣಿ ವಾರ್ತೆ
Published 22 ಫೆಬ್ರುವರಿ 2019, 12:31 IST
Last Updated 22 ಫೆಬ್ರುವರಿ 2019, 12:31 IST
   

ನವದೆಹಲಿ: ಫೆ. 14ರಂದುಜಮ್ಮು ಕಾಶ್ಮೀರದ ಪುಲ್ವಾಮ ದಾಳಿ ನಡೆದಾಗ ಪ್ರಧಾನಿ ನರೇಂದ್ರ ಮೋದಿ ಉತ್ತರಾಖಂಡದ ಜಿಮ್ ಕಾರ್ಬೆಟ್ ರಾಷ್ಟ್ರೀಯ ಉದ್ಯಾನದಲ್ಲಿ ಜಾಹೀರಾತು ಚಿತ್ರವೊಂದರ ಶೂಟಿಂಗ್‍ನಲ್ಲಿ ಬ್ಯುಸಿಯಾಗಿದ್ದರು. ಅವರು ಪ್ರೈಮ್ ಟೈಮ್ ಮಿನಿಸ್ಟರ್. ಆತ್ಮಾಹುತಿ ದಾಳಿಯಲ್ಲಿ 40 ಯೋಧರು ಹುತಾತ್ಮರಾಗಿ ದೇಶದ ಜನರು ದುಃಖಿಸುತ್ತಿದ್ದರೆ ಪ್ರಧಾನಿ ಮೋದಿ ಕ್ಯಾಮೆರಾ ಮುಂದೆ ನಗುತ್ತಾ ನಿಂತಿದ್ದರು ಎಂದು ರಾಹುಲ್ ಗಾಂಧಿ ಟೀಕಿಸಿದ್ದಾರೆ.

ಪುಲ್ವಾಮ ಉಗ್ರದಾಳಿಯಲ್ಲಿ 40 ಯೋಧರು ಹುತಾತ್ಮರಾಗಿದ್ದಾರೆ ಎಂದು ತಿಳಿದ ಮೂರು ಗಂಟೆ ನಂತರವೂ ಪ್ರೆಮ್ ಟೈಮ್ ಮಿನಿಸ್ಟರ್ ಶೂಟಿಂಗ್ ಮುಂದುವರಿಸಿದ್ದರು.ಹುತಾತ್ಮರ ಕುಟುಂಬದವರ ದುಃಖದಲ್ಲಿ ದೇಶ ಭಾಗಿಯಾಗಿದ್ದರೆ, ಪ್ರಧಾನಿ ನಗುತ್ತಾ ಫೋಟೊಶೂಟ್ ಮಾಡುತ್ತಿದ್ದರು ಎಂದು ರಾಹುಲ್ ಟ್ವೀಟ್ ಮಾಡಿದ್ದಾರೆ. ಈ ಟ್ವೀಟ್‍ನಲ್ಲಿ ರಾಹುಲ್ PhotoShootSarkar ಎಂಬ ಹ್ಯಾಶ್ ಟ್ಯಾಗ್ ಬಳಸಿದ್ದಾರೆ.

ರಾಹುಲ್ ಟ್ವೀಟ್‍ಗೆ ಬಿಜೆಪಿ ಪ್ರತಿಕ್ರಿಯೆ

ಮೋದಿ ವಿರುದ್ಧ ರಾಹುಲ್ ಟ್ವೀಟ್ ಮಾಡಿದ ಬೆನ್ನಲ್ಲೇಬಿಜೆಪಿ ಸಂಸದೆ ಮೀನಾಕ್ಷಿ ಲೇಖಿ ರಾಹುಲ್‍ಗೆಪ್ರತಿಕ್ರಿಯೆ ನೀಡಿದ್ದಾರೆ.

ಪುಲ್ವಾಮ ದಾಳಿ ನಡೆದಾಗ ಪ್ರಧಾನಿ ಡಿಸ್ಕವರಿ ಚಾನೆಲ್‍ನ ಶೂಟಿಂಗ್‍ನಲ್ಲಿ ಬ್ಯುಸಿಯಾಗಿದ್ದರು ಎಂಬ ಪ್ರಚಾರ ನಡೆಯುತ್ತಿದೆ, ಆದರೆ ಮೋದಿಪ್ರತಿಕ್ಷಣದ ಅಪ್‌ಡೇಟ್‍ಗಳನ್ನು ಪಡೆಯುತ್ತಿದ್ದರು.ಇದಕ್ಕೆ ಸಂಬಂಧಿಸಿದ ಅಧಿಕಾರಿಗಳೊಂದಿಗೆ ಮಾತನಾಡುತ್ತಿದ್ದರು ಎಂದು ಮೀನಾಕ್ಷಿ ಹೇಳಿದ್ದಾರೆ.

ಮುಂಬೈನಲ್ಲಿ ಭಯೋತ್ಪಾದನಾ ದಾಳಿ ನಡೆದಾಗ ರಾಹುಲ್ ಏನು ಮಾಡಿದ್ದರು ಎಂಬುದಕ್ಕೆ ಇಲ್ಲಿದೆ ಸಾಕ್ಷ್ಯ ಎಂದು ಲೇಖಿ, ಪತ್ರಿಕಾ ವರದಿಯೊಂದನ್ನುಟ್ವೀಟಿಸಿದ್ದಾರೆ.

ಏತನ್ಮಧ್ಯೆ, ರಾಹುಲ್ ಮೋದಿ ಬಗ್ಗೆ ಹೇಳುತ್ತಿರುವುದು ಸುಳ್ಳು. ಮೋದಿಯವರ ಈ ಫೋಟೊ ಬೆಳಗ್ಗೆ ಕ್ಲಿಕ್ಕಿಸಿದ್ದು ಎಂದು ಬಿಜೆಪಿ ಮೂಲಗಳು ಹೇಳಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.