ADVERTISEMENT

Wayanad Landslides | ಪುನರ್ವಸತಿಗೆ ತಿಂಗಳ ವೇತನ ದೇಣಿಗೆ ನೀಡಿದ ರಾಹುಲ್ ಗಾಂಧಿ

ಪಿಟಿಐ
Published 4 ಸೆಪ್ಟೆಂಬರ್ 2024, 9:29 IST
Last Updated 4 ಸೆಪ್ಟೆಂಬರ್ 2024, 9:29 IST
<div class="paragraphs"><p>ವಯನಾಡ್ ಭೂಕುಸಿತ, ರಾಹುಲ್ ಗಾಂಧಿ</p></div>

ವಯನಾಡ್ ಭೂಕುಸಿತ, ರಾಹುಲ್ ಗಾಂಧಿ

   

 (ಪಿಟಿಐ ಚಿತ್ರಗಳು)

ವಯನಾಡ್: ಕೇರಳದ ವಯನಾಡ್ ಜಿಲ್ಲೆಯಲ್ಲಿ ಇತ್ತೀಚೆಗೆ ಸಂಭವಿಸಿದ್ದ ಭಾರಿ ಭೂಕುಸಿತದಲ್ಲಿ ಅಪಾರ ನಾಶ-ನಷ್ಟ ಸಂಭವಿಸಿತ್ತು. ಭೂಕುಸಿತದಿಂದಾಗಿ ಸಂತ್ರಸ್ತರಾಗಿರುವ ಜನರಿಗೆ ಪನರ್ವಸತಿ ಕಲ್ಪಿಸುವ ಕಾರ್ಯಗಳಿಗಾಗಿ ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಒಂದು ತಿಂಗಳ ವೇತನ ದೇಣಿಗೆಯಾಗಿ ನೀಡಿದ್ದಾರೆ.

ADVERTISEMENT

ಈ ಕುರಿತು ಸಾಮಾಜಿಕ ಮಾಧ್ಯಮ 'ಎಕ್ಸ್‌'ನಲ್ಲಿ ರಾಹುಲ್ ಗಾಂಧಿ ಮಾಹಿತಿ ಹಂಚಿಕೊಂಡಿದ್ದಾರೆ.

ಕೇರಳ ಪ್ರದೇಶ ಕಾಂಗ್ರೆಸ್ ಸಮಿತಿ (ಕೆಪಿಸಿಸಿ) ಖಾತೆಗೆ ರಾಹುಲ್ ಗಾಂಧಿ ಅವರು ₹2.3 ಲಕ್ಷ ಹಸ್ತಾಂತರಿಸಿದ್ದಾರೆ.

'ವಯನಾಡಿನ ನಮ್ಮ ಸೋದರ, ಸೋದರಿಯರು ಭಯಾನಕ ದುರಂತವನ್ನು ಎದುರಿಸಿದ್ದಾರೆ. ಅವರು ಚೇತರಿಸಿಕೊಳ್ಳಲು ನಮ್ಮ ಬೆಂಬಲದ ಅಗತ್ಯವಿದೆ. ಸಂತ್ರಸ್ತರ ಪರಿಹಾರ ಮತ್ತು ಪುನರ್ವಸತಿ ಕಾರ್ಯಗಳಿಗಾಗಿ ಸಹಾಯ ಮಾಡುವ ನಿಟ್ಟಿನಲ್ಲಿ ನನ್ನ ಒಂದು ತಿಂಗಳ ಸಂಬಳವನ್ನು ನೀಡಿದ್ದೇನೆ' ಎಂದು ಅವರು ತಿಳಿಸಿದ್ದಾರೆ.

ಈ ವೇಳೆ ದೇಶದ ನಿವಾಸಿಗಳು ತಮ್ಮಿಂದಾಗುವ ಸಹಾಯ ಮಾಡಬೇಕೆಂದು ರಾಹುಲ್ ಗಾಂಧಿ ವಿನಂತಿಸಿದ್ದಾರೆ. ನಿಮ್ಮ ಸಹಾಯವು ದೊಡ್ಡ ಬದಲಾವಣೆಯನ್ನು ತರಲಿದೆ ಎಂದು ಅವರು ತಿಳಿಸಿದ್ದಾರೆ.

ವಯನಾಡ್ ದೇಶದ ಸುಂದರ ಪ್ರದೇಶವಾಗಿದ್ದು, ನಾವೆಲ್ಲರೂ ಒಟ್ಟಾಗಿ ಸಂತ್ರಸ್ತರ ಪುನರ್ವಸತಿ ಕಾರ್ಯಕ್ಕೆ ನೆರವಾಗಬೇಕು ಎಂದು ಅವರು ಹೇಳಿದ್ದಾರೆ.

ಕಾಂಗ್ರೆಸ್‌ನ 'ಸ್ಟ್ಯಾಂಡ್ ವಿತ್ ವಯನಾಡ್' ಆ್ಯಪ್ ಮೂಲಕವು ನೀವು ದೇಣಿಗೆ ನೀಡಬಹುದು ಎಂದು ರಾಹುಲ್ ತಿಳಿಸಿದ್ದಾರೆ.

ವಯನಾಡ್‌ನಲ್ಲಿ ಜುಲೈ 30ರಂದು ಸಂಭವಿಸಿದ್ದ ಭೂಕುಸಿತದಲ್ಲಿ 200ಕ್ಕೂ ಅಧಿಕ ಮಂದಿ ಮೃತಪಟ್ಟಿದ್ದು, ಈಗಲೂ 78 ಮಂದಿ ನಾಪತ್ತೆಯಾಗಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.