ADVERTISEMENT

ಮೊಬೈಲ್‍ನಲ್ಲಿ ಅಶ್ಲೀಲ ಚಿತ್ರ ನೋಡುತ್ತಿರುವ ರಾಹುಲ್ ಗಾಂಧಿ, ಇದು ಫೇಕ್ ಫೋಟೊ!

​ಪ್ರಜಾವಾಣಿ ವಾರ್ತೆ
Published 1 ಆಗಸ್ಟ್ 2018, 11:35 IST
Last Updated 1 ಆಗಸ್ಟ್ 2018, 11:35 IST
   

ಬೆಂಗಳೂರು: ಫೋಟೊ ಕಭೀ ಝೂಟ್ ನಹೀ ಬೋಲ್ತೀ..ದೇಖ್‍ಲೋ ರಾಹುಲ್ ಗಾಂಧಿ ಕ್ಯಾ ಕರ್ ರಹಾ ಹೈ (ಚಿತ್ರಗಳು ಸುಳ್ಳು ಹೇಳುವುದಿಲ್ಲ, ನೋಡಿ ರಾಹುಲ್ ಏನು ನೋಡುತ್ತಿದ್ದಾನೆ) ಎಂಬ ಶೀರ್ಷಿಕೆಯೊಂದಿಗೆ ರಾಹುಲ್ ಗಾಂಧಿಯ ಫೋಟೊವೊಂದು ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿದೆ.ಕೈಯಲ್ಲಿರುವ ಮೊಬೈಲ್ ಸ್ಕ್ರೀನ್ ನಲ್ಲಿ ಬಿಕಿನಿ ತೊಟ್ಟ ಮಹಿಳೆಯಚಿತ್ರ, ಅದನ್ನು ರಾಹುಲ್ ನೋಡುತ್ತಿರುವ ಫೋಟೊ ಅದಾಗಿದೆ.

ಯೋಗಿ ಸರ್ಕಾರ್ ಎಂಬ ಫೇಸ್ ಬುಕ್ ಪುಟದಲ್ಲಿ ಈ ಫೋಟೊ ಜುಲೈ 30ರಂದು ಅಪ್‍ಲೋಡ್ ಆಗಿದ್ದು, ಇಲ್ಲಿವರೆಗೆ 11 ಸಾವಿರ ಬಾರಿಶೇರ್ ಆಗಿದೆ.130,000 ಸದಸ್ಯರಿರುವ ಮೋದಿ ಮಿಷನ್ 2019 ಎಂಬ ಫೇಸ್‍ಬುಕ್ ಪುಟದಲ್ಲಿಯೂ ಈ ಫೋಟೊ ಶೇರ್ ಆಗಿದೆ. ಟ್ವಿಟರ್‌ನಲ್ಲಿಯೂ ಫೋಟೊ ವೈರಲ್ ಆಗಿತ್ತು.

ಗುಜರಾತ್‍ನ ಜಮ್ನಾನಗರ್‍‍ನಲ್ಲಿರುವ ಬಿಜೆಪಿ ಐಟಿ ಸೆಲ್ ಸಹ ಸಂಚಾಲಕ ಮನೀಶ್ ಪಾಂಡೆ ಈ ಚಿತ್ರವನ್ನು ಟ್ವೀಟ್ ಮಾಡಿದ್ದರು.ಪ್ರಧಾನಿ ನರೇಂದ್ರ ಮೋದಿ, ಪೀಯುಶ್ ಗೋಯಲ್, ನಿರ್ಮಲಾ ಸೀತಾರಾಮನ್ ಮೊದಲಾದವರು ಮನೀಶ್ ಪಾಂಡೆಯನ್ನು ಟ್ವಿಟರ್‌ನಲ್ಲಿ ಫಾಲೋ ಮಾಡುತ್ತಿದ್ದಾರೆ.

ADVERTISEMENT

ಫೇಕ್ಫೋಟೊ!
ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿರುವ ಈ ಫೋಟೊ ಫೇಕ್. ಈ ಫೋಟೊದ ಸತ್ಯಾಸತ್ಯತೆಯನ್ನು ವರದಿ ಮಾಡಿರುವ ಆಲ್ಟ್ ನ್ಯೂಸ್ ಇದು ಫೋಟೊಶಾಪ್ ಮಾಡಿದ ಫೋಟೊ ಎಂದು ಹೇಳಿದೆ.ಗೂಗಲ್ ರಿವರ್ಸ್ ಇಮೇಜ್ ನಲ್ಲಿ ಸರ್ಚ್ ಮಾಡಿದಾಗ ರಾಹುಲ್ ಕೈಯಲ್ಲಿ ಮೊಬೈಲ್ ಇರುವ ಯಾವುದೇ ಫೋಟೊ ಪತ್ತೆಯಾಗಿಲ್ಲ.

ನವಂಬರ್ 2016ರಲ್ಲಿ ನೋಟು ರದ್ದತಿ ಆದಾಗ ಹಳೆ ನೋಟುಗಳನ್ನು ಬದಲಿಸಲು ರಾಹುಲ್ ನವದೆಹಲಿಯ ಬ್ಯಾಂಕ್‍ಗೆ ಬಂದಿದ್ದರು. ಆಗ ಕೈಯಲ್ಲಿ ನೋಟು ಹಿಡಿದುಕೊಂಡಿರುವ ಫೋಟೊವನ್ನು ಇಲ್ಲಿ ಫೋಟೊಶಾಪ್ ಮಾಡಿ ಹರಿಬಿಡಲಾಗಿದೆ. ಕೈಯಲ್ಲಿ ಕರೆನ್ಸಿ ನೋಟು ಹಿಡಿದಿರುವ ರಾಹುಲ್ ಫೋಟೊgetty imagesನಲ್ಲಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.