ನವದೆಹಲಿ: ಕೇದಾರನಾಥದಲ್ಲಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಹಾಗೂ ಬಿಜೆಪಿಯ ಸಂಸದ ವರುಣ್‌ಗಾಂಧಿ ಮಂಗಳವಾರ ಭೇಟಿಯಾದರು ಎಂದು ಮೂಲಗಳು ತಿಳಿಸಿವೆ.
ಸಾರ್ವಜನಿಕವಾಗಿ ಅಪರೂಪಕ್ಕೆ ಒಟ್ಟಿಗೆ ಕಾಣಿಸಿಕೊಳ್ಳುವ ಸಹೋದರರ ಭೇಟಿಯು, ವರುಣ್ ಗಾಂಧಿಯ ರಾಜಕೀಯ ಭವಿಷ್ಯದ ಬಗ್ಗೆ ಕೆಲವು ಊಹಾಪೋಹಗಳನ್ನು ಸೃಷ್ಟಿಸಿದೆ.
ಅಲ್ಪ ಸಮಯದಲ್ಲೇ ವರುಣ್ ಮಗಳನ್ನೂ ಭೇಟಿಯಾದ ರಾಹುಲ್ ಸಂತೋಷ ವ್ಯಕ್ತಪಡಿಸಿದರು.
‘ಸಹೋದರರಿಬ್ಬರರು ಸದಾ ಭೇಟಿಯಾಗದಿದ್ದರೂ, ತಮ್ಮ ನಡುವೆ ಉತ್ತಮ ಬಾಂಧವ್ಯ ಹೊಂದಿದ್ದಾರೆ. ಈ ಭೇಟಿಯ ವೇಳೆ ಯಾವುದೇ ರಾಜಕೀಯ ಚರ್ಚೆ ನಡೆದಿಲ್ಲ’ ಎಂದು ಮೂಲಗಳು ಹೇಳಿವೆ.
ರಾಹುಲ್‌ಗಾಂಧಿ ಮೂರು ದಿನದಿಂದಲೂ ಕೇದಾರನಾಥದಲ್ಲಿದ್ದಾರೆ. ವರುಣ್‌ಗಾಂಧಿ ತಮ್ಮ ಕುಟುಂಬದೊಂದಿಗೆ ಶಿವನ ದೇಗುಲಕ್ಕೆ ಮಂಗಳವಾರ ಭೇಟಿ ನೀಡಿದ್ದರು.
ಸಂಜಯ್–ಮನೇಕಾ ಗಾಂಧಿಯ ಪುತ್ರರಾಗಿರುವ ವರುಣ್ ಗಾಂಧಿ ಈಚೆಗೆ ಬಿಜೆಪಿಯ ಪ್ರಮುಖ ಸಭೆಗಳಿಂದ ದೂರ ಉಳಿದಿದ್ದಾರೆ. ಕೆಲವೊಂದು ಬಾರಿ ಪಕ್ಷದ ನಿಲುವಿಗೆ ವಿರುದ್ಧವಾದ ಹೇಳಿಕೆಗಳನ್ನೂ ನೀಡಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.