ADVERTISEMENT

ಹಣ ನೀಡಿ ಲೇಖನ ಬರೆಸಿಕೊಳ್ಳುವ ರಾಹುಲ್‌ ಗಾಂಧಿ: ವಿಜಯವರ್ಗೀಯಾ ಆರೋಪ

ಪಿಟಿಐ
Published 2 ಅಕ್ಟೋಬರ್ 2023, 13:04 IST
Last Updated 2 ಅಕ್ಟೋಬರ್ 2023, 13:04 IST
<div class="paragraphs"><p>ಕೈಲಾಸ್‌ ವಿಜಯವರ್ಗೀಯಾ</p></div>

ಕೈಲಾಸ್‌ ವಿಜಯವರ್ಗೀಯಾ

   

ಚಿತ್ರ: ಪಿಟಿಐ

ಇಂದೋರ್‌: ತಮ್ಮ ಹೆಸರಿನಲ್ಲಿ ಲೇಖನಗಳನ್ನು ಬರೆಯುವಂತೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ, ಜನರಿಗೆ ಹಣ ನೀಡುತ್ತಾರೆ ಎಂದು ಬಿಜೆಪಿ ಪ್ರಧಾನ ಕಾರ್ಯದರ್ಶಿ ಕೈಲಾಸ್‌ ವಿಜಯವರ್ಗೀಯಾ ಆರೋಪಿಸಿದ್ದಾರೆ.

ADVERTISEMENT

‘ಸತ್ಯಂ ಶಿವಂ ಸುಂದರಂ‘ ಎಂಬ ತಲೆಬರಹದಡಿ ಹಿಂದೂ ಧರ್ಮದ ಕುರಿತು ವಿಶ್ಲೇಷತ್ಮಾಕ ಲೇಖನವೊಂದನ್ನು ಬರೆದಿರುವ ರಾಹುಲ್‌ ಗಾಂಧಿ, ಅದನ್ನು ತಮ್ಮ ಎಕ್ಸ್ ಖಾತೆಯಲ್ಲಿ ಹಂಚಿಕೊಂಡಿದ್ದರು. ಕೆಲ ದಿನಗಳ ಹಿಂದೆ ‘ಭಾರತ ಮಾತೆ ಭಾರತೀಯರೆಲ್ಲರ ಧ್ವನಿ’ ಎಂಬ ಲೇಖನವನ್ನೂ ಬರೆದಿದ್ದರು.

ರಾಹುಲ್‌ ಗಾಂಧಿ ಲೇಖನದ ಕುರಿತು ಪ್ರತಿಕ್ರಿಯಿಸಿದ ವಿಜಯವರ್ಗೀಯಾ , ’ಲೇಖನಗಳನ್ನು ಬರೆಯುವ ಸಲುವಾಗಿಯೇ ರಾಹುಲ್‌ ಗಾಂಧಿ ಹಣ ನೀಡಿ ಲೇಖಕರನ್ನು ನೇಮಿಸಿಕೊಂಡಿದ್ದಾರೆ’ ಎಂದರು.

ರಾಹುಲ್‌ ಗಾಂಧಿಯನ್ನು ಯಾರೂ ಗಂಭೀರವಾಗಿ ಪರಿಗಣಿಸದ ಕಾರಣ ಅವರ ಮಾತಾಗಲಿ, ಲೇಖನಗಳಾಗಲಿ ಸಮಾಜದಲ್ಲಿ ಯಾವುದೇ ಬದಲಾವಣೆ ತರುವುದಿಲ್ಲ ಎಂದು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.