ಮುಂಬೈ: ‘ನಮ್ಮ ಸರ್ಕಾರ ಅಧಿಕಾರಕ್ಕೆ ಬಂದರೆ ಜಾತಿ ಗಣತಿಯೊಂದಿಗೆ ಆರ್ಥಿಕ, ಹಣಕಾಸು ಸಮೀಕ್ಷೆಯನ್ನೂ ನಡೆಸುತ್ತೇವೆ. ಜತೆಗೆ ಅರಣ್ಯ ಹಕ್ಕು ಕಾಯ್ದೆಯನ್ನು ಬಲಗೊಳಿಸುತ್ತೇವೆ’ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಭರವಸೆ ನೀಡಿದ್ದಾರೆ.
ಭಾರತ್ ಜೋಡೊ ನ್ಯಾಯ ಯಾತ್ರೆಯ ಭಾಗವಾಗಿ ಮಹಾರಾಷ್ಟ್ರದ ನಂದೂರ್ಬಾರ್‌ನಲ್ಲಿ ಬುಡಕಟ್ಟು ಜನಾಂಗದವರನ್ನು ಉದ್ದೇಶಿಸಿ ರಾಹುಲ್ ಮಂಗಳವಾರ ಮಾತನಾಡಿದರು.
‘ಬುಡಕಟ್ಟು ಜನಾಂಗದವರು ಭಾರತದ ಜನಸಂಖ್ಯೆಯ ಶೇ 8ರಷ್ಟಿದ್ದಾರೆ. ಅಭಿವೃದ್ಧಿಯಲ್ಲಿ ಅವರು ಅನುಪಾತದ ಪಾಲನ್ನು ಪಡೆಯುವಂತೆ ಕಾಂಗ್ರೆಸ್ ಮಾಡಲಿದೆ. ಜಾತಿಗಣತಿ, ಹಣಕಾಸು ಮತ್ತು ಆರ್ಥಿಕ ಸಮೀಕ್ಷೆ ಕೈಗೊಂಡರೆ ಇದೊಂದು ಕ್ರಾಂತಿಕಾರಿ ಹೆಜ್ಜೆಯಾಗಲಿದೆ. ಪ್ರತಿ ಜಾತಿಯ ಜನಸಂಖ್ಯೆಯ ಖಚಿತ ಅಂಕಿ ಅಂಶವನ್ನು ತೆರೆದಿಡಲಿದ್ದೇವೆ’ ಎಂದರು.
ಅರಣ್ಯ ಹಕ್ಕು ಕಾಯಿದೆ ಅಥವಾ ಭೂಸ್ವಾಧೀನ ಕಾಯ್ದೆಯಂತಹ ಕಾಯ್ದೆಗಳನ್ನು ಬಿಜೆಪಿ ದುರ್ಬಲಗೊಳಿಸಿದೆ. ನಾವು ಅವುಗಳನ್ನು ಬಲಪಡಿಸುವುದು ಮಾತ್ರವಲ್ಲದೆ ಆದಿವಾಸಿಗಳ ಹಕ್ಕುಗಳನ್ನು ಒಂದು ವರ್ಷದೊಳಗೆ ಇತ್ಯರ್ಥಪಡಿಸುತ್ತೇವೆ ಎಂದು ಅವರು ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.