ADVERTISEMENT

ಹಿಂಸಾಚಾರ ಪೀಡಿತ ಮಣಿಪುರಕ್ಕೆ ರಾಹುಲ್ ಗಾಂಧಿ ಭೇಟಿ: ಸಂತ್ರಸ್ತರೊಂದಿಗೆ ಸಂವಾದ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 8 ಜುಲೈ 2024, 9:08 IST
Last Updated 8 ಜುಲೈ 2024, 9:08 IST
<div class="paragraphs"><p>ರಾಹುಲ್ ಗಾಂಧಿ ಅವರು ಜಿರಿಬಾಮ್‌ನಲ್ಲಿ ಸಂತ್ರಸ್ತರೊಂದಿಗೆ ಸಂವಾದ ನಡೆಸಿದರು</p></div>

ರಾಹುಲ್ ಗಾಂಧಿ ಅವರು ಜಿರಿಬಾಮ್‌ನಲ್ಲಿ ಸಂತ್ರಸ್ತರೊಂದಿಗೆ ಸಂವಾದ ನಡೆಸಿದರು

   

–ಕಾಂಗ್ರೆಸ್‌ ಎಕ್ಸ್‌ (ಟ್ವಿಟರ್) ಚಿತ್ರ

ಇಂಫಾಲ: ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್‌ ಗಾಂಧಿ ಅವರು ಜನಾಂಗೀಯ ಹಿಂಸಾಚಾರ ಪೀಡಿತ ಮಣಿಪುರಕ್ಕೆ ಭೇಟಿ ನೀಡಿದ್ದು, ಸಂತ್ರಸ್ತರೊಂದಿಗೆ ಸಂವಾದ ನಡೆಸಿದ್ದಾರೆ.

ADVERTISEMENT

ರಾಹುಲ್‌ ಗಾಂಧಿ ಇಂದು ಬೆಳಿಗ್ಗೆ ಅಸ್ಸಾಂನ ನಿರಾಶ್ರಿತರ ಶಿಬಿರಕ್ಕೆ ಭೇಟಿ ನೀಡಿದ್ದರು. ಅಲ್ಲಿನ ಸಂತ್ರಸ್ತರೊಂದಿಗೆ ಸಂವಾದ ನಡೆಸಿದ್ದರು. ಬಳಿಕ ರಸ್ತೆ ಮೂಲಕ ಮಣಿಪುರದ ಜಿರಿಬಾಮ್‌ಗೆ ತೆರಳಿದ್ದಾರೆ.

ರಾಹುಲ್ ಗಾಂಧಿ ಅವರು ಜಿರಿಬಾಮ್‌ನಲ್ಲಿ ಸಂತ್ರಸ್ತರೊಂದಿಗೆ ಸಂವಾದ ನಡೆಸುವ ಮೂಲಕ ಕಷ್ಟದ ಸಂದರ್ಭದಲ್ಲಿ ನಿಮ್ಮೊಂದಿಗೆ ನಾವಿದ್ದೇವೆ ಎಂದು ಬೆಂಬಲ ಸೂಚಿಸಿದ್ದಾರೆ ಎಂದು ಕಾಂಗ್ರೆಸ್‌ ‘ಎಕ್ಸ್‌’ನಲ್ಲಿ ಪೋಸ್ಟ್‌ ಮಾಡಿದ್ದಾರೆ.

ಹಿಂಸಾಚಾರ ನಡೆದ ಬಳಿಕ ರಾಹುಲ್ ಮೂರನೇ ಬಾರಿಗೆ ಮಣಿಪುರಕ್ಕೆ ಭೇಟಿ ನೀಡಿದ್ದಾರೆ. ಇದು ಜನರ ಪರವಾಗಿ ಅವರ ಅಚಲ ಬದ್ಧತೆಯನ್ನು ತೋರಿಸುತ್ತದೆ ಎಂದು ಕಾಂಗ್ರೆಸ್‌ ಹೇಳಿದೆ.

ಈಚೆಗೆ ಮಣಿಪುರದ ಜಿರಿಬಾಮ್‌ ಜಿಲ್ಲೆಯಲ್ಲಿ ಶಂಕಿತ ಬಂಡುಕೋರರು ಎರಡು ಪೊಲೀಸ್‌ ಉಪಠಾಣೆಗಳು, ಒಂದು ಅರಣ್ಯ ಇಲಾಖೆ ಕಚೇರಿ ಮತ್ತು 70 ಮನೆಗಳಿಗೆ ಬೆಂಕಿ ಹಚ್ಚಿರುವ ಪ್ರಕರಣ ನಡೆದಿತ್ತು.

ಜೂನ್‌ 6ರಂದು ಜಿರಿಬಾಮ್‌ ಜಿಲ್ಲೆಯಲ್ಲಿ ಬಂಡುಕೋರರು 59 ವರ್ಷ ವಯಸ್ಸಿನ ವ್ಯಕ್ತಿಯೊಬ್ಬರನ್ನು ಹತ್ಯೆಗೈದಿದ್ದರು. ಆ ಬಳಿಕ ಅಲ್ಲಿ ಹಿಂಸಾಚಾರ ನಡೆದಿತ್ತು. ಈ ಹಿನ್ನೆಲೆಯಲ್ಲಿ 239 ಜನರನ್ನು ಗ್ರಾಮಗಳಿಂದ ಸ್ಥಳಾಂತರಿಸಿ ಜಿರಿ ಪಟ್ಟಣದ ಕ್ರೀಡಾ ಸಂಕೀರ್ಣದಲ್ಲಿ ಇರಿಸಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.