ADVERTISEMENT

ಜಾತಿಗಣತಿ ಕುರಿತು ನ.5ರಂದು ತೆಲಂಗಾಣ ಕಾಂಗ್ರೆಸ್ ಸಭೆ: ರಾಹುಲ್ ಗಾಂಧಿ ಹಾಜರು

ಪಿಟಿಐ
Published 3 ನವೆಂಬರ್ 2024, 6:17 IST
Last Updated 3 ನವೆಂಬರ್ 2024, 6:17 IST
<div class="paragraphs"><p>ರಾಹುಲ್ ಗಾಂಧಿ</p></div>

ರಾಹುಲ್ ಗಾಂಧಿ

   

ಪಿಟಿಐ ಚಿತ್ರ

ಹೈದರಾಬಾದ್‌: ರಾಜ್ಯ ಸರ್ಕಾರದ ಜಾತಿಗಣತಿಗೆ ಸಂಬಂಧಿಸಿದಂತೆ ತೆಲಂಗಾಣ ಕಾಂಗ್ರೆಸ್‌ ಪಕ್ಷವು ನವೆಂಬರ್‌ 5ರಂದು ಆಯೋಜಿಸಲಿರುವ ಸಭೆಗೆ ರಾಹುಲ್‌ ಗಾಂಧಿ ಅವರು ಹಾಜರಾಗಲಿದ್ದಾರೆ.

ADVERTISEMENT

ತೆಲಂಗಾಣ ಪ್ರದೇಶ ಕಾಂಗ್ರೆಸ್ ಸಮಿತಿ (ಟಿಪಿಸಿಸಿ) ಅಧ್ಯಕ್ಷ ಬಿ. ಮಹೇಶ್‌ ಕುಮಾರ್‌ ಗೌಡ್‌ ಅವರು, ಜಾತಿಗಣತಿ ಕುರಿತು ಸಲಹೆಗಳನ್ನು ಸ್ವೀಕರಿಸುವ ಸಲುವಾಗಿ ರಾಜ್ಯ ಘಟಕವು ಸಭೆ ನಡೆಸಲಿದೆ ಎಂದು ಹೇಳಿದ್ದಾರೆ.

ಕಾಂಗ್ರೆಸ್‌ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರನ್ನೂ ಆಹ್ವಾನಿಸಿರುವುದಾಗಿ ಗೌಡ್‌ ತಿಳಿಸಿದ್ದಾರೆ.

ಕಳೆದ ವರ್ಷ ವಿಧಾನಸಭೆ ಚುನಾವಣೆ ಸಂದರ್ಭದಲ್ಲಿ ರಾಹುಲ್‌ ಗಾಂಧಿ ಅವರು ನೀಡಿದ್ದ ಭರವಸೆಯಂತೆ, ಸಾಮಾಜಿಕ, ಶೈಕ್ಷಣಿಕ, ಆರ್ಥಿಕ, ಉದ್ಯೋಗ, ರಾಜಕೀಯ ಹಾಗೂ ಜಾತಿ ಕುರಿತ ಸಮಗ್ರ ಸಮೀಕ್ಷೆ ನಡೆಸಲು ರಾಜ್ಯ ಸರ್ಕಾರವು ಸಿದ್ಧತೆ ಆರಂಬಿಸಿದೆ.

ತೆಲಂಗಾಣದ ಹಿಂದುಳಿದ ವರ್ಗಗಳ ಆಯೋಗವು ಜಾತಿ ಸಂಘಟನೆಗಳು ಹಾಗೂ ಇತರ ಮಧ್ಯಸ್ಥಗಾರರಿಂದ ಸಾರ್ವಜನಿಕವಾಗಿ ಸಲಹೆಗಳನ್ನು ಸ್ವೀಕರಿಸುತ್ತಿದೆ.

ನವೆಂಬರ್ 6 ರಂದು ಜಾತಿಗಣತಿ ಆರಂಭವಾಗಲಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.