ADVERTISEMENT

ರಾಹುಲ್ ಗಾಂಧಿ ಸಂದರ್ಶನ 'ಪೇಯ್ಡ್ ನ್ಯೂಸ್' : ಕ್ರಮ ಕೈಗೊಳ್ಳಲು ಬಿಜೆಪಿ ಒತ್ತಾಯ

​ಪ್ರಜಾವಾಣಿ ವಾರ್ತೆ
Published 8 ಡಿಸೆಂಬರ್ 2018, 10:02 IST
Last Updated 8 ಡಿಸೆಂಬರ್ 2018, 10:02 IST
ರಾಹುಲ್ ಗಾಂಧಿ  (ಕೃಪೆ: ಪಿಟಿಐ)
ರಾಹುಲ್ ಗಾಂಧಿ (ಕೃಪೆ: ಪಿಟಿಐ)   

ನವದೆಹಲಿ: ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ತೆಲಂಗಾಣ ಬಿಜೆಪಿ ಘಟಕ ಚುನಾವಣಾ ಆಯೋಗಕ್ಕೆ ಒತ್ತಾಯಿಸಿದೆ.

ಗುರುವಾರ ಪ್ರಮುಖ ಇಂಗ್ಲಿಷ್ ಪತ್ರಿಕೆಯಲ್ಲಿ ರಾಹುಲ್ ಗಾಂಧಿ ಸಂದರ್ಶನ ಪ್ರಕಟವಾಗಿತ್ತು.ರಾಜಸ್ಥಾನ ಮತ್ತು ತೆಲಂಗಾಣ ವಿಧಾನಸಭಾ ಚುನಾವಣೆಯ ಮತದಾನಕ್ಕೆ ಮುನ್ನ ದಿನ ರಾಹುಲ್ ಸಂದರ್ಶನ ಪ್ರಕಟವಾಗಿದ್ದು, ಇದು ಪೇಯ್ಡ್ ನ್ಯೂಸ್ ಎಂದು ಬಿಜೆಪಿ ಆರೋಪಿಸಿದೆ.

ಮತದಾನಕ್ಕೆ ಮುನ್ನ ದಿನ ಈ ರೀತಿ ಸಂದರ್ಶನ ಪ್ರಕಟಿಸಿ ರಾಹುಲ್ ಮತದಾರರ ಮೇಲೆ ಪ್ರಭಾವ ಬೀರಲು ಯತ್ನಿಸಿದ್ದು, ಚುನಾವಣಾ ನೀತಿ ಸಂಹಿತೆ ಉಲ್ಲಂಘನೆಯಾಗಿದೆ ಎಂದು ಬಿಜೆಪಿ ವಾದಿಸಿದೆ.

ADVERTISEMENT

ಕೇಂದ್ರ ಸಚಿವ ಜೆ.ಪಿ ನಡ್ಡಾ, ಮುಖ್ತಾರ್ ಅಬ್ಬಾಸ್ ನಖ್ವೀ ಮತ್ತು ಪಕ್ಷದ ವಕ್ತಾರ ಅನಿಲ್ ಬಲುನಿ ಅವರ ನಿಯೋಗವು ಸಂದರ್ಶನ ಪ್ರತಿಯೊಂದರ ಸಹಿತ ಚುನಾವಣಾ ಆಯೋಗಕ್ಕೆ ದೂರು ಸಲ್ಲಿಸಿದೆ .

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.