ADVERTISEMENT

'ವಿದೇಶಿ ಮನಸ್ಥಿತಿಯ ರಾಹುಲ್ ಗಾಂಧಿ ರಾಷ್ಟ್ರೀಯವಾದಿಗಳಿಂದ ರಾಷ್ಟ್ರೀಯತೆ ಕಲಿಯಲಿ'

ಪಿಟಿಐ
Published 5 ಅಕ್ಟೋಬರ್ 2020, 11:03 IST
Last Updated 5 ಅಕ್ಟೋಬರ್ 2020, 11:03 IST
ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ
ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ   

ಬಲ್ಲಿಯಾ: ಉತ್ತರ ಪ್ರದೇಶದ ಬಿಜೆಪಿ ಶಾಸಕ ಸುರೇಂದ್ರ ಸಿಂಗ್ ಅವರು ಸೋಮವಾರ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರನ್ನು 'ದ್ವಿಗುಣ ನಡತೆ' ಮತ್ತು 'ವಿದೇಶಿ ಮನಸ್ಥಿತಿ'ಯ ವ್ಯಕ್ತಿ. ಅವರು ರಾಷ್ಟ್ರೀಯತೆ ಮತ್ತು ದೇಶದ ಸಂಸ್ಕೃತಿಯನ್ನು 'ರಾಷ್ಟ್ರೀಯವಾದಿಗಳಿಂದ' ಕಲಿಯಬೇಕು ಎಂದಿದ್ದಾರೆ.

'ಪೋಷಕರು ತಮ್ಮ ಹೆಣ್ಣುಮಕ್ಕಳಿಗೆ ಸಂಸ್ಕಾರ (ಮೌಲ್ಯಗಳನ್ನು) ಕಲಿಸಿದರೆ ಮಾತ್ರ ಅತ್ಯಾಚಾರಗಳನ್ನು ನಿಲ್ಲಿಸಬಹುದು' ಎಂದು ಶನಿವಾರಸಿಂಗ್‌ ನೀಡಿದ ಹೇಳಿಕೆ ವಿವಾದದ ರೂಪ ಪಡೆದಿದೆ

ಸಿಂಗ್‌ ಅವರ ಹೇಳಿಕೆಗೆ ಪ್ರತಿಕ್ರಿಯಿಸಿದ್ದ ರಾಹುಲ್ ಗಾಂಧಿ, ಇದು ಆರ್‌ಎಸ್‌ಎಸ್‌ನಲ್ಲಿನ ಉತ್ಪ್ರೇಕ್ಷಿತ ದೇಶಭಕ್ತಿಯನ್ನು ಪ್ರದರ್ಶಿಸುವ ಪುರುಷರ ಮನಸ್ಥಿತಿ. ಪುರುಷರು ಅತ್ಯಾಚಾರ ಮಾಡುತ್ತಾರಂತೆ,ಆದರೆ ಮಹಿಳೆಯರಿಗೆ ಉತ್ತಮ ಮೌಲ್ಯಗಳನ್ನು ಕಲಿಸಬೇಕಾಗಿದೆ ಎಂದು ಟ್ವೀಟಿಸಿದ್ದರು.

ADVERTISEMENT

ರಾಹುಲ್ ಗಾಂಧಿಯವರ ಹೇಳಿಕೆಗೆಸೋಮವಾರಬೈರಿಯಾ ಕ್ಷೇತ್ರದ ಬಿಜೆಪಿ ಶಾಸಕ ಪ್ರತಿಕ್ರಿಯಿಸಿ, ಕಾಂಗ್ರೆಸ್‌ನ ಮಾಜಿ ಅಧ್ಯಕ್ಷರು ಭಾರತೀಯ ಸಂಸ್ಕೃತಿಯ ಬಗ್ಗೆ ಸಂಪೂರ್ಣವಾಗಿ ಅಜ್ಞಾನವನ್ನು ಹೊಂದಿದ್ದಾರೆ. ರಾಹುಲ್ ಅವರು ಉಭಯ ಚಾರಿತ್ರ್ಯ ಮತ್ತು ವಿದೇಶಿ ಮನಸ್ಥಿತಿಯ ವ್ಯಕ್ತಿಯಾಗಿದ್ದಾರೆ ಎಂದು ದೂರಿದ್ದಾರೆ.

ಅವರುಭಾರತೀಯ ಸಂಸ್ಕೃತಿಯ ಬಗ್ಗೆ ಸಂಪೂರ್ಣವಾಗಿ ಅಜ್ಞಾನಿಯಾಗಿದ್ದಾರೆ. ಅವರು ರಾಷ್ಟ್ರೀಯವಾದಿಗಳಿಂದ ಟ್ಯೂಷನ್ ತೆಗೆದುಕೊಂಡರೆ,ರಾಷ್ಟ್ರೀಯತೆಯ ವ್ಯಾಖ್ಯಾನವನ್ನು ಅರ್ಥಮಾಡಿಕೊಳ್ಳುತ್ತಾರೆ. ದೇಶದ ಸಂಸ್ಕೃತಿಯ ತಿರುಳು ಅವರಿಗೆ ಅರ್ಥವಾಗಿಲ್ಲ ಎಂದಿದ್ದಾರೆ.

ರಾಹುಲ್ ಮತ್ತು ಪ್ರಿಯಾಂಕಾ (ಗಾಂಧಿ ವಾದ್ರಾ) ಅವರ ದ್ವಂದ್ವ ನಿಲುವುಗಳು ಹಾಥರಸ್‌ನಲ್ಲಿನ ಸಂತ್ರಸ್ತೆಯ ಕುಟುಂಬವನ್ನು ಭೇಟಿ ಮಾಡುವ ಪ್ರಯಾಣದಲ್ಲಿ ಸ್ಪಷ್ಟವಾಯಿತು. ಪ್ರಯಾಣದ ಸಮಯದಲ್ಲಿ ಅವರು ನಗುತ್ತಿರುತ್ತಾರೆ. ಆದರೆ ಸಂತ್ರಸ್ತೆಯ ಮನೆಗಳಿಗೆ ತೆರಳಿ ಕಣ್ಣೀರು ಸುರಿಸುತ್ತಾರೆ ಎಂದು ಆರೋಪಿಸಿದ್ದಾರೆ.

ಸೆಪ್ಟಂಬರ್ 14ರಂದು ಸಾಮೂಹಿಕ ಅತ್ಯಾಚಾರಕ್ಕೊಳಗಾಗಿದ್ದ ದಲಿತ ಯುವತಿಯು ದೆಹಲಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದಳು. ಕಾಂಗ್ರೆಸ್ ನಾಯಕರು ಶನಿವಾರ ಸಂಜೆ ಕುಟುಂಬವನ್ನು ಭೇಟಿಯಾಗಿ ಸಾಂತ್ವನ ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.