ಮುಂಬೈ: ಮಹಾರಾಷ್ಟ್ರ ವಿಧಾನಸಭೆಯ ಸ್ಪೀಕರ್ ಆಗಿ ಬಿಜೆಪಿಯ ರಾಹುಲ್ ನರ್ವೇಕರ್ ಆಯ್ಕೆಯಾಗಿದ್ದು, ಸೋಮವಾರದ ವಿಶ್ವಾಸ ಮತಕ್ಕೂ ಮೊದಲು ಏಕನಾಥ ಶಿಂಧೆ–ಬಿಜೆಪಿ ದೋಸ್ತಿಗೆ ಮೊದಲ ಗೆಲುವು ಸಿಕ್ಕಂತಾಗಿದೆ.
ಬಿಜೆಪಿಯ ಅಭ್ಯರ್ಥಿ ರಾಹುಲ್ 164 ಮತಗಳನ್ನು ಪಡೆದು ಸ್ಪೀಕರ್ ಆಗಿ ಆಯ್ಕೆಯಾದರು. ಶಿವಸೇನಾ, ಎನ್‌ಸಿಪಿ ಮತ್ತು ಕಾಂಗ್ರೆಸ್ ಪಕ್ಷಗಳು ಶಿವಸೇನಾದ ಶಾಸಕ ರಾಜನ್ ಸಾಳ್ವಿ ಅವರನ್ನು ಸ್ಪೀಕರ್ ಚುನಾವಣೆ ಕಣಕ್ಕಿಳಿಸಿದ್ದವು. ಆದರೆ ಅವರು ಸೋಲುಂಡಿದ್ದಾರೆ.
ಗೋವಾದಲ್ಲಿ ತಂಗಿದ್ದ ಶಿವಸೇನಾದ ಶಾಸಕರು ಮತ್ತು ಪಕ್ಷೇತರ ಸದಸ್ಯರು ಸ್ಪೀಕರ್ ಚುನಾವಣೆ ಹಿನ್ನೆಲೆಯಲ್ಲಿ ಶನಿವಾರ ಮುಂಬೈಗೆ ಆಗಮಿಸಿದ್ದರು.
ಶಿವಸೇನಾದ ಬಂಡಾಯ ನಾಯಕ ಏಕನಾಥ ಶಿಂಧೆ ಅವರು ವಿಧಾನಸಭೆಯಲ್ಲಿ ಸೋಮವಾರ ಬಹುಮತ ಸಾಬೀತು ಮಾಡಬೇಕಾಗಿದೆ. ಅದಕ್ಕೂ ಮೊದಲೇ ಸಿಕ್ಕಿರುವ ಈ ಗೆಲುವು ದೋಸ್ತಿಗಳಲ್ಲಿ ವಿಶ್ವಾಸ ಮೂಡಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.