ADVERTISEMENT

INDIA ಮೈತ್ರಿಕೂಟ ಬಲಪಡಿಸಲು ರಾಹುಲ್-ಪವಾರ್ ಚರ್ಚೆ

ಪಿಟಿಐ
Published 3 ಜುಲೈ 2024, 2:22 IST
Last Updated 3 ಜುಲೈ 2024, 2:22 IST
<div class="paragraphs"><p>ಶರದ್ ಪವಾರ್,&nbsp;ರಾಹುಲ್ ಗಾಂಧಿ</p></div>

ಶರದ್ ಪವಾರ್, ರಾಹುಲ್ ಗಾಂಧಿ

   

(ಪಿಟಿಐ ಚಿತ್ರ)

ನವದೆಹಲಿ: ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ಮಂಗಳವಾರ ಎನ್‌ಸಿಪಿ ಮುಖ್ಯಸ್ಥ ಶರದ್ ಪವಾರ್ ಅವರನ್ನು ಭೇಟಿಯಾಗಿ ಚರ್ಚೆ ನಡೆಸಿದರು.

ADVERTISEMENT

'ಇಂಡಿಯಾ' ಮೈತ್ರಿಕೂಟವನ್ನು ಮತ್ತಷ್ಟು ಬಲಪಡಿಸುವ ನಿಟ್ಟಿನಲ್ಲಿ ಶರದ್ ಪವಾರ್ ಹಾಗೂ ಮಹಾರಾಷ್ಟ್ರದ ವಿರೋಧ ಪಕ್ಷದ ನಾಯಕರನ್ನು ರಾಹುಲ್ ಭೇಟಿಯಾಗಿ ಚರ್ಚಿಸಿದರು.

ಸಂಸತ್ತಿನಲ್ಲಿ ಲೋಕಸಭೆ ಅಧಿವೇಶನ ಮುಂದುವರಿದಿದೆ. ಈ ನಡುವೆ ಪವಾರ್-ರಾಹುಲ್ ಭೇಟಿ ನಡೆದಿದೆ.

ಮಹಾರಾಷ್ಟ್ರದ ಸಮಕಾಲೀನ ರಾಜಕೀಯ ಪರಿಸ್ಥಿತಿ ಹಾಗೂ 'ಮಹಾ ವಿಕಾಸ ಅಘಾಡಿ' ಮೈತ್ರಿಯನ್ನು ಬಲಪಡಿಸುವ ಕುರಿತಾಗಿಯೂ ಚರ್ಚಿಸಲಾಯಿತು ಎಂದು ಮೂಲಗಳು ತಿಳಿಸಿವೆ.

ಇತ್ತೀಚೆಗೆ ಅಂತ್ಯಗೊಂಡ ಲೋಕಸಭೆ ಚುನಾವಣೆಯಲ್ಲಿ ಮಹಾರಾಷ್ಟ್ರದಲ್ಲಿ ಕಾಂಗ್ರೆಸ್, ಎನ್‌ಸಿಪಿ (ಶರದ್‌ಚಂದ್ರ ಪವಾರ್ ಬಣ) ಹಾಗೂ ಶಿವಸೇನಾ (ಉದ್ಧವ್ ಠಾಕ್ರೆ ಬಣ) ಮೈತ್ರಿ ಅತ್ಯುತ್ತಮ ಸಾಧನೆ ಮಾಡಿತು. ಈ ವರ್ಷಾಂತ್ಯದಲ್ಲಿ ನಡೆಯಲಿರುವ ಮಹಾರಾಷ್ಟ್ರದಲ್ಲಿ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ-ಶಿವಸೇನಾ ಮೈತ್ರಿಯನ್ನು ಸೋಲಿಸುವ ಗುರಿ ಹೊಂದಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.