ADVERTISEMENT

ಹುಬ್ಬಳ್ಳಿ–ಅಂಕೋಲಾ ರೈಲು ಮಾರ್ಗ: ಅಂತಿಮ ಸ್ಥಳ ಸಮೀಕ್ಷೆಗೆ ಟೆಂಡರ್

​ಪ್ರಜಾವಾಣಿ ವಾರ್ತೆ
Published 10 ಜೂನ್ 2023, 13:45 IST
Last Updated 10 ಜೂನ್ 2023, 13:45 IST
ಹುಬ್ಬಳ್ಳಿ–ಅಂಕೋಲಾ ರೈಲು ಮಾರ್ಗ
ಹುಬ್ಬಳ್ಳಿ–ಅಂಕೋಲಾ ರೈಲು ಮಾರ್ಗ    

ನವದೆಹಲಿ: ಕರ್ನಾಟಕದ ಹುಬ್ಬಳ್ಳಿ–ಅಂಕೋಲಾ ಬ್ರಾಡ್‌ಗೇಜ್‌ ರೈಲು ಮಾರ್ಗ ನಿರ್ಮಾಣಕ್ಕೆ ಸಂಬಂಧಿಸಿದಂತೆ ಅಂತಿಮ ಸ್ಥಳ ಸಮೀಕ್ಷೆ ನಡೆಸಲು ರೈಲ್ವೆ ಇಲಾಖೆ ಟೆಂಡರ್‌ ಆಹ್ವಾನಿಸಿದೆ. 

161 ಕಿ.ಮೀ. ಮಾರ್ಗದ ಸಮೀಕ್ಷೆ ಜತೆಗೆ ಮಣ್ಣಿನ ಪರೀಕ್ಷೆ, ಯಾರ್ಡ್‌ ನಕ್ಷೆಗಳ ತಯಾರಿಕೆ, ಸೇತುವೆಗಳಿಗೆ ಮಾರ್ಗಗಳ ಲೆಕ್ಕಾಚಾರಗಳು ಇತ್ಯಾದಿಗಳನ್ನು ನಡೆಸಬೇಕು. ಟೆಂಡರ್ ಮೊತ್ತ ₹13.48 ಕೋಟಿ. ಜುಲೈ 3ರೊಳಗೆ ಬಿಡ್‌ ಸಲ್ಲಿಸಬೇಕು ಎಂದು ರೈಲ್ವೆ ಇಲಾಖೆ ತಿಳಿಸಿದೆ. 

ಈ ಮಾರ್ಗ ನಿರ್ಮಾಣಕ್ಕೆ ಪರಿಸರವಾದಿಗಳಿಂದ ವಿರೋಧ ಇದೆ. ಈ ಮಾರ್ಗಕ್ಕೆ ಕೇಂದ್ರ ವನ್ಯಜೀವಿ ಮಂಡಳಿಯಿಂದ ಈ ತನಕ ಒಪ್ಪಿಗೆ ಸಿಕ್ಕಿಲ್ಲ. ಈಗಿನ ಸ್ವರೂಪದಲ್ಲಿ ಯೋಜನೆಗೆ ಅನುಮೋದನೆ ನೀಡುವುದಿಲ್ಲ ಎಂದು ಮಂಡಳಿ ಸ್ಪಷ್ಟಪಡಿಸಿದೆ. 

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.