ADVERTISEMENT

ಲೋಕೊ ಪೈಲಟ್‌, ಗಾರ್ಡ್‌ಗಳ ಕುಂದುಕೊರತೆ ಪರಿಹಾರಕ್ಕಾಗಿ ಸಮಿತಿ ಅಸ್ತಿತ್ವಕ್ಕೆ

ಲೋಕೊ ಪೈಲಟ್‌ಗಳ ಹಾಗೂ ಗಾರ್ಡ್‌ಗಳ ಕುಂದುಕೊರತೆ ಪರಿಹಾರಕ್ಕಾಗಿ ರೈಲ್ವೆ ಮಂಡಳಿ ಉನ್ನತ ಸಮಿತಿಯೊಂದನ್ನು ( multi-disciplinary committee) ರಚಿಸಿ ಆದೇಶಿಸಿದೆ.

ಪಿಟಿಐ
Published 16 ಜುಲೈ 2024, 14:10 IST
Last Updated 16 ಜುಲೈ 2024, 14:10 IST
ಟಿಪ್ಪು ಎಕ್ಸ್‌ಪ್ರೆಸ್‌ ರೈಲನ್ನು ಚಲಾಯಿಸಿದ ಲೋಕೊ ಪೈಲಟ್‌ ಬಾಲಸಿವ ಪಾರ್ವತಿ ಹಾಗೂ ಸಹ ಲೋಕೊ ಪೈಲಟ್ ರಂಗೋಲಿ ಪಾಟೀಲ್‌
ಟಿಪ್ಪು ಎಕ್ಸ್‌ಪ್ರೆಸ್‌ ರೈಲನ್ನು ಚಲಾಯಿಸಿದ ಲೋಕೊ ಪೈಲಟ್‌ ಬಾಲಸಿವ ಪಾರ್ವತಿ ಹಾಗೂ ಸಹ ಲೋಕೊ ಪೈಲಟ್ ರಂಗೋಲಿ ಪಾಟೀಲ್‌   

ನವದೆಹಲಿ: ಲೋಕೊ ಪೈಲಟ್‌ಗಳ ಹಾಗೂ ಗಾರ್ಡ್‌ಗಳ ಕುಂದುಕೊರತೆ ಪರಿಹಾರಕ್ಕಾಗಿ ರೈಲ್ವೆ ಮಂಡಳಿ ಉನ್ನತ ಸಮಿತಿಯೊಂದನ್ನು ( multi-disciplinary committee) ರಚಿಸಿ ಆದೇಶಿಸಿದೆ.

ಇದು ಲೋಕೊ ಪೈಲಟ್‌ಗಳ ಹಾಗೂ ಗಾರ್ಡ್‌ಗಳ ಬಹುದಿನದ ಬೇಡಿಕೆಯಾಗಿತ್ತು. ಮಂಡಳಿ ನಿರ್ಧಾರವನ್ನು ಲೋಕೊಪೈಲಟ್‌ಗಳ ಹಾಗೂ ಗಾರ್ಡ್‌ಗಳ ಸಂಘ ಸ್ವಾಗತಿಸಿದೆ.

ಸಮಿತಿಯಲ್ಲಿ ರೈಲ್ವೆಯ ವಿವಿಧ ವಲಯಗಳಿಂದ ನೇಮಿಸಲ್ಪಡುವ (ಕಾರ್ಯಕಾರಿ ನಿರ್ದೇಶಕರು) ಐವರು ಸದಸ್ಯರಿರುತ್ತಾರೆ. ಜುಲೈ 11ರಂದು ಈ ನಿರ್ಧಾರ ಹೊರ ಬಿದ್ದಿದ್ದು ಸಮಿತಿ ಅಸ್ತಿತ್ವಕ್ಕೆ ಬಂದಿದೆ.

ADVERTISEMENT

ಲೋಕೊ ಪೈಲಟ್‌ಗಳ ಹಾಗೂ ಗಾರ್ಡ್‌ಗಳ ಸೇವಾ ದಕ್ಷತೆ ಸುಧಾರಣೆ, ವೇತನ, ಪರಿಹಾರಗಳು ಸೇರಿದಂತೆ ಇನ್ನಿತರ ಬೇಡಿಕೆಗಳ ಮೇಲೆ ಈ ಸಮಿತಿ ಅಧ್ಯಯನ ನಡೆಸಿ ವರದಿಗಳನ್ನು ಸಲ್ಲಿಸಲಿದೆ.

ಈ ಮೊದಲು ಲೋಕೊ ಪೈಲಟ್‌ಗಳ ಹಾಗೂ ಗಾರ್ಡ್‌ಗಳ ಕುಂದುಕೊರತೆ ಪರಿಹಾರಕ್ಕೆ ರೈಲ್ವೆಯಲ್ಲಿ ಪ್ರತ್ಯೇಕ ಮಂಡಳಿ ಅಥವಾ ಸಮಿತಿ ಇರಲಿಲ್ಲ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.