ADVERTISEMENT

ಸಹೋದ್ಯೋಗಿಗಳ ಎಡವಟ್ಟು: ಎಂಜಿನ್–ಕೋಚ್ ನಡುವೆ ಅಪ್ಪಚ್ಚಿಯಾದ ರೈಲ್ವೆ ಉದ್ಯೋಗಿ!

ಸಮಸ್ತಿಪುರದ 25 ವರ್ಷದ ಅಮರ್ ಕುಮಾರ್ ಮೃತ ವ್ಯಕ್ತಿ.

​ಪ್ರಜಾವಾಣಿ ವಾರ್ತೆ
Published 10 ನವೆಂಬರ್ 2024, 5:10 IST
Last Updated 10 ನವೆಂಬರ್ 2024, 5:10 IST
<div class="paragraphs"><p>ಮೃತ ಅಮರ್ ಕುಮಾರ್</p></div>

ಮೃತ ಅಮರ್ ಕುಮಾರ್

   

ಬೇಗುಸರಾಯ್: ರೈಲು ಎಂಜಿನ್ ಮತ್ತು ಕೋಚ್ ನಡುವೆ ಸಿಲುಕಿ ರೈಲ್ವೆಯ ಡಿ ಗ್ರೂಪ್ ಉದ್ಯೋಗಿಯೊಬ್ಬರು ಮೃತಪಟ್ಟಿರುವ ಘಟನೆ ಬಿಹಾರದ ಬೇಗುಸರಾಯ್ ಜಿಲ್ಲೆಯ ಬರೌನಿ ರೈಲು ನಿಲ್ದಾಣದಲ್ಲಿ ನಡೆದಿದೆ.

ಸಮಸ್ತಿಪುರದ 25 ವರ್ಷದ ಅಮರ್ ಕುಮಾರ್ ಮೃತ ವ್ಯಕ್ತಿ.

ADVERTISEMENT

ಫ್ಲಾಟ್‌ಫಾರ್ಮ್‌ 5ರಲ್ಲಿ ನಿಂತಿದ್ದ ಲಖನೌ–ಬರೌನಿ ಎಕ್ಸ್‌ಪ್ರೆಸ್ ರೈಲಿನ ಎಂಜಿನ್ ಮತ್ತು ಕೋಚ್ ಅನ್ನು ಜೋಡಿಸುವ ಕೆಲಸವನ್ನು ಶನಿವಾರ ಬೆಳಿಗ್ಗೆ 8.10 ರ ಸುಮಾರು ಅಮರ್ ಕುಮಾರ್ ನಿರ್ವಹಿಸುತ್ತಿದ್ದರು. ಈ ವೇಳೆ ಪ್ಲೇಟ್‌ಗಳ ನಡುವೆ ಸಿಲುಕಿದ ಅಮರ್ ಕುಮಾರ್, ಅಪ್ಪಚ್ಚಿಯಾಗಿ ಸ್ಥಳದಲ್ಲೇ ಮೃತಪಟ್ಟಿದ್ದಾರೆ.

ರೈಲ್ವೆಯ ಸಹೋದ್ಯೋಗಿಗಳ ಎಡವಟ್ಟಿನಿಂದ ಈ ದುರಂತ ಸಂಭವಿಸಿದೆ ಎಂದು ಪೂರ್ವ ಕೇಂದ್ರ ವಲಯದ ಹಿರಿಯ ರೈಲ್ವೆ ಅಧಿಕಾರಿಗಳು ತಿಳಿಸಿದ್ದಾರೆ. ಈ ಕುರಿತು ಉನ್ನತ ಮಟ್ಟದ ತನಿಖೆಗೆ ಆದೇಶಿಸಲಾಗಿದ್ದು, ತಪ್ಪಿತಸ್ಥರ ಮೇಲೆ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದ್ದಾರೆ.

ಪಾಯಿಂಟ್‌ಮೆನ್‌ಗಳ ನಿರ್ಲಕ್ಷ್ಯದಿಂದ ಈ ದುರ್ಘಟನೆ ಸಂಭವಿಸಿದೆ ಎಂದು ಪ್ರಾಥಮಿಕ ತನಿಖೆಯಲ್ಲಿ ತಿಳಿದು ಬಂದಿದೆ. ಘಟನೆಯ ಫೋಟೊ, ವಿಡಿಯೊ ಇಂಟರ್‌ನೆಟ್‌ನಲ್ಲಿ ಗಮನ ಸೆಳೆದಿದ್ದು ರೈಲ್ವೆ ಸಚಿವರನ್ನು, ಅಧಿಕಾರಿಗಳನ್ನು ನೆಟ್ಟಿಗರು ತರಾಟೆಗೆ ತೆಗೆದುಕೊಂಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.