ನವದೆಹಲಿ: ದೇಶದ ಎಲ್ಲ ರೈಲ್ವೆ ಲೆವೆಲ್ ಕ್ರಾಸಿಂಗ್‌ಗಳಿಗೆ ಸಂಪೂರ್ಣ ಮುಕ್ತಿ ನೀಡಲು ಕೆಲವು ಲಕ್ಷ ಕೋಟಿ ರೂಪಾಯಿ ಅಗತ್ಯವಿದೆ ಎಂದು ಕೇಂದ್ರ ರೈಲ್ವೆ ಸಚಿವ ಪೀಯೂಷ್ ಗೋಯಲ್ ಅವರು ಹೇಳಿದ್ದಾರೆ. ಲೋಕಸಭೆಗೆ ಬುಧವಾರ ಉತ್ತರ ನೀಡಿದ ಅವರು ಇದಕ್ಕೆ ಕೆಲವು ವರ್ಷಗಳೇ ಹಿಡಿಯಲಿವೆ ಎಂದಿದ್ದಾರೆ. ಕ್ರಾಸಿಂಗ್‌ಗಳಿಗೆ ಬದಲಾಗಿ ಮೇಲ್ಸೇತುವೆ ಅಥವಾ ಕೆಳಸೇತುವೆಗಳ ಪರ್ಯಾಯ ವ್ಯವಸ್ಥೆ ಕಲ್ಪಿಸುವುದು ರೈಲ್ವೆ ಇಲಾಖೆ ಉದ್ದೇಶ.
ರೈಲ್ವೆ ಸಚಿವರು ಹೇಳಿದ್ದೇನು?
*ಎಲ್ಲ ಮಾನವಸಹಿತ ರೈಲ್ವೆ ಕ್ರಾಸಿಂಗ್‌ಗಳನ್ನು
ನಿವಾರಿಸುವ ಉದ್ದೇಶ
* ಕ್ರಾಸಿಂಗ್‌ಗಳಿಗೆ ಪರ್ಯಾಯವಾಗಿ ಮೇಲ್ಸೇತುವೆ, ಅಂಡರ್‌ಪಾಸ್ ನಿರ್ಮಾಣ
*2018ರ ಸೆಪ್ಟೆಂಬರ್ ತಿಂಗಳೊಂದರಲ್ಲೇ 1,714 ರೈಲ್ವೆ ಕ್ರಾಸಿಂಗ್‌ಗಳಿಗೆ ಪರ್ಯಾಯ ವ್ಯವಸ್ಥೆ
* ಜನವರಿ 2019ರಲ್ಲಿ ಬ್ರಾಡ್‌ಗೇಜ್ ಮಾರ್ಗದ ಎಲ್ಲ ಕಾವಲುರಹಿತ ಕ್ರಾಸಿಂಗ್ ತೆಗೆದುಹಾಕಲಾಯಿತು
* ಈ ಅವಧಿಯಲ್ಲಿ ಮೀಟರ್‌ಗೇಜ್‌ನ 348, ನ್ಯಾರೋಗೇಜ್‌ನ 700 ಲೆವೆಲ್
ಕ್ರಾಸಿಂಗ್‌ಗೆ ಮುಕ್ತಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.