ADVERTISEMENT

Video | ಬುಲೆಟ್‌ ರೈಲು: ಕಾಮಗಾರಿಯ ವಿಡಿಯೊ ಹಂಚಿಕೊಂಡ ಸಚಿವ ಅಶ್ವಿನಿ ವೈಷ್ಣವ್

ಪಿಟಿಐ
Published 29 ಮಾರ್ಚ್ 2024, 10:35 IST
Last Updated 29 ಮಾರ್ಚ್ 2024, 10:35 IST
ಸಚಿವ ಅಶ್ವಿನಿ ವೈಷ್ಣವ್
ಸಚಿವ ಅಶ್ವಿನಿ ವೈಷ್ಣವ್   

ಬೆಂಗಳೂರು: ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಅವರು ಬುಲೆಟ್‌ ರೈಲು ಯೋಜನೆಯ ಕಾಮಗಾರಿ ಪ್ರಗತಿಯ ವಿಡಿಯೊವನ್ನು ಸಾಮಾಜಿಕ ಮಾಧ್ಯಮ ಎಕ್ಸ್‌ನಲ್ಲಿ ಹಂಚಿಕೊಂಡಿದ್ದಾರೆ. 

ಇದರ ಕಾಮಗಾರಿ ಪ್ರಗತಿಯ ವಿಡಿಯೊ ಜೊತೆಗೆ ಮಾಹಿತಿಯನ್ನು ಹಂಚಿಕೊಂಡಿದ್ದಾರೆ.

ಮುಂಬೈ ಮತ್ತು ಅಹಮದಾಬಾದ್‌ ನಡುವಿನ ಯೋಜನೆ ಇದಾಗಿದ್ದು, ಮೊದಲ ಬಾರಿಗೆ ದೇಶಿಯವಾಗಿ ಅಭಿವೃದ್ಧಿಪಡಿಸಿರುವ ಬ್ಯಾಲೆಸ್ಟೆಲೆಸ್‌ ಟ್ರ್ಯಾಕ್‌ ನಿರ್ಮಾಣ ಮಾಡಲಾಗುತ್ತಿದೆ. ಈ ಟ್ರ್ಯಾಕ್‌ ಮೇಲೆ ಬುಲೆಟ್‌ ರೈಲು ಗಂಟೆಗೆ 320 ಕಿ.ಮೀ ವೇಗದಲ್ಲಿ ಚಲಿಸಲಿದೇ ಎಂದು ಅವರು ಮಾಹಿತಿ ನೀಡಿದ್ದಾರೆ. 

ADVERTISEMENT

ಮುಂಬೈ ಮತ್ತು ಅಹಮದಾಬಾದ್‌ ನಡುವಿನ 508 ಕಿ.ಮೀ ಪೈಕಿ 153 ಕಿ.ಮೀಟರ್‌ನಷ್ಟು ಸೇತುವೆ ಕಾಮಗಾರಿ ಹಾಗೂ 295 ಕಿ.ಮೀಟರ್‌ನಷ್ಟು ಟ್ರ್ಯಾಕ್‌ ಅಡಿಪಾಯದ ಸೀಲಿಂಗ್‌ ಕಾಮಗಾರಿ ಫೂರ್ಣಗೊಂಡಿದೆ. ಈ ಬಗ್ಗೆ ಇನ್ನಷ್ಟು ಮಾಹಿತಿಯನ್ನು ಮೋದಿ 3.0 ಸರ್ಕಾರದ ಅವಧಿಯಲ್ಲಿ ನೀಡಲಾಗುವುದು ಎಂದು ಅವರು ಪೋಸ್ಟ್‌ ಮಾಡಿದ್ದಾರೆ.

ಜಪಾನ್‌ ದೇಶದ ನೆರವಿನೊಂದಿಗೆ ₹ 1.08 ಲಕ್ಷ ಕೋಟಿ ವೆಚ್ಚದಲ್ಲಿ ಈ ಯೋಜನೆ ನಿರ್ಮಾಣ ಮಾಡಲಾಗುತ್ತಿದೆ. ಇದಕ್ಕೆ ಕೇಂದ್ರ ಸರ್ಕಾರ ₹ 10 ಸಾವಿರ ಕೋಟಿ, ಗುಜರಾತ್ ಮತ್ತು ಮಹಾರಾಷ್ಟ್ರ ಸರ್ಕಾರಗಳು ತಲಾ ₹ 5 ಸಾವಿರ ಕೋಟಿ ನೀಡುತ್ತಿವೆ. ಉಳಿದ ಹಣವನ್ನು ಕಡಿಮೆ ಬಡ್ಡಿ ದರದಲ್ಲಿ ಜಪಾನ್‌ ಸರ್ಕಾರ ನೀಡುತ್ತಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.