ADVERTISEMENT

ರೈಲ್ವೆ: ಒಪಿಎಸ್‌ ಜಾರಿಗೆ ಮೇ 1ರ ಗಡುವು

ಪಿಟಿಐ
Published 29 ಫೆಬ್ರುವರಿ 2024, 22:16 IST
Last Updated 29 ಫೆಬ್ರುವರಿ 2024, 22:16 IST
<div class="paragraphs"><p>ರೈಲು (ಪ್ರಾತಿನಿಧಿಕ ಚಿತ್ರ)</p></div>

ರೈಲು (ಪ್ರಾತಿನಿಧಿಕ ಚಿತ್ರ)

   

ನವದೆಹಲಿ: ಹಳೆಯ ಪಿಂಚಣಿ ಯೋಜನೆ ಜಾರಿಗೊಳಿಸಲು ಮೇ 1ರ ಗಡುವು ನೀಡಿರುವ ರೈಲ್ವೆ ನೌಕರರ ಸಂಘಟನೆಗಳು, ಬೇಡಿಕೆ ಈಡೇರದಿದ್ದಲ್ಲಿ ಎಲ್ಲ ರೈಲುಗಳ ಸಂಚಾರ ಸ್ಥಗಿತಗೊಳಿಸಲಾಗುವುದು ಎಂದು ಎಚ್ಚರಿಸಿವೆ.

ಹಳೆಯ ಪಿಂಚಣಿ ಯೋಜನೆ ಮರುಜಾರಿಗಾಗಿ ಜಂಟಿ ವೇದಿಕೆ (ಜೆಎಫ್‌ಆರ್‌ಒಪಿಎಸ್‌) ಜೊತೆಗೆ ಗುರುತಿಸಿಕೊಂಡಿರುವ ರೈಲ್ವೆ ನೌಕರರ ವಿವಿಧ ಸಂಘಟನೆಗಳು, ಒಪಿಎಸ್‌ ಜಾರಿಗೆ ಒತ್ತಡ ಹೇರಲು ಮೇ 1ರಿಂದ ರೈಲು ಸಂಚಾರ ಸ್ಥಗಿತ ಪ್ರತಿಭಟನೆ ನಡೆಸಲು ತೀರ್ಮಾನಿಸಿವೆ.

ADVERTISEMENT

ಕೇಂದ್ರ ಸರ್ಕಾರ ಈ ಕುರಿತು ಸ್ಪಷ್ಟ ಭರವಸೆ ನೀಡುತ್ತಿಲ್ಲ. ಈಗ ನಮಗೆ ನೇರ ಪ್ರತಿಭಟನೆಗೆ ಇಳಿಯದೇ ಅನ್ಯಮಾರ್ಗವಿಲ್ಲವಾಗಿದೆ ಎಂದು ಜೆಎಫ್‌ಆರ್‌ಒಪಿಎಸ್‌ ಸಂಚಾಲಕ ಶಿವಗೋಪಾಲ್ ಮಿಶ್ರಾ ಅವರು ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.