ADVERTISEMENT

ಸ್ಕ್ರ್ಯಾಪ್‌ ಮಾರಾಟ: ಭಾರತೀಯ ರೈಲ್ವೆಗೆ ₹4,575 ಕೋಟಿ ಆದಾಯ

ಪಿಟಿಐ
Published 4 ಜುಲೈ 2021, 19:31 IST
Last Updated 4 ಜುಲೈ 2021, 19:31 IST
ಭಾರತೀಯ ರೈಲ್ವೆ (ಸಾಂದರ್ಭಿಕ ಚಿತ್ರ)
ಭಾರತೀಯ ರೈಲ್ವೆ (ಸಾಂದರ್ಭಿಕ ಚಿತ್ರ)   

ನವದೆಹಲಿ: ಕೊರೊನಾ ವೈರಸ್‌ನಿಂದಾಗಿ ಪ್ರಯಾಣಿಕರ ವಿಭಾಗದಲ್ಲಿ ತೀವ್ರವಾದ ಆದಾಯ ನಷ್ಟ ಅನುಭವಿಸಿದ್ದರೂ, ಭಾರತೀಯ ರೈಲ್ವೆಯು ಸ್ಕ್ರ್ಯಾಪ್‌ (ನಿರುಪಯುಕ್ತವೆಂದು ಬಿಟ್ಟ ವಸ್ತುಗಳು) ಮಾರಾಟದಿಂದ ದಾಖಲೆಯ ಆದಾಯ ಗಳಿಸಿದೆ. 2020–2021ರ ಅವಧಿಯಲ್ಲಿ ಸ್ಕ್ರ್ಯಾಪ್‌ ಮಾರಾಟದಿಂದ ₹4,575 ಕೋಟಿ ಆದಾಯ ಗಳಿಸಿದೆ.

ಸ್ಕ್ಯಾಪ್‌ ಮಾರಾಟದಿಂದ 2010–11ರಲ್ಲಿ ಭಾರತೀಯ ರೈಲ್ವೆಯು ₹ 4,409 ಕೋಟಿ ಆದಾಯಗಳಿಸಿತ್ತು. ಆ ನಂತರ 2020–2021ರಲ್ಲಿ ದಾಖಲೆಯ ಆದಾಯ ಗಳಿಸಿದೆ.

ಮಧ್ಯಪ್ರದೇಶದ ಚಂದ್ರಶೇಖರ್ ಗೌರ್ ಅವರು ಮಾಹಿತಿ ಹಕ್ಕು (ಆರ್‌ಟಿಐ) ಕಾಯ್ದೆಯಡಿ ಸಲ್ಲಿಸಿದ ಅರ್ಜಿಗೆ ಪ್ರತಿಕ್ರಿಯೆ ನೀಡಿರುವ ರೈಲ್ವೆ ಮಂಡಳಿ ಈ ಮಾಹಿತಿ ನೀಡಿದೆ.

ADVERTISEMENT

ವಿವಿಧ ರೀತಿಯ ಸ್ಕ್ರ್ಯಾಪ್ ವಸ್ತುಗಳ ಮಾರಾಟದಿಂದ 2019-2020ರಲ್ಲಿ ₹4,333 ಕೋಟಿ ಆದಾಯ ಗಳಿಸಲಾಗಿತ್ತು. 2020-21ರ ಅವಧಿಯಲ್ಲಿ ಶೇ 5 ರಷ್ಟು ಆದಾಯ ಹೆಚ್ಚಾಗಿದೆ ಎಂದು ರೈಲ್ವೆ ತಿಳಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.