ನವದೆಹಲಿ: ‘ಮೈ ಭಿ ಚೌಕೀದಾರ್’ ಎಂಬ ಜಾಹೀರಾತು ಇರುವ ಟೀ ಲೋಟಗಳನ್ನು ಪ್ರಯಾಣಿಕರಿಗೆ ನೀಡುವ ಮೂಲಕ ಭಾರತೀಯ ರೈಲ್ವೆಯು ಚುನಾವಣಾ ನೀತಿ ಸಂಹಿತೆಯನ್ನು ಉಲ್ಲಂಘಿಸಿದೆ.
ಶತಾಬ್ದಿ ಎಕ್ಸ್‌ಪ್ರೆಸ್‌ನಲ್ಲಿ ಈ ಲೋಟಗಳಲ್ಲಿ ಟೀ ಸರಬರಾಜು ಮಾಡಿದ್ದನ್ನು ಪ್ರಯಾಣಿಕರೊಬ್ಬರು ಆಕ್ಷೇಪಿಸಿದ್ದರು. ಆ ಲೋಟದ ಚಿತ್ರವನ್ನು ಟ್ವಿಟರ್‌ನಲ್ಲಿ ಪ್ರಕಟಿಸಿದ್ದರು. ಈ ಚಿತ್ರ ಟ್ವಿಟರ್ ಮತ್ತು ಫೇಸ್‌ಬುಕ್‌ನಲ್ಲಿ ವೈರಲ್ ಆಗಿತ್ತು.ರೈಲ್ವೆ ವಿರುದ್ಧ ನೆಟ್ಟಿಗರು ತೀವ್ರ ಆಕ್ಷೇಪ ವ್ಯಕ್ತಪಡಿಸಿದರು.
ತಕ್ಷಣವೇ ಎಚ್ಚೆತ್ತುಕೊಂಡ ರೈಲ್ವೆಯು, ‘ಆ ಟೀ ಲೋಟಗಳ ಸರಬರಾಜನ್ನು ಸ್ಥಗಿತಗೊಳಿಸಲಾಗಿದೆ. ಆ ಲೋಟಗಳನ್ನು ಪೂರೈಸಿದ ಗುತ್ತಿಗೆದಾರನಿಗೆ ₹ 1 ಲಕ್ಷ ದಂಡ ವಿಧಿಸಲಾಗಿದೆ. ಅಲ್ಲದೆ ಕಾರಣ ಕೇಳಿ ನೋಟಿಸನ್ನೂ ನೀಡಲಾಗಿದೆ’ ಎಂದು ಸ್ಪಷ್ಟನೆ ನೀಡಿತು.
ಸಂಕಲ್ಪ ಫೌಂಡೇಷನ್ ಎಂಬ ಸ್ವಯಂಸೇವಾ ಸಂಸ್ಥೆ ಈ ಜಾಹೀರಾತನ್ನು ನೀಡಿತ್ತು ಎಂದು ತಿಳಿದುಬಂದಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.