ADVERTISEMENT

ಪ್ರಯಾಣಿಕ ದಟ್ಟಣೆ ಮಾರ್ಗಗಳಲ್ಲಿ ’ಕವಚ’ ಅಳವಡಿಕೆ: ರೈಲ್ವೆ ಇಲಾಖೆ

ರೈಲುಗಳ ಡಿಕ್ಕಿ ತಪ್ಪಿಸುವ ವ್ಯವಸ್ಥೆಯೇ ‘ಕವಚ’

​ಪ್ರಜಾವಾಣಿ ವಾರ್ತೆ
Published 13 ಫೆಬ್ರುವರಿ 2022, 14:12 IST
Last Updated 13 ಫೆಬ್ರುವರಿ 2022, 14:12 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ನವದೆಹಲಿ: ದೇಶೀಯವಾಗಿ ಅಭಿವೃದ್ಧಿಪಡಿಸಲಾಗಿರುವ ‘ರೈಲುಗಳ ಡಿಕ್ಕಿ ತಪ್ಪಿಸುವ ವ್ಯವಸ್ಥೆ’ (ಟಿಸಿಎಎಸ್‌)ಯನ್ನು ಪ್ರಯಾಣಿಕರ ಭಾರಿ ದಟ್ಟಣೆ ಇರುವ ದೆಹಲಿ–ಮುಂಬೈ ಮತ್ತು ದೆಹಲಿ–ಹೌರಾ ಮಾರ್ಗಗಗಳಲ್ಲಿ ಅಳವಡಿಸಲು ಭಾರತೀಯ ರೈಲ್ವೆ ನಿರ್ಧರಿಸಿದೆ.

‘ಕವಚ’ ಎಂದೂ ಕರೆಯಲಾಗುವ ಈ ವ್ಯವಸ್ಥೆಯನ್ನು ಮೊದಲ ಹಂತದಲ್ಲಿ ಈ ಎರಡು ಮಾರ್ಗಗಳಲ್ಲಿ ಅಳವಡಿಸಲಾಗುತ್ತದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಎರಡನೇ ಹಂತದಲ್ಲಿ ಮುಂಬೈ–ಚೆನ್ನೈ, ಹೌರಾ–ಚೆನ್ನೈ ಮಾರ್ಗಗಳಲ್ಲಿ ಈ ವ್ಯವಸ್ಥೆಯನ್ನು ಅಳವಡಿಸಲಾಗುತ್ತಿದ್ದು, ಸಮೀಕ್ಷಾ ಕಾರ್ಯ ನಡೆಯುತ್ತಿದೆ. ‘ಪೂರ್ವ ಸರಕು ಕಾರಿಡಾರ್’ನಲ್ಲೂ (ಡಿಎಫ್‌ಸಿ) ಈ ವ್ಯವಸ್ಥೆಯನ್ನು ಅಳವಡಿಸಲು ರೈಲ್ವೆ ಉದ್ದೇಶಿಸಿದೆ ಎಂದು ಮೂಲಗಳು ಹೇಳಿವೆ.

ADVERTISEMENT

‘ಕವಚ’ ವ್ಯವಸ್ಥೆಯನ್ನು ಅಳವಡಿಸುವ ಕುರಿತು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ಅವರು ಬಜೆಟ್‌ನಲ್ಲಿ ಘೋಷಿಸಿದ್ದರು.

‘ಸಂಶೋಧನೆ, ವಿನ್ಯಾಸ ಹಾಗೂ ಮಾನಕ ಸಂಸ್ಥೆ’ (ಆರ್‌ಡಿಎಸ್‌ಒ) ಹಾಗೂ ಸಹವರ್ತಿ ಸಂಶೋಧನಾ ಸಂಸ್ಥೆಗಳು ಈ ವ್ಯವಸ್ಥೆಯನ್ನು ಅಭಿವೃದ್ಧಿಪಡಿಸಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.