ADVERTISEMENT

25 ಸಾವಿರದಷ್ಟು ನಿವೃತ್ತ ಉದ್ಯೋಗಿಗಳ ಮರು ನೇಮಕಕ್ಕೆ ಮುಂದಾದ ರೈಲ್ವೆ ಇಲಾಖೆ

ರೈಲ್ವೆ ಇಲಾಖೆಯ ಸುಮಾರು 25,000 ನಿವೃತ್ತ ಉದ್ಯೋಗಿಗಳನ್ನು ಪುನಃ ಎರಡು ವರ್ಷದ ಅವಧಿಗೆ ನೇಮಕ ಮಾಡಿಕೊಳ್ಳಲು ರೈಲ್ವೆ ಮಂಡಳಿ ಮುಂದಾಗಿದೆ.

​ಪ್ರಜಾವಾಣಿ ವಾರ್ತೆ
Published 20 ಅಕ್ಟೋಬರ್ 2024, 12:55 IST
Last Updated 20 ಅಕ್ಟೋಬರ್ 2024, 12:55 IST
<div class="paragraphs"><p>ರೈಲು</p></div>

ರೈಲು

   

– ಪ್ರಜಾವಾಣಿ ಚಿತ್ರ

ಬೆಂಗಳೂರು: ಸುಮಾರು 25 ಸಾವಿರದಷ್ಟು ನಿವೃತ್ತ ಉದ್ಯೋಗಿಗಳನ್ನು ಪುನಃ ಎರಡು ವರ್ಷದ ಅವಧಿಗೆ ನೇಮಕ ಮಾಡಿಕೊಳ್ಳಲು ರೈಲ್ವೆ ಇಲಾಖೆ ಮುಂದಾಗಿದೆ.

ADVERTISEMENT

ರೈಲ್ವೆ ಮಂಡಳಿಯ ಮೂಲಗಳನ್ನು ಉಲ್ಲೇಖಿಸಿ ಇಂಡಿಯಾ ಟುಡೇ ವೆಬ್‌ಸೈಟ್ ಈ ಕುರಿತು ವರದಿ ಮಾಡಿದೆ.

ಇತ್ತೀಚೆಗೆ ಹೆಚ್ಚುತ್ತಿರುವ ರೈಲ್ವೆ ಅಪಘಾತಗಳಿಗೆ ಸಿಬ್ಬಂದಿ ಕೊರತೆಯೂ ಒಂದು ಪ್ರಮುಖ ಕಾರಣ ಎಂದು ಮನಗಂಡಿರುವ ಇಲಾಖೆ, ಕೂಡಲೇ 25,000 ನಿವೃತ್ತ ಉದ್ಯೋಗಿಗಳನ್ನು ಕೆಲಸಕ್ಕೆ ಸೇರಿಸಿಕೊಳ್ಳುತ್ತಿದೆ.

ವಿವಿಧ ರೈಲ್ವೆ ವಲಯಗಳ ಜನರಲ್ ಮ್ಯಾನೇಜರ್‌ಗಳೇ ಈ ನೇಮಕಾತಿ ಹೊಣೆ ಹೊತ್ತುಕೊಂಡಿದ್ದಾರೆ.

ಸೂಪರ್‌ವೈಸರ್‌ ಹುದ್ದೆಗಳಿಂದ ಹಿಡಿದು ಟ್ರ್ಯಾಕ್‌ ಮೆನ್ ಹುದ್ದೆಗಳವರೆಗೆ ಇತ್ತೀಚೆಗೆ ನಿವೃತ್ತರಾದವರು ಹಾಗೂ 65 ವರ್ಷದೊಳಗಿನವರು ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಬೇಕು. ನಿಗದಿತ ಮಾನದಂಡಗಳನ್ನು ಪೂರೈಸಿ ಕೆಲಸಕ್ಕೆ ಸೇರಿಕೊಳ್ಳಬಹುದು ಎಂದು ಮಂಡಳಿ ಹೇಳಿದೆ.

ಹೀಗೆ ನೇಮಕರಾದ ಉದ್ಯೋಗಿಗಳಿಗೆ ತಾವು ನಿವೃತ್ತರಾಗುವ ಕೊನೆ ತಿಂಗಳಿನ ಸಂಬಳದಷ್ಟೇ ಸಂಬಳ ಪಡೆಯಲಿದ್ದಾರೆ ಎಂದು ತಿಳಿಸಿದೆ.

ಆರ್‌ಆರ್‌ಬಿಗಳಿಂದ ನೇಮಕಾತಿ ಪ್ರಕ್ರಿಯೆಗಳು ನಡೆಯುತ್ತಿದ್ದರೂ, ತಕ್ಷಣಕ್ಕೆ ಸಿಬ್ಬಂದಿಯ ಅಗತ್ಯ ಇರುವುದರಿಂದ ನಿವೃತ್ತ ಉದ್ಯೋಗಿಗಳನ್ನು ನೇಮಕ ಮಾಡಿಕೊಳ್ಳಲು ರೈಲ್ವೆ ಇಲಾಖೆ ಮುಂದಾಗಿದೆ ಎಂದು ವರದಿ ತಿಳಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.