ADVERTISEMENT

ಯುಪಿಎಸ್‌ಸಿ ಪರೀಕ್ಷೆ ಮೂಲಕವೇ ಐಆರ್‌ಎಂಎಸ್‌ ನೇಮಕಾತಿಗೆ ರೈಲ್ವೆ ಸಚಿವಾಲಯ ನಿರ್ಧಾರ

ಪಿಟಿಐ
Published 2 ಫೆಬ್ರುವರಿ 2023, 10:50 IST
Last Updated 2 ಫೆಬ್ರುವರಿ 2023, 10:50 IST
   

ನವದೆಹಲಿ: ಭಾರತೀಯ ರೈಲ್ವೆ ನಿರ್ವಹಣಾ ಸೇವಾ (ಐಆರ್‌ಎಂಎಸ್‌) ಅಧಿಕಾರಿಗಳ ನೇಮಕಾತಿಗೆ ರೈಲ್ವೆ ಸಚಿವಾಲಯವು ಪ್ರತ್ಯೇಕ ಪರೀಕ್ಷೆ ನಡೆಸುವ ನಿರ್ಧಾರ ಕೈಬಿಟ್ಟಿದೆ. ಕೇಂದ್ರ ಸಾರ್ವಜನಿಕ ಸೇವಾ ಆಯೋಗ (ಯುಪಿಎಸ್‌ಸಿ) ನಡೆಸುವ 2023ರ ನಾಗರಿಕ ಸೇವೆಗಳ ಪರೀಕ್ಷೆ ಮೂಲಕವೇ ನೇಮಕಾತಿಗೆ ನಿರ್ಧರಿಸಿರುವುದಾಗಿ ಅದು ಗುರುವಾರ ಹೇಳಿದೆ.

‘ಯುಪಿಎಸ್‌ಸಿ ಮತ್ತು ಡಿಒಪಿಟಿ ಜೊತೆ ಸಮಾಲೋಚನೆ ನಡೆಸಿ, ಐಆರ್‌ಎಂಎಸ್‌ ನೇಮಕಾತಿಯನ್ನು ಯುಪಿಎಸ್‌ಸಿ ನಡೆಸಲಿರುವ ಪ್ರಸಕ್ತ ಸಾಲಿನ ನಾಗರಿಕ ಸೇವೆಗಳ ಪರೀಕ್ಷೆ ಮೂಲಕ ಮಾಡಲು ನಿರ್ಧರಿಸಲಾಗಿದೆ’ ಎಂದು ರೈಲ್ವೆ ಸಚಿವಾಲಯವು ಹೇಳಿಕೆಯಲ್ಲಿ ತಿಳಿಸಿದೆ.

ವಿಶೇಷವಾಗಿ ವಿನ್ಯಾಸಗೊಳಿಸಲಾದ ಐಆರ್‌ಎಂಎಸ್‌ ಪರೀಕ್ಷೆ ಮೂಲಕ 2023ರಿಂದ ರೈಲ್ವೆಗೆ ನೇಮಕಾತಿ ನಡೆಯಲಿದೆ ಎಂದು ಈ ಮೊದಲು ಹೊರಡಿಸಿದ್ದ ಆದೇಶಕ್ಕೆ ಈ ಹೊಸ ನಿರ್ಧಾರವು ತದ್ವಿರುದ್ಧವಾಗಿದೆ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.