ADVERTISEMENT

ರೈಲ್ವೆಯಿಂದ ನವರಾತ್ರಿಗೆ ‘ವಿಶೇಷ ಊಟ’ದ ಮಾರಾಟ ವ್ಯವಸ್ಥೆ

​ಪ್ರಜಾವಾಣಿ ವಾರ್ತೆ
Published 8 ಅಕ್ಟೋಬರ್ 2024, 16:34 IST
Last Updated 8 ಅಕ್ಟೋಬರ್ 2024, 16:34 IST
<div class="paragraphs"><p>ರೈಲು</p></div>

ರೈಲು

   

– ಪ್ರಜಾವಾಣಿ ಚಿತ್ರ

ನವದೆಹಲಿ: ನವರಾತ್ರಿ ಹಬ್ಬದ ಋತುವಿನಲ್ಲಿ ಪ್ರಯಾಣಿಕರ ಅನುಕೂಲಕ್ಕಾಗಿ ರೈಲ್ವೆ ಇಲಾಖೆಯು 150ಕ್ಕೂ ಹೆಚ್ಚು ನಿಲ್ದಾಣಗಳಲ್ಲಿ ವಿಶೇಷ ಊಟದ ಮಾರಾಟಕ್ಕೆ ವ್ಯವಸ್ಥೆ ಮಾಡಿದೆ ಎಂದು ಹೇಳಿಕೆ ತಿಳಿಸಿದೆ.

ADVERTISEMENT

‘ನವರಾತ್ರಿ ವ್ರತ ವಿಶೇಷ ಊಟ’ಕ್ಕೆ ಪ್ರಯಾಣಿಕರು ಮೊಬೈಲ್‌ ಆ್ಯಪ್‌ ಮತ್ತು ವೆಬ್‌ಸೈಟ್ ಮೂಲಕವೂ ಆರ್ಡರ್ ಮಾಡಬಹುದು ಎಂದು ಹೇಳಿಕೆ ತಿಳಿಸಿದೆ.

ರಾಜ್ಯದ ಬೆಂಗಳೂರು ಕಂಟೋನ್ಮೆಂಟ್‌, ಮಂಗಳೂರು ಸೆಂಟ್ರಲ್‌ ಸ್ಟೇಷನ್‌ ಹಾಗೂ ಮುಂಬೈ ಸೆಂಟ್ರಲ್, ದೆಹಲಿ ಜಂಕ್ಷನ್, ಸೂರತ್, ಜೈಪುರ, ತಿರುಪತಿ, ನವದೆಹಲಿ ಸೇರಿ ವಿವಿಧ 150 ನಿಲ್ದಾಣಗಳಲ್ಲಿ ವಿಶೇಷ ಊಟ ಲಭ್ಯವಿರಲಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.