ನವದೆಹಲಿ (ಪಿಟಿಐ): ತುಂತುರು ಮಳೆ ಮತ್ತು ತಣ್ಣನೆಯ ಗಾಳಿಯು ರಾಷ್ಟ್ರ ರಾಜಧಾನಿಯಲ್ಲಿ ವಾಯು ಗುಣಮಟ್ಟವನ್ನು ಸುಧಾರಿಸಿದೆ. ದೆಹಲಿಯ 24 ಗಂಟೆಗಳ ವಾಯು ಗುಣಮಟ್ಟ ಸೂಚ್ಯಂಕವು ಭಾನುವಾರ 45 ರೀಡಿಂಗ್‌ನೊಂದಿಗೆ ಉತ್ತಮ ಸ್ಥಿತಿಯಲ್ಲಿರುವುದು ಭಾನುವಾರ ಕಂಡುಬಂದಿದೆ.
ರಾಷ್ಟ್ರ ರಾಜಧಾನಿಯಲ್ಲಿ ಬೆಳಿಗ್ಗೆ 8.30 ರಿಂದ ಸಂಜೆ 5.30ರ ನಡುವೆ 1.3 ಮಿ.ಮೀ ಮಳೆಯಾಗಿದೆ. ತಾಪಮಾನ ಗರಿಷ್ಠ 28.3 ಡಿಗ್ರಿ ಮತ್ತು ಕನಿಷ್ಠ 23.5 ಡಿಗ್ರಿ ಸೆಲ್ಸಿಯಸ್‌ನಷ್ಟು ದಾಖಲಾಗಿದೆ. ಪಾದರಸ ಮಟ್ಟವೂ ಐದು ಹಂತಗಳಷ್ಟು ತಗ್ಗಿತ್ತು. ಸೋಮವಾರದಿಂದ ಬುಧವಾರದವರೆಗೆ ಗಾಳಿಯ ಗುಣಮಟ್ಟ ‘ತೃಪ್ತಿದಾಯಕ’ ವಿಭಾಗದಲ್ಲಿಯೇ ಉಳಿಯುವ ಸಾಧ್ಯತೆಯಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.