ADVERTISEMENT

ವಾಯುಭಾರ ಕುಸಿತ: ತಮಿಳುನಾಡಿನ ಹಲವು ಪ್ರದೇಶಗಳಲ್ಲಿ ಭಾರಿ ಮಳೆ

ಪಿಟಿಐ
Published 26 ನವೆಂಬರ್ 2024, 9:23 IST
Last Updated 26 ನವೆಂಬರ್ 2024, 9:23 IST
<div class="paragraphs"><p>ಚೆನ್ನೈನಲ್ಲಿ ಭಾರಿ ಮಳೆ</p></div>

ಚೆನ್ನೈನಲ್ಲಿ ಭಾರಿ ಮಳೆ

   

(ಪಿಟಿಐ ಚಿತ್ರ)

ಚೆನ್ನೈ: ಬಂಗಾಳ ಕೊಲ್ಲಿಯಲ್ಲಿ ಉಂಟಾದ ವಾಯುಭಾರ ಕುಸಿತದ ಪರಿಣಾಮ ತಮಿಳುನಾಡಿನ ಹಲವು ಪ್ರದೇಶಗಳಲ್ಲಿ ಇಂದು (ಮಂಗಳವಾರ) ಭಾರಿ ಮಳೆಯಾಗಿದೆ. ವಾಯುಭಾರ ಕುಸಿತವು ಇನ್ನಷ್ಟು ತೀವ್ರಗೊಳ್ಳುವ ಸಾಧ್ಯತೆ ಇದೆ ಎಂದು ಭಾರತೀಯ ಹವಾಮಾನ ಇಲಾಖೆ ತಿಳಿಸಿದೆ.

ADVERTISEMENT

ಚೆನ್ನೈ ಹಾಗೂ ಸಮೀಪದ ಜಿಲ್ಲೆಗಳಾದ ಚೆಂಗಲ್‌ಪೆಟ್, ಕಾಂಚೀಪುರಂ, ತಿರುವಳ್ಳೂರು, ಉತ್ತರ ಕರಾವಳಿ ನಗರವಾದ ಕಡಲೂರು, ತಿರುವರೂರು ಹಾಗೂ ಮನ್ನಾರ್‌ಗುಡಿ ಸೇರಿದಂತೆ ಕಾವೇರಿ ಜಲಾನಯನ ಪ್ರದೇಶಗಳಲ್ಲಿ ಭಾರಿ ಮಳೆಯಾಗಿದೆ.

ಭಾರಿ ಮಳೆಯಿಂದಾಗಿ ರಸ್ತೆಗಳು ಜಲಾವೃತಗೊಂಡಿದ್ದು, ಸಂಚಾರಕ್ಕೆ ಅಡಚಣೆ ಉಂಟಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.