ಮುಂಬೈ: ಮಹಾರಾಷ್ಟ್ರ ವಿಧಾನಸಭಾ ಚುನಾವಣೆಯಲ್ಲಿ, ರಾಜ್ ಠಾಕ್ರೆ ನೇತೃತ್ವದ ಮಹಾರಾಷ್ಟ್ರ ನವನಿರ್ಮಾಣ ಸೇನಾ (ಎಂಎನ್ಎಸ್) ಪಕ್ಷವು ಏಕಾಂಗಿಯಾಗಿ ಸ್ಪರ್ಧಿಸಲು ಸಜ್ಜಾಗಿದೆ.
ಆಡಳಿತಾರೂಢ ‘ಮಹಾಯುತಿ’ ಮತ್ತು ವಿರೋಧ ಪಕ್ಷಗಳ ‘ಮಹಾ ವಿಕಾಸ ಆಘಾಡಿ’ಯಿಂದ ಅಂತರಕಾಯ್ದುಕೊಳ್ಳುವುದಾಗಿ ಎಂಎನ್‌ಎಸ್ ಭಾನುವಾರ ಘೋಷಿಸಿದೆ.
‘ಮಹಾರಾಷ್ಟ್ರವನ್ನು ನಮ್ಮ ಕೈಗೆ ಕೊಡಿ. ಹೇಗೆ ಬದಲಾಯಿಸುತ್ತೇವೆ ನೋಡಿ’ ಎಂದು ಪಕ್ಷದ ಮುಖ್ಯಸ್ಥ ರಾಜ್ ಠಾಕ್ರೆ ಅವರು ಮುಂಬೈನಲ್ಲಿ ನಡೆದ ಪಕ್ಷದ ರಾಜ್ಯ ಘಟಕದ ಪದಾಧಿಕಾರಿಗಳ ಸಭೆಯಲ್ಲಿ ಹೇಳಿದ್ದಾರೆ.
‘ಈ ಬಾರಿ ಯುತಿ ಮತ್ತು ಆಘಾಡಿಗೆ ಅವಕಾಶ ನೀಡಬೇಡಿ. ಬದಲಾವಣೆ ಬೇಕಾದರೆ ನಮಗೆ ಅಧಿಕಾರ ನೀಡಿ’ ಎಂದು ಹೇಳಿದ್ದಾರೆ.
ಲೋಕಸಭಾ ಚುನಾವಣೆಯಲ್ಲಿ ಎಂಎನ್‌ಎಸ್ ಪಕ್ಷವು ಎನ್‌ಡಿಎ ಮೈತ್ರಿಕೂಟಕ್ಕೆ ಬೆಂಬಲ ನೀಡಿತ್ತು. ಆದರೆ, ‘ಇದು ಲೋಕಸಭೆ ಚುನಾವಣೆಗೆ ಮಾತ್ರ ಸೀಮಿತ’ ಎಂದು ರಾಜ್ ಠಾಕ್ರೆ ಚುನಾವಣೆ ಬಳಿಕ ತಿಳಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.