ನವದೆಹಲಿ: ಲೋಕಸಭೆಯಲ್ಲಿ ನಡೆದ ಅವಿಶ್ವಾಸ ನಿರ್ಣಯ ಚರ್ಚೆಯಲ್ಲಿ ಭಾಷಣ ಮುಗಿಸಿ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿಯವರು ಪ್ರಧಾನಿ ಮೋದಿಯವರನ್ನು ಆಲಿಂಗನ ಮಾಡಿದ್ದು ಅಪ್ಪಿಕೋ ಚಳವಳಿ ಆಗಿತ್ತು ಎಂದು ಗೃಹ ಸಚಿವ ರಾಜನಾಥ್ ಸಿಂಗ್ ಹೇಳಿದ್ದಾರೆ.
ಗುಂಪುಗೂಡಿ ಸಾಯಹೊಡೆಯುವ ಪ್ರವೃತ್ತಿ ದುರದೃಷ್ಟಕರ. ಇದರ ವಿರುದ್ಧ ರಾಜ್ಯ ಸರ್ಕಾರಗಳು ಕಠಿಣ ಕ್ರಮ ಕೈಗೊಳ್ಳಬೇಕು, ಅಂದಹಾಗೆ 1984ರಲ್ಲಿ ನಡೆದ ಸಿಖ್ ಹತ್ಯಾಕಾಂಡ ಇದಕ್ಕಿಂತ ದೊಡ್ಡ ಕೃತ್ಯ ಆಗಿತ್ತು ಎಂದಿದ್ದಾರೆ ರಾಜನಾಥ್ ಸಿಂಗ್.
ಪ್ರಧಾನಿಯವರನ್ನು ಅಪ್ಪಿಕೊಂಡ ರಾಹುಲ್ ಗಾಂಧಿಯವರ ವರ್ತನೆ ಸರಿಯಲ್ಲ ಎಂದು ಸುಮಿತ್ರಾ ಮಹಾಜನ್ ಅಭಿಪ್ರಾಯಪಟ್ಟಿದ್ದಾರೆ . ಪ್ರಧಾನಿ ಸ್ಥಾನಕ್ಕೆ ಗೌರವ ನೀಡಬೇಕು, ಅಧಿವೇಶನದಲ್ಲಿ ನಾಟಕ ಬೇಡ ಎಂದು ಅವರು ಹೇಳಿದ್ದಾರೆ.
ಆಂಧ್ರ ಪ್ರದೇಶದ ಬಗ್ಗೆ ಕೇಂದ್ರ ಸರ್ಕಾರವು ಮಲತಾಯಿ ಧೋರಣೆ ಅನುಸರಿಸಿದೆ ಎಂದು ಟಿಡಿಪಿ ಸದಸ್ಯ ಜಯದೇವ ಗಲ್ಲಾ ಅವರು ಲೋಕಸಭೆಯಲ್ಲಿ ಅವಿಶ್ವಾಸ ನಿರ್ಣಯ ಚರ್ಚೆ ಆರಂಭಿಸಿದ್ದರು.
ಸಂಸತ್ತಿನಲ್ಲಿ ಏನೇನಾಯ್ತು?
ಕಳೆದ ನಾಲ್ಕು ವರ್ಷದಲ್ಲಿ ಲೋಕಪಾಲ ಬಗ್ಗೆ ಯಾವುದೇ ಕ್ರಮ ಕೈಗೊಂಡಿಲ್ಲ, ಪ್ರಜಾಪ್ರಭುತ್ವ ಬಗ್ಗೆ ಮಾತನಾಡಲು ನಿಮಗೇನು ಹಕ್ಕಿದೆ? -ಮಲ್ಲಿಕಾರ್ಜುನ ಖರ್ಗೆ
ರಾಹುಲ್ ಗಾಂಧಿ ಸರಿಯಾದ ಪಾಠಶಾಲೆಗೆ ಹೋಗಿದ್ದಾರೆ. ಅವರು ಮೋದಿಯವರಿಗೆ ಯಾವ ರೀತಿ ಜಾದೂ ಕೀ ಜಪ್ಪಿ (ಅಪ್ಪುಗೆ) ನೀಡಿದ್ದರೆಂದರೆ ಅದು ಅಪ್ಪುಗೆ ಅಲ್ಲ ಹೊಡೆತ ಆಗಿತ್ತು - ಸಂಜಯ್ ರೌತ್, ಶಿವಸೇನೆ
ಅಭಿವೃದ್ಧಿ ವಿಷಯ ಬಂದಾಗ ಯಾವುದೇ ಪ್ರಶ್ನೆ ಕೇಳಿದರೂ ಸರ್ಕಾರದ್ದು ಒಂದೇ ಉತ್ತರ ಆಗಿರುತ್ತದೆ- ಹಿಂದೂ ಮುಸಲ್ಮಾನ್, ಭಾರತ್- ಪಾಕಿಸ್ತಾನ್ ಮತ್ತು ಕಬರಿಸ್ತಾನ್ ಶಂಶಾನ್
ಜಾದೂ ಕೀ ಜಪ್ಪಿ (ಅಪ್ಪುಗೆ) ಯಾವ ರೀತಿ ದ್ವೇಷದ ಗಾಳಿಯನ್ನು ನಿಲ್ಲಿಸುತ್ತದೆ ಎಂಬುದನ್ನು ರಾಹುಲ್ ತೋರಿಸಿಕೊಟ್ಟಿದ್ದಾರೆ: ಕಾಂಗ್ರೆಸ್ ನೇತಾರ ರಣದೀಪ್ ಸುರ್ಜೇವಾಲಾ
ಹದಿನೈದು ವರ್ಷಗಳ ನಂತರ ಆಡಳಿತರೂಢ ಸರ್ಕಾದ ವಿರುದ್ಧ ವಿಪಕ್ಷವೊಂದು ಅವಿಶ್ವಾಸ ಗೊತ್ತುವಳಿ ನೀಡಿದೆ. 10 ವರ್ಷ ಯುಪಿಎ ಆಡಳಿತನಡೆಸಿದಾಗ ಬಿಜೆಪಿ ಈ ರೀತಿ ಮಾಡಿರಲಿಲ್ಲ. ಯಾಕೆಂದರೆ ಕಾಂಗ್ರೆಸ್‍ಗೆ ಜನರ ವಿಶ್ವಾಸ ಇತ್ತು ಎಂದು ನಮಗೆ ತಿಳಿದಿತ್ತು.- ರಾಜನಾಥ ಸಿಂಗ್
ಅಧಿವೇಶನದಲ್ಲಿ ಮೋದಿಯವರನ್ನು ಆಲಂಗಿಸಿದ ರಾಹುಲ್
ಮೋದಿಯವರನ್ನು ಆಲಂಗಿಸಿದ ನಂತರ ಸದಸ್ಯರನ್ನು ನೋಡಿ ಕಣ್ಣು ಮಿಟುಕಿಸಿದ ರಾಹುಲ್
ಅಧಿವೇಶನದಲ್ಲಿ ನಾಟಕ ಬೇಡ: ಸುಮಿತ್ರಾ ಮಹಾಜನ್
ನೀವು ನನ್ನನ್ನು ಪಪ್ಪು ಎಂದು ಕರೆಯಿರಿ. ನನಗೆ ನಿಮ್ಮ ಮೇಲೆ ಕೋಪವಿಲ್ಲ
ನಾನು ಇಲ್ಲಿಯವರೆಗೆ ನಿಮ್ಮನ್ನು ಟೀಕಿಸಿದೆ. ವೈಯಕ್ತಿಕವಾಗಿ ನನಗೆ ನಿಮ್ಮ ಬಗ್ಗೆ ವಿರೋಧವಿಲ್ಲ - ರಾಹುಲ್ ಗಾಂಧಿ
ಗದ್ದಲ ಮುಂದುವರಿದ ಕಾರಣ ಕಲಾಪವನ್ನು ಕೆಲ ಹೊತ್ತುನಿಲ್ಲಿಸಲಾಯಿತು
ಮೋದಿ ನಗುತ್ತಿರುವುದನ್ನು ನಾನು ನೋಡುತ್ತಿದ್ದೇನೆ. ಆದರೂ ಅವರಲ್ಲಿ ದಿಗಿಲು ಇದೆ, ಅವರು ನನ್ನತ್ತ ನೋಡುತ್ತಿಲ್ಲ, ಅವರು ನನ್ನ ಕಣ್ಣಲ್ಲಿ ಕಣ್ಣಿಟ್ಟು ನೋಡುವುದಿಲ್ಲ - ರಾಹುಲ್ ಗಾಂಧಿ
ಸಂಸತ್ತಿನಹೊರಗೆ ಯಾರು ಏನೇನು ಹೇಳಿದರು?
ಪಂಜಾಬಿಗಳು ಮಾದಕವಸ್ತು ಸೇವಿಸುವವರು ಎಂದು ರಾಹುಲ್ ಹೇಳಿದ್ದರು. ಅವರು ಇವತ್ತು ಏನು ಸೇವನೆ ಮಾಡಿ ಬಂದಿದ್ದಾರೆ?- ಕೇಂದ್ರ ಸಚಿವೆ ಹರಸಿಮ್ರತ್ ಕೌರ್ ಬಾದಲ್
ಸಂಸತ್ತಿನಲ್ಲಿ ಸುಳ್ಳುಗಳ ಮೂಲಕ ತಪ್ಪು ದಾರಿಗೆಳೆದ ರಾಹುಲ್ ಗಾಂಧಿ ವಿರುದ್ಧ ಬಿಜೆಪಿ ಸಂಸದರು ಹಕ್ಕು ಚ್ಯುತಿ ನಿರ್ಣಯ ಕೈಗೊಳ್ಳಲಿದ್ದಾರೆ -ಅನಂತ ಕುಮಾರ್, ಕೇಂದ್ರ ವ್ಯವಹಾರ ಸಚಿವ
ಎನ್ ಡಿ ಎ ವಿರುದ್ಧದ ಅವಿಶ್ವಾಸ ನಿರ್ಣಯವು ಕಾಂಗ್ರೆಸ್‍ನಲ್ಲಿಯೇ ರಾಹುಲ್ ಗಾಂಧಿ ವಿರುದ್ಧ ಅವಿಶ್ವಾಸ ನಾಯಕತ್ವ ಆಗಿ ತಿರುಗಿದರೆ ಅಚ್ಚರಿ ಪಡಬೇಕಾಗಿಲ್ಲ. ಈತ 2019ರ ಚುನಾವಣೆಯನ ನಾಯಕತ್ವವನ್ನು ಸೋತಿದ್ದು ಮಾತ್ರಲ್ಲದೆ ಮಿತ್ರ ಪಕ್ಷಗಳು ಕೂಡಾ ಕೈ ಜೋಡಿಸುವುದು ಅನುಮಾನ - ಅನಂತ್ ಕುಮಾರ್ ಹೆಗಡೆ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.