ಜೈಪುರ: ರಾಜಸ್ಥಾನ ವಿಧಾನಸಭಾ ಚುನಾವಣೆಯಲ್ಲಿ ಬರೋಬ್ಬರಿ 115 ಸ್ಥಾನಗಳಲ್ಲಿ ಗೆಲುವು ಸಾಧಿಸಿದ ಬಿಜೆಪಿ ಸುಲಭವಾಗಿ ಸರ್ಕಾರ ರಚಿಸಲು ಸಜ್ಜಾಗುತ್ತಿದೆ.
119 ಕ್ಷೇತ್ರಗಳಲ್ಲಿ 69 ಸ್ಥಾನಗಳಲ್ಲಿ ಮಾತ್ರ ಕಾಂಗ್ರೆಸ್ ಗೆಲುವು ಸಾಧಿಸಿದೆ. ಮುಖ್ಯಮಂತ್ರಿ ಅಶೋಕ್ ಗೆಹಲೋತ್ ಅವರು ಪಕ್ಷದ ಕಚೇರಿ ತೆರಳಿ ಚುನಾವಣೆಯ ಅವಲೋಕನ ನಡೆಸಿ ಸಂಜೆ ಹೊತ್ತಿಗೆ ರಾಜ್ಯಪಾಲ ಕಲ್ರಾಜ್ ಮಿಶ್ರ ಅವರನ್ನು ಭೇಟಿಯಾಗಿ ರಾಜೀನಾಮೆ ಪತ್ರ ಸಲ್ಲಿಸಲಿದ್ದಾರೆ ಎಂದು ಮೂಲಗಳು ತಿಳಿಸಿವೆ.
200 ಸ್ಥಾನಗಳ ಪೈಕಿ 199 ಸ್ಥಾನಗಳಿಗೆ ನ.25 ರಂದು ಚುನಾವಣೆ ನಡೆದಿತ್ತು.
ರಾಜಸ್ಥಾನದಲ್ಲಿ ಬಿಜೆಪಿ ನಾಯಕಿ, ಮಾಜಿ ಸಿಎಂ ವಸುಂಧರಾ ರಾಜೇ ಝಲ್ರಾಪಟನ್ ವಿಧಾನಸಬಾ ಕ್ಷೇತ್ರದಲ್ಲಿ 53,193 ಮತಗಳಿಂದ ಗೆಲುವು ಸಾಧಿಸಿದ್ದಾರೆ. ‘ದುರಾಡಳಿತ ಕಾಂಗ್ರೆಸ್ ಸರ್ಕಾರವನ್ನು ಕಿತ್ತೆಸೆದು, ಉತ್ತಮ ಆಡಳಿತ ನಡೆಸುವ ಸರ್ಕಾರವನ್ನು ಜನ ಒಪ್ಪಿಕೊಂಡಿದ್ದಾರೆ’ ಎಂದು ರಾಜೇ ಹೇಳಿದ್ದಾರೆ.
ಇನ್ನು, ವಿಧ್ಯಾದರ್‌ನಗರ್ ಕ್ಷೇತ್ರದಿಂದ ಸ್ಪರ್ಧಿಸಿದ್ದ ದಿಯಾ ಕುಮಾರಿ ಕೂಡ 71,368 ಮತಗಳಿಂದ ಗೆಲುವು ಸಾಧಿಸಿದ್ದಾರೆ.
ಗೆಹಲೋತ್ ಸೋಲಿನ ಬಗ್ಗೆ ವ್ಯಂಗ್ಯವಾಡಿರುವ ಕೇಂದ್ರ ಸಚಿವ ಗಜೇಂದ್ರ ಸಿಂಗ್ ಶೇಖಾವತ್ ‘ಮ್ಯಾಜಿಕ್ ಮುಗಿದಿದೆ. ರಾಜಸ್ಥಾನವು ಜಾದೂಗಾರನ ಕಾಟದಿಂದ ಹೊರಬಂದಿದೆ. ಮಹಿಳೆಯರ ಗೌರವ ಮತ್ತು ಬಡವರ ಕಲ್ಯಾಣಕ್ಕಾಗಿ ಜನರು ಮತ ಹಾಕಿದ್ದಾರೆ’ ಎಂದಿದ್ದಾರೆ.
ಮುಖ್ಯಮಂತ್ರಿ ಪೈಪೋಟಿಯಲ್ಲಿರುವವರು: ಮಾಜಿ ಸಿಎಂ ವಸುಂದರಾ ರಾಜೇ, ಕೇಂದ್ರ ಸಜಿವ ಗಜೇಂದ್ರ ಶೇಖಾವತ್, ಸತೀಶ್ ಪೂನ್ಯಾ, ರಾಜ್ಯ ಘಟಕದ ಅಧ್ಯಕ್ಷ ಸಿ.ಪಿ ಜೋಶಿ, ದಿಯಾ ಕುಮಾರಿ, ರಾಜಸ್ಥಾನದ ಯೋಗಿ ಆದಿತ್ಯನಾಥ್ ಎಂದೇ ಗುರುತಿಸಿಕೊಂಡಿರುವ ಬಾಬಾ ಬಾಲಕ್ ನಾಥ್
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.