ಜೈಪುರ: ವಿಧಾನಸಭೆ ಚುನಾವಣೆಗೆ ಸಜ್ಜಾಗುತ್ತಿರುವ ರಾಜಸ್ಥಾನದಲ್ಲಿ ನೀತಿ ಸಂಹಿತೆ ಜಾರಿ ಮಾಡಿದ 48 ಗಂಟೆಯೊಳಗೆ ಸಿ–ವಿಜಿಲ್ ಆ್ಯಪ್ ಮೂಲಕ 500ಕ್ಕೂ ಹೆಚ್ಚು ದೂರುಗಳು ದಾಖಲಾಗಿವೆ ಎಂದು ಅಧಿಕಾರಿಗಳು ಬುಧವಾರ ಹೇಳಿದ್ದಾರೆ.
ಅವುಗಳಲ್ಲಿ 134 ದೂರುಗಳನ್ನು ಸಮಯೋಚಿತ ದೂರುಗಳು ಎಂದು ಪರಿಗಣಿಸಿದ ಜಿಲ್ಲಾ ಚುನಾವಣಾ ಅಧಿಕಾರಿಗಳು, ನಿಗದಿತ ಸಮಯದಲ್ಲಿ ದೂರುಗಳನ್ನು ಇತ್ಯರ್ಥಪಡಿಸಿದರು. 115 ದೂರುಗಳನ್ನು ಅವರು ತಿರಸ್ಕರಿಸಿದ್ದಾರೆ. ಇನ್ನೂ ಆರು ದೂರುಗಳನ್ನು ಇತ್ಯರ್ಥಗೊಳಿಸಿಲ್ಲ. ಜಿಲ್ಲಾ ನಿಯಂತ್ರಣ ಕೊಠಡಿಯು 242 ದೂರುಗಳನ್ನು ತಿರಸ್ಕರಿಸಿದೆ ಎಂದು ಮುಖ್ಯ ಚುನಾವಣಾಧಿಕಾರಿ ಪ್ರವೀಣ್ ಗುಪ್ತಾ ಅವರು ಹೇಳಿದ್ದಾರೆ.
ಒಟ್ಟು ದೂರುಗಳಲ್ಲಿ 79 ದೂರುಗಳು ಜೈಪುರ ಜಿಲ್ಲೆಯಿಂದ ಬಂದಿವೆ ಎಂದು ಅಧಿಕಾರಿ ಹೇಳಿದ್ದಾರೆ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.