ರಾಜಸ್ಥಾನದ ಮತದಾರರು ಕಾಂಗ್ರೆಸ್ನ ದುರಾಡಳಿತವನ್ನು ತಿರಸ್ಕರಿಸಿ, ಬಿಜೆಪಿಯ ಉತ್ತಮ ಆಡಳಿತ ಒಪ್ಪಿಕೊಂಡಿದ್ದಾರೆ. ಇದು ರಾಜ್ಯದ ಜನರಿಗೆ ದೊರೆತ ಗೆಲುವು
–ವಸುಂಧರಾ ರಾಜೇ, ಮಾಜಿ ಮುಖ್ಯಮಂತ್ರಿ
ಪ್ರಧಾನಿ ನರೇಂದ್ರ ಮೋದಿ ಹಾಗೂ ಪಕ್ಷದ ಮುಖಂಡರಿಗೆ ಗೆಲುವಿನ ಶ್ರೇಯ ಸಲ್ಲುತ್ತದೆ. ರಾಜ್ಯದಲ್ಲಿ ಒಳ್ಳೆಯ ಆಡಳಿತ ಮತ್ತು ಅಭಿವೃದ್ಧಿಯನ್ನು ಖಾತರಿಪಡಿಸುತ್ತೇವೆ
–ದಿಯಾ ಕುಮಾರಿ, ಬಿಜೆಪಿ ನಾಯಕಿ
ಇದು ಅನಿರೀಕ್ಷಿತ ಫಲಿತಾಂಶ. ಸರ್ಕಾರದ ಯೋಜನೆಗಳನ್ನು ಜನರ ಬಳಿ ಸಂಪೂರ್ಣವಾಗಿ ತಲುಪಿಸಲು ವಿಫಲರಾಗಿರುವುದನ್ನು ಈ ಸೋಲು ತೋರಿಸುತ್ತದೆ. ಜನಾದೇಶಕ್ಕೆ ತಲೆಬಾಗಿದ್ದೇವೆ
ಅಶೋಕ್ ಗೆಹಲೋತ್, ಮುಖ್ಯಮಂತ್ರಿ
ಪಕ್ಷವು ಜನಾದೇಶವನ್ನು ಗೌರವಿಸುತ್ತದೆ ಮತ್ತು ಅವರಿಗಾಗಿ ಕೆಲಸ ಮಾಡುವುದನ್ನು ಮುಂದುವರಿಸಲಿದೆ. ಗೆದ್ದ ಅಭ್ಯರ್ಥಿಗಳ ಸಭೆ ಮಂಗಳವಾರ ಜೈಪುರದಲ್ಲಿ ನಡೆಯಲಿದೆ
ಗೋವಿಂದ್ ಸಿಂಗ್ ಡೊಟಾಸರಾ, ಕಾಂಗ್ರೆಸ್ ರಾಜ್ಯ ಘಟಕದ ಅಧ್ಯಕ್ಷ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.