ಜೈಪುರ: ರಾಜಸ್ಥಾನದ ನೀಮ್ ಕ ಥಾನಾ ಜಿಲ್ಲೆಯಲ್ಲಿಯ ಹಿಂದೂಸ್ತಾನ್ ಕಾಪರ್ ಲಿಮಿಟೆಡ್ ಸಂಸ್ಥೆಯ 15 ಸಿಬ್ಬಂದಿಯು ಗಣಿಯಲ್ಲಿ ಸಿಲುಕಿದ್ದ ಘಟನೆ ಮಂಗಳವಾರ ತಡರಾತ್ರಿ ನಡೆಯಿತು. ಅವರಲ್ಲಿ 14 ಮಂದಿಯನ್ನು ಸುರಕ್ಷಿತವಾಗಿ ಹೊರಗೆ ಕರೆತರಲಾಗಿದೆ. ಸಂಸ್ಥೆಯ ಮುಖ್ಯ ವಿಚಕ್ಷಣಾಧಿಕಾರಿ ಉಪೇಂದ್ರ ಕುಮಾರ್ ಪಾಂಡೆ ಎಂಬುವವರು ಮೃತಪಟ್ಟಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಬಾಕಿ 14 ಮಂದಿಯನ್ನು ಜೈಪುರದ ಆಸ್ಪತ್ರೆಗೆ ಕಳುಹಿಸಲಾಗಿದೆ ಎಂದು ಅವರು ತಿಳಿಸಿದರು.
ಗಣಿ ಪರಿಶೀಲನೆ ನಡೆಸುವ ಸಲುವಾಗಿ ವಿಚಕ್ಷಣಾ ತಂಡವು ಕೋಲ್ಕತ್ತದಿಂದ ರಾಜಸ್ಥಾನಕ್ಕೆ ಬಂದಿತ್ತು. ಸ್ಥಳೀಯ ಅಧಿಕಾರಿಗಳೂ ಅವರ ಜೊತೆಗೂಡಿದ್ದರು. ಪರಿಶೀಲನೆ ನಡೆಸಿ ಮರಳುತ್ತಿದ್ದಾಗ ಅವರನ್ನು ಹೊತ್ತೊಯ್ಯುತ್ತಿದ್ದ ಕೇಬಲ್ ವಾಹನದ ಹಗ್ಗ ತುಂಡಾದ ಕಾರಣ ಅವರು 1,875 ಅಡಿ ಅಡಿ ಆಳದ ಕಂದಕದಲ್ಲಿ ಸಿಲುಕಿದರು ಎಂದು ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.