ADVERTISEMENT

ಹೊಟ್ಟೆ ನೋವೆಂದು ಆಸ್ಪತ್ರೆಗೆ ಹೋದ ಅಧಿಕಾರಿಣಿ ಸಾವು: ವೈದ್ಯರ ನಿರ್ಲಕ್ಷ್ಯ ಆರೋಪ

ರಾಜಸ್ಥಾನ ಆಡಳಿತ ಸೇವೆಯ 2016ನೇ ಬ್ಯಾಚ್‌ನ ಅಧಿಕಾರಿ, ಉಪವಿಭಾಗಾಧಿಕಾರಿ ಪ್ರಿಯಾಂಕಾ ಬಿಷ್ಣೋಯ್ (35) ಮೃತರು.

ಪಿಟಿಐ
Published 20 ಸೆಪ್ಟೆಂಬರ್ 2024, 4:37 IST
Last Updated 20 ಸೆಪ್ಟೆಂಬರ್ 2024, 4:37 IST
<div class="paragraphs"><p>ಪ್ರಿಯಾಂಕಾ ಬಿಷ್ಣೋಯ್</p></div>

ಪ್ರಿಯಾಂಕಾ ಬಿಷ್ಣೋಯ್

   

ಜೋಧಪುರ: ಹೊಟ್ಟೆ ನೋವು ಎಂದು ಆಸ್ಪತ್ರೆಗೆ ದಾಖಲಾಗಿದ್ದ ರಾಜಸ್ಥಾನದ ರಾಜ್ಯ ಆಡಳಿತ ಸೇವೆಯ ಅಧಿಕಾರಿಣಿಯೊಬ್ಬರು ಶಸ್ತ್ರಚಿಕಿತ್ಸೆಯ ಅಡ್ಡಪರಿಣಾಮಗಳಿಂದ ಮೃತಪಟ್ಟಿದ್ದು, ವೈದ್ಯರ ನಿರ್ಲಕ್ಷ್ಯ ಎಂದು ಕುಟುಂಬದವರು ಆರೋಪಿಸಿದ್ದಾರೆ.

ರಾಜಸ್ಥಾನ ಆಡಳಿತ ಸೇವೆಯ 2016ನೇ ಬ್ಯಾಚ್‌ನ ಅಧಿಕಾರಿ, ಉಪವಿಭಾಗಾಧಿಕಾರಿ ಪ್ರಿಯಾಂಕಾ ಬಿಷ್ಣೋಯ್ (35) ಮೃತರು.

ADVERTISEMENT

ಕಳೆದ ಸೆಪ್ಟೆಂಬರ್ 6ರಂದು ಹೊಟ್ಟೆ ನೋವು ಎಂದು ಪ್ರಿಯಾಂಕಾ ಅವರು ಜೋಧಪುರದ ಏಮ್ಸ್ ಆಸ್ಪತ್ರೆಗೆ ದಾಖಲಾಗಿದ್ದರು. ಅವರಿಗೆ ಶಸ್ತ್ರಚಿಕಿತ್ಸೆ (botched' surgery– hysterectomy ) ನಡೆಸಲಾಗಿತ್ತು. ಆದರೆ ಶಸ್ತ್ರಚಿಕಿತ್ಸೆ ನಂತರ ಅವರ ಆರೋಗ್ಯದಲ್ಲಿ ಏರುಪೇರಾಗಿತ್ತು.

ಬುಧವಾರ ಅವರನ್ನು ಅಹಮದಾಬಾದ್‌ನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ, ಚಿಕಿತ್ಸೆ ಫಲಿಸದೇ ಮೃತರಾಗಿದ್ದಾರೆ.

ಶಸ್ತ್ರಚಿಕಿತ್ಸೆ ನಡೆಸಿದ ವೈದ್ಯರ ಲೋಪದಿಂದಲೇ ಪ್ರಿಯಾಂಕಾ ಅವರು ಮೃತರಾಗಿದ್ದಾರೆ ಎಂದು ಗುರುವಾರ ಬಿಷ್ಣೋಯ್ ಸಮುದಾಯದವರು ಹಾಗೂ ಕುಟುಂಬದವರು ಏಮ್ಸ್ ಆಸ್ಪತ್ರೆ ಎದುರು ಪ್ರತಿಭಟನೆ ನಡೆಸಿದ್ದರು.

ನಿಯಮಾವಳಿ ಪ್ರಕಾರ ಪ್ರಾಥಮಿಕ ತನಿಖೆ ಕೈಗೊಂಡು ಲೋಪ ಆಗಿದ್ದು ಕಂಡು ಬಂದರೆ ಎಫ್‌ಐಆರ್ ದಾಖಲಿಸಿ ಕ್ರಮ ಕೈಗೊಳ್ಳುವ ಭರವಸೆಯನ್ನು ರಾಜಸ್ಥಾನ ಸರ್ಕಾರದ ಹಿರಿಯ ಅಧಿಕಾರಿಯೊಬ್ಬರು ನೀಡಿದ್ದರಿಂದ ಪ್ರತಿಭಟನೆ ಕೈ ಬಿಡಲಾಗಿದೆ.

ಗುರುವಾರ ಸಂಜೆಯೇ ಬಿಕಾನೇರ್‌ನಲ್ಲಿ ಪ್ರಿಯಾಂಕಾ ಅವರ ಅಂತ್ಯಕ್ರಿಯೆ ನೆರವೇರಿಸಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.