ADVERTISEMENT

ರಾಜಸ್ಥಾನ: ತೆರೆದ ಜೈಲಿನಲ್ಲಿ ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡ ಕೈದಿ

ಪಿಟಿಐ
Published 17 ಜುಲೈ 2024, 11:16 IST
Last Updated 17 ಜುಲೈ 2024, 11:16 IST
<div class="paragraphs"><p> ಸಾಂದರ್ಭಿಕ&nbsp; ಚಿತ್ರ</p></div>

ಸಾಂದರ್ಭಿಕ  ಚಿತ್ರ

   

ಜೈಪುರ: ಅಪ್ರಾಪ್ತನ ಕೊಲೆ ಪ್ರಕರಣದಲ್ಲಿ ಜೀವಾವಧಿ ಶಿಕ್ಷೆ ಅನುಭವಿಸುತ್ತಿದ್ದ ಕೈದಿಯೊಬ್ಬು ಸಂಗಾನೇರ್‌ ತೆರೆದ ಜೈಲಿನಲ್ಲಿ ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

ಈ ಬಗ್ಗೆ ನ್ಯಾಯಾಂಗ ತನಿಖೆಗೆ ಆದೇಶಿಸಲಾಗಿದೆ ಎಂದು ಮಾಲ್ಪುರ ಗೇಟ್ ಪೊಲೀಸ್ ಠಾಣೆಯ ಅಧಿಕಾರಿ ಹೇಮಂತ್‌ ಸಿಂಗ್ ತಿಳಿಸಿದ್ದಾರೆ. ಮಂಗಳವಾರ ಸಂಜೆ ಈ ಘಟನೆ ನಡೆದಿದೆ ಎಂದು ಅವರು ಹೇಳಿದ್ದಾರೆ.

ADVERTISEMENT

43 ವರ್ಷದ ಅಂಕುರ್ ಪಾಡಿಯಾ ಎಂಬುವವನೇ ಆತ್ಮಹತ್ಯೆಗೆ ಶರಣಾದ ವ್ಯಕ್ತಿ. ‌2014ರಲ್ಲಿ ಕೋಟಾದಲ್ಲಿ 7 ವರ್ಷದ ಬಾಲಕನನ್ನು ಅಪಹರಿಸಿ ಕೊಲೆ ಮಾಡಿದ ಆರೋಪ ಸಾಬೀತಾಗಿ, 2018ರಲ್ಲಿ ಗಲ್ಲು ಶಿಕ್ಷೆಗೆ ಗುರಿಯಾಗಿದ್ದನು.

ಇದರ ವಿರುದ್ಧ ಹೈಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಿದ್ದನು. 2021ರಲ್ಲಿ ಹೈಕೋರ್ಟ್‌ ಅವರ ಶಿಕ್ಷೆಯನ್ನು ಜೀವಾವಧಿ ಶಿಕ್ಷೆಗೆ ಇಳಿಸಿತ್ತು. ಆದರೆ 25 ವರ್ಷಗಳ ಜೈಲು ಶಿಕ್ಷೆ ಅನುಭವಿಸಬೇಕು ಎಂದು ಆದೇಶಿಸಿತ್ತು.

ಕೆಲ ದಿನಗಳ ಹಿಂದೆ ಅವರನ್ನು ಬಿಕಾನೇರ್‌ನ ತೆರೆದ ಜೈಲಿಗೆ ಹಾಕಲಾಗಿತ್ತು.

ಹಗಲು ಸಮಯದಲ್ಲಿ ಜೈಲಿನ ಆವರಣದ ಒಳಗೆ ಕೆಲಸ ಮಾಡಿ , ಸಂಜೆ ಮೇಲೆ ಮರಳುವ ಅವಕಾಶ ಈ ಜೈಲಿನಲ್ಲಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.