ಚೆನ್ನೈ: ಮಾಜಿ ಪ್ರಧಾನಿ ರಾಜೀವ್ ಗಾಂಧಿ ಹತ್ಯೆ ಪ್ರಕರಣದಲ್ಲಿ ಜೀವಾವಧಿ ಶಿಕ್ಷೆ ಅನುಭವಿಸುತ್ತಿರುವ ನಳಿನಿ ಶ್ರೀಹರನ್ ಸೋಮವಾರ ರಾತ್ರಿ ಜೈಲಿನಲ್ಲಿಯೇ ಆತ್ಮಹತ್ಯೆಗೆ ಯತ್ನಿಸಿದ್ದಾರೆ.
30 ವರ್ಷಗಳಿಂದ ವೆಲ್ಲೂರು ಜೈಲಿನಲ್ಲಿ ನಳಿನಿ ಸೆರೆವಾಸ ಅನುಭವಿಸುತ್ತಿದ್ದು, ಇದೇ ಮೊದಲ ಬಾರಿಗೆ ಅವರುಇಂತಹ ನಿರ್ಧಾರ ತೆಗೆದುಕೊಂಡಿದ್ದಾರೆಎಂದು ಆಕೆಯ ಪರ ವಕೀಲರು ಹೇಳಿದ್ದಾರೆ.
'30 ವರ್ಷಗಳ ಜೈಲುವಾಸದಲ್ಲಿ ಇಂತಹ ಮನೋಭಾವವನ್ನು ಆಕೆಎಂದಿಗೂ ತೋರಿಸಿಲ್ಲ. ಘಟನೆಯ ಬಗ್ಗೆ ತನಿಖೆಯಾಗಬೇಕೆಂದು ನಾವು ಒತ್ತಾಯಿಸುತ್ತೇವೆ. ನಳಿನಿಯನ್ನು ಪುಗಲ್ ಜೈಲಿಗೆ ಸ್ಥಳಾಂತರಿಸುವಂತೆ ತಮಿಳುನಾಡು ಮುಖ್ಯಮಂತ್ರಿಗಳಿಗೆ ವಿನಂತಿಸುತ್ತೇವೆ. ಕಾರಣ, ವೆಲ್ಲೂರು ಜೈಲಿನಲ್ಲಿ ಆಕೆಸುರಕ್ಷಿತವಾಗಿಲ್ಲ' ಎಂದು ಅವರು ತಿಳಿಸಿದ್ದಾರೆ.
ಘಟನೆಯ ಹಿನ್ನೆಲೆ: ವೆಲ್ಲೂರುಜೈಲಿನಲ್ಲಿ ಶಿಕ್ಷೆ ಅನುಭವಿಸುತ್ತಿರುವ ನಳಿನಿ ಮತ್ತು ಸಹ ಖೈದಿಯೊಬ್ಬರನಡುವೆ ಜಗಳವಾಗಿದೆ. ಆ ವಿಚಾರವನ್ನು ಜೈಲರ್‌ಗೆ ತಿಳಿಸಿರುವ ಸಹ ಖೈದಿಯು ತಮ್ಮನ್ನುಬೇರೆ ಬ್ಲಾಕ್‌ಗೆ ವರ್ಗಾಯಿಸುವಂತೆ ಮನವಿ ಮಾಡಿದ್ದಾರೆ. ಘಟನೆಯ ತನಿಖೆಗೆ ಜೈಲರ್ ಆದೇಶಿಸಿದ್ದಾರೆ. ಇದೇ ಕಾರಣಕ್ಕೆ ಮನನೊಂದು ನಳಿನಿ ಆತ್ಮಹತ್ಯೆಗೆ ಯತ್ನಿಸಿದ್ದಾರೆಎಂಬುದಾಗಿ ತಿಳಿದುಬಂದಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.