ಅಹಮದಾಬಾದ್: ರಾಜಕೋಟ್‌ನ ಪಟ್ಟಣ ಯೋಜನಾಧಿಕಾರಿಯ ತಮ್ಮನ ಕಚೇರಿಯಿಂದ ₹16 ಕೋಟಿ ಮೌಲ್ಯದ 22 ಕೆ.ಜಿ ಚಿನ್ನ ಮತ್ತು ₹ 3 ಕೋಟಿ ನಗದನ್ನು ಗುಜರಾತ್ ಭ್ರಷ್ಟಾಚಾರ ನಿಗ್ರಹ ಪಡೆ (ಎಸಿಬಿ) ಜಪ್ತಿ ಮಾಡಿದೆ.
27 ಜನರು ಬಲಿಯಾಗಿದ್ದ, ಮನರಂಜನಾ ತಾಣದಲ್ಲಿ ಸಂಭವಿಸಿದ್ದ ಬೆಂಕಿ ಅವಘಡದ ಪ್ರಕರಣಕ್ಕೆ ಸಂಬಂಧಿಸಿದಂತೆ ತಪಾಸಣೆ ನಡಸಿ, ಜಪ್ತಿ ಮಾಡಿಕೊಳ್ಳಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಸದ್ಯ, ಸೇವೆಯಿಂದ ಅಮಾನತುಗೊಂಡಿರುವ ಪಟ್ಟಣದ ಯೋಜನಾಧಿಕಾರಿ ಸಾಗತೀಯ ಅವರ ತಮ್ಮ ದಿಲೀಪ್ ಅವರ ಕಚೇರಿಯಿಂದ ನಗದು, ಚಿನ್ನವನ್ನು ಜಪ್ತಿ ಮಾಡಲಾಗಿದೆ. ಈ ಪ್ರಕರಣದಡಿ ಸಾಗತೀಯಾ ಅವರನ್ನು ಬಂಧಿಸಿ ಕೋರ್ಟ್‌ಗೆ ಹಾಜರುಪಡಿಸಿದ್ದು, ಹೆಚ್ಚಿನ ವಿಚಾರಣೆಗೆ 6 ದಿನಕ್ಕೆ ವಶಕ್ಕೆ ಪಡೆಯಲಾಗಿದೆ ಎಂದು ತಿಳಿಸಿದ್ದಾರೆ.
ಅಧಿಕಾರಿಗಳು ಸಾಗತೀಯ ಅವರನ್ನು ಮೇ 25ರಂದು ಬಂಧಿಸಿದ್ದರು. ಈ ಪ್ರಕರಣಕ್ಕೆ ಸಂಬಂಧಿಸಿ ಆರು ಮಂದಿ ಸರ್ಕಾರಿ ನೌಕರರು ಸೇರಿದಂತೆ ಒಟ್ಟು 15 ಜನರನ್ನು ಅಧಿಕಾರಿಗಳು ಬಂಧಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.