ADVERTISEMENT

ಕಳೆದ 3 ತಿಂಗಳಲ್ಲಿ ರಾಜ್‌ಕೋಟ್ ಸರ್ಕಾರಿ ಆಸ್ಪತ್ರೆಯಲ್ಲಿ 269 ಶಿಶು ಮರಣ

ಏಜೆನ್ಸೀಸ್
Published 5 ಜನವರಿ 2020, 11:36 IST
Last Updated 5 ಜನವರಿ 2020, 11:36 IST
ಶಿಶು  (ಸಾಂದರ್ಭಿಕ ಚಿತ್ರ)
ಶಿಶು (ಸಾಂದರ್ಭಿಕ ಚಿತ್ರ)   

ರಾಜ್‌ಕೋಟ್ (ಗುಜರಾತ್) : ಗುಜರಾತಿನ ರಾಜ್‌ಕೋಟ್‌ದಲ್ಲಿರುವ ಸರ್ಕಾರಿ ಆಸ್ಪತ್ರೆಯಲ್ಲಿ ಕಳೆದ ಮೂರು ತಿಂಗಳಲ್ಲಿ 269 ಶಿಶುಗಳು ಸಾವಿಗೀಡಾಗಿವೆ. 2019 ಡಿಸೆಂಬರ್ ತಿಂಗಳಲ್ಲಿ ಅತೀ ಹೆಚ್ಚು ಶಿಶುಗಳು ಇಲ್ಲಿ ಮೃತಪಟ್ಟಿವೆಎಂದು ಎಎನ್‌ಐ ಸುದ್ದಿಸಂಸ್ಥೆ ವರದಿ ಮಾಡಿದೆ.

ರಾಜ್‌ಕೋಟ್ ಸಿವಿಲ್ ಆಸ್ಪತ್ರೆಯಲ್ಲಿ ಅಕ್ಟೋಬರ್ ತಿಂಗಳಲ್ಲಿ 87, ನವೆಂಬರ್ ತಿಂಗಳಲ್ಲಿ 71 ಮತ್ತು ಡಿಸೆಂಬರ್ ತಿಂಗಳಲ್ಲಿ 111 ಶಿಶುಗಳು ಸಾವಿಗೀಡಾಗಿವೆ ಎಂದು ಆಸ್ಪತ್ರೆಯ ಮುಖ್ಯಸ್ಥ ಮನೀಶ್ ಮೆಹ್ತಾ ಹೇಳಿದ್ದಾರೆ.

ಇಲ್ಲಿ ದಾಖಲಾಗುವ ಎಲ್ಲ ರೋಗಿಗಳ ಶುಶ್ರೂಷೆಗೆ ಬೇಕಾದ ವ್ಯವಸ್ಥೆ ಇಲ್ಲ. ಹಾಗಾಗಿ 500 ಹಾಸಿಗೆಗಳನ್ನು ಹೊಂದಿರುವ ಹೊಸ ಆಸ್ಪತ್ರೆಯೊಂದನ್ನು ಸರ್ಕಾರ ನಿರ್ಮಿಸುತ್ತಿದೆ ಎಂದಿದ್ದಾರೆ ಮೆಹ್ತಾ.

ADVERTISEMENT

ಸರ್ಕಾರಿ ಆಸ್ಪತ್ರೆಗಳಲ್ಲಿ ಶಿಶು ಮರಣಗಳ ಬಗ್ಗೆ ಮಾಧ್ಯಮದವರು ಕೇಳಿದ ಪ್ರಶ್ನೆಗೆ ಉತ್ತರಿಸಲು ಗುಜರಾತ್ ಮುಖ್ಯಮಂತ್ರಿ ವಿಜಯ್ ರೂಪಾನಿ ನಿರಾಕರಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.