ADVERTISEMENT

ರಾಜ್ಯಸಭೆ ಚುನಾವಣೆ| ಯಾವ ರಾಜ್ಯಗಳಲ್ಲಿ ಯಾರಿಗೆ ಎಷ್ಟು ಸೀಟು? ಇಲ್ಲಿದೆ ಮಾಹಿತಿ 

​ಪ್ರಜಾವಾಣಿ ವಾರ್ತೆ
Published 11 ಜೂನ್ 2022, 5:38 IST
Last Updated 11 ಜೂನ್ 2022, 5:38 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ    

ಬೆಂಗಳೂರು: ರಾಜ್ಯಸಭೆಯಲ್ಲಿ ತೆರವಾಗಿದ್ದ 57 ಸ್ಥಾನಗಳಿಗೆ ನಿಗದಿಯಾಗಿದ್ದ ಚುನಾವಣೆ ಅಂತಿಮಗೊಂಡಿದೆ.

ಒಟ್ಟು 57 ಸ್ಥಾನಗಳ ಪೈಕಿ, 41 ಸ್ಥಾನಗಳಿಗೆ 11 ರಾಜ್ಯಗಳಲ್ಲಿ ಅವಿರೋಧ ಆಯ್ಕೆ ನಡೆದಿತ್ತು. ಉಳಿದ 16 ಸ್ಥಾನಗಳಿಗೆ ಕರ್ನಾಟಕ ಸೇರಿ 4 ರಾಜ್ಯಗಳಲ್ಲಿ ಶುಕ್ರವಾರ ಚುನಾವಣೆ ನಡೆದವು.

ರಾಜ್ಯಾವಾರು ಫಲಿತಾಂಶ

ADVERTISEMENT

ಮಹಾರಾಷ್ಟ್ರ (6)

ಬಿಜೆಪಿ (3) – ಪಿಯೂಷ್ ಗೋಯಲ್, ಅನಿಲ್ ಬೋಂಡೆ, ಧನಂಜಯ್ ಮಹಾದಿಕ್
ಶಿವಸೇನೆ(1) - ಸಂಜಯ್ ರಾವತ್
ಎನ್‌ಸಿಪಿ(1) - ಪ್ರಫುಲ್ ಪಟೇಲ್
ಕಾಂಗ್ರೆಸ್ (1) - ಇಮ್ರಾನ್ ಪ್ರತಾಪಗಡಿ

ಕರ್ನಾಟಕ (4)

ಬಿಜೆಪಿ (3) - ನಿರ್ಮಲಾ ಸೀತಾರಾಮನ್, ಜಗ್ಗೇಶ್, ಲಹರ್ ಸಿಂಗ್ ಸಿರೋಯಾ
ಕಾಂಗ್ರೆಸ್ (1)- ಜೈರಾಮ್ ರಮೇಶ್

ರಾಜಸ್ಥಾನ (4)

ಕಾಂಗ್ರೆಸ್‌(3)– ಪ್ರಮೋದ್‌ ತಿವಾರಿ, ರಣದೀಪ್‌ ಸಿಂಗ್‌ ಸುರ್ಜೆವಾಲ, ಮುಕುಲ್‌ ವಾಸ್ನಿಕ್‌
ಬಿಜೆಪಿ (1)– ಘನಶ್ಯಾಮ್‌ ತಿವಾರಿ

ಹರಿಯಾಣ (2)

ಬಿಜೆಪಿ (1) - ಕೃಷ್ಣಲಾಲ್‌ ಪನ್ವರ್
ಬಿಜೆಪಿ ಬೆಂಬಲಿತ ಸ್ವತಂತ್ರ ಅಭ್ಯರ್ಥಿ (1) - ಕಾರ್ತಿಕೇಯ ಶರ್ಮಾ

ಅವಿರೋಧ ಆಯ್ಕೆ

ಉತ್ತರ ಪ್ರದೇಶದಲ್ಲಿ 11, ತಮಿಳುನಾಡಿನಲ್ಲಿ 6, ಬಿಹಾರದಲ್ಲಿ 5, ಆಂಧ್ರ ಪ್ರದೇಶದಲ್ಲಿ 4, ಮಧ್ಯಪ್ರದೇಶ ಮತ್ತು ಒಡಿಶಾದಲ್ಲಿ ತಲಾ ಮೂವರು, ಛತ್ತೀಸ್‌ಗಢ, ಪಂಜಾಬ್, ತೆಲಂಗಾಣ ಮತ್ತು ಜಾರ್ಖಂಡ್‌ನಲ್ಲಿ ತಲಾ ಇಬ್ಬರು ಮತ್ತು ಉತ್ತರಾಖಂಡದಲ್ಲಿ ಒಬ್ಬ ಅಭ್ಯರ್ಥಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

ಇದರಲ್ಲಿ ಬಿಜೆಪಿ 14, ಕಾಂಗ್ರೆಸ್‌, ವೈಎಸ್‌ಆರ್‌ಸಿಪಿ ತಲಾ 4, ಡಿಎಂಕೆ, ಬಿಜೆಡಿ ತಲಾ 3, ಎಐಎಡಿಎಂಕೆ, ಆರ್‌ಜೆಡಿ, ಟಿಆರ್‌ಎಸ್‌, ಎಎಪಿ, ಎಸ್‌ಪಿ ತಲಾ 2, ಜೆಡಿಯು, ಜೆಎಂಎಂ, ಆರ್‌ಎಲ್‌ಡಿ ತಲಾ ಒಂದೊಂದು ಸ್ಥಾನ ಗಳಿಸಿದ್ದವು.

ಒಟ್ಟಾರೆ 57 ಸ್ಥಾನಗಳಲ್ಲಿ ಬಿಜೆಪಿ 22, ಕಾಂಗ್ರೆಸ್‌ಗೆ 9 ಸ್ಥಾನಗಳು ಸಿಕ್ಕಿವೆ.

ಇವುಗಳನ್ನೂ ಓದಿ...

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.