ನವದೆಹಲಿ/ ಶಿಮ್ಲಾ: ಹಿಮಾಚಲ ಪ್ರದೇಶ ವಿಧಾನ ಸಭೆಯಿಂದ ರಾಜ್ಯಸಭೆಯ ಏಕೈಕ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್ ತೀವ್ರ ಮುಖಭಂಗ ಅನುಭವಿಸಿದೆ. ಪಕ್ಷದ ಅತೃಪ್ತ ಶಾಸಕರು ಅಡ್ಡ ಮತದಾನ ಮಾಡಿ ಬಿಜೆಪಿ ಅಭ್ಯರ್ಥಿಯ ಗೆಲುವಿಗೆ ಕಾರಣರಾಗಿದ್ದಾರೆ.
ಹಿಮಾಲಯದ ತಪ್ಪಲಲ್ಲಿರುವ ಈ ರಾಜ್ಯದಲ್ಲಿ ಮಂಗಳವಾರ ನಡೆದ ಅನಿರೀಕ್ಷಿತ ಬೆಳವಣಿಗೆಯಿಂದಾಗಿ ಕಾಂಗ್ರೆಸ್‌ಗೆ ಅಧಿಕಾರ ಕಳೆದುಕೊಳ್ಳುವ ಆತಂಕ ಎದುರಾಗಿದೆ.
ಇಲ್ಲಿ ಕಾಂಗ್ರೆಸ್‌ನ ಅಭಿಷೇಕ್ ಮನು ಸಿಂಘ್ವಿ ಮತ್ತು ಬಿಜೆಪಿಯ ಹರ್ಷ ಮಹಾಜನ್ ನಡುವೆ ಪೈಪೋಟಿ ಇತ್ತು. ಮತದಾನದ ಬಳಿಕ ಇಬ್ಬರೂ 34–34ರಲ್ಲಿ ಸಮಬಲ ಸಾಧಿಸಿದರು. ಚೀಟಿ ಎತ್ತಿದಾಗ ಗೆಲುವಿನ ಅದೃಷ್ಟ ಮಹಾಜನ್‌ಗೆ ಒಲಿಯಿತು.
ಕಾಂಗ್ರೆಸ್‌ನ ಐವರು ಶಾಸಕರನ್ನು ‘ಅಪಹರಣ’ ಮಾಡಲಾಗಿದೆ ಎಂದು ಹಿಮಾಚಲ ಪ್ರದೇಶದ ಮುಖ್ಯಮಂತ್ರಿ ಸುಖ್ವಿಂದರ್ ಸಿಂಗ್ ಸುಖು ಅವರು ಮತದಾನ ಪ್ರಕ್ರಿಯೆಯ ಬೆನ್ನಲ್ಲೇ ಆರೋಪಿಸಿದ್ದಾರೆ. ‘ಬಿಜೆಪಿಯವರು ಸಿಆರ್‌ಪಿಎಫ್ ಮತ್ತು ಹರಿಯಾಣ ಪೊಲೀಸ್ ಸಿಬ್ಬಂದಿಯ ನೆರವಿನಿಂದ ಶಾಸಕರನ್ನು ಹರಿಯಾಣದ ಪಂಚಕುಲಾಕ್ಕೆ ಕರೆದೊಯ್ದಿದ್ದಾರೆ ಎಂದು ದೂರಿದ್ದಾರೆ.
ಕಾಂಗ್ರೆಸ್ ಶಾಸಕ ಸುಧೀರ್ ಶರ್ಮಾ, ಒಬ್ಬರು ಪಕ್ಷೇತರ ಶಾಸಕ ಮತ್ತು ಬಿಜೆಪಿಯ ಕೆಲವು ಶಾಸಕರು ಪಂಚಕುಲಾದ ಅತಿಥಿಗೃಹವೊಂದಕ್ಕೆ ತೆರಳುತ್ತಿರುವ ವಿಡಿಯೊ ಕೂಡಾ ಹರಿದಾಡಿದೆ.
ಬಿಜೆಪಿಯು ವಿಶ್ವಾಸಮತಕ್ಕೆ ಒತ್ತಾಯಿ ಸಲಿದೆಯೇ ಎಂಬ ಪ್ರಶ್ನೆಗೆ ವಿರೋಧ ಪಕ್ಷದ ನಾಯಕರೂ ಆಗಿರುವ ಮಾಜಿ ಮುಖ್ಯಮಂತ್ರಿ ಜೈರಾಮ್ ಠಾಕೂರ್, ‘ಬುಧವಾರ ಬಜೆಟ್ ಮಂಡನೆಯಾಗಲಿದ್ದು, ಏನೆಲ್ಲಾ ಬೆಳವಣಿಗೆ ನಡೆಯಲಿದೆ ಎಂಬುದನ್ನು ನೋಡುತ್ತೇವೆ. ಆದರೆ, ಈ ಸರ್ಕಾರ ಬಹುಮತ ಕಳೆದುಕೊಂಡಿದೆ’ ಎಂದು ಪ್ರತಿಕ್ರಿಯಿಸಿದರು.
ಮತದಾನದ ಬಳಿಕ ಇಬ್ಬರೂ 34–34 ರಲ್ಲಿ ಸಮಬಲ ಸಾಧಿಸಿದರು. ಚೀಟಿ ಎತ್ತಿದಾಗ ಗೆಲುವಿನ ಅದೃಷ್ಟ ಮಹಾಜನ್‌ಗೆ ಒಲಿಯಿತು.
ಕಾಂಗ್ರೆಸ್‌ನ ಐವರು ಶಾಸಕರನ್ನು ‘ಅಪಹರಣ’ ಮಾಡಲಾಗಿದೆ ಎಂದು ಹಿಮಾಚಲ ಪ್ರದೇಶದ ಮುಖ್ಯಮಂತ್ರಿ ಸುಖ್ವಿಂದರ್ ಸಿಂಗ್ ಸುಖು ಅವರು ಮತದಾನ ಪ್ರಕ್ರಿಯೆಯ ಬೆನ್ನಲ್ಲೇ ಆರೋಪಿಸಿದ್ದಾರೆ. ‘ಬಿಜೆಪಿಯವರು ಸಿಆರ್‌ಪಿಎಫ್ ಮತ್ತು ಹರಿಯಾಣ ಪೊಲೀಸ್ ಸಿಬ್ಬಂದಿಯ ನೆರವಿನಿಂದ ಶಾಸಕರನ್ನು ಹರಿಯಾಣದ ಪಂಚಕುಲಾಕ್ಕೆ ಕರೆದೊಯ್ದಿದ್ದಾರೆ ಎಂದು ದೂರಿದ್ದಾರೆ.
ಕಾಂಗ್ರೆಸ್ ಶಾಸಕ ಸುಧೀರ್ ಶರ್ಮಾ, ಒಬ್ಬರು ಪಕ್ಷೇತರ ಶಾಸಕ ಮತ್ತು ಬಿಜೆಪಿಯ ಕೆಲವು ಶಾಸಕರು ಪಂಚಕುಲಾದ ಅತಿಥಿಗೃಹವೊಂದಕ್ಕೆ ತೆರಳುತ್ತಿರುವ ವಿಡಿಯೊ ಕೂಡಾ ಹರಿದಾಡಿದೆ.
ಬಿಜೆಪಿಯು ವಿಶ್ವಾಸಮತಕ್ಕೆ ಒತ್ತಾಯಿಸಲಿದೆಯೇ ಎಂಬ ಪ್ರಶ್ನೆಗೆ ವಿರೋಧ ಪಕ್ಷದ ನಾಯಕರೂ ಆಗಿರುವ ಮಾಜಿ ಮುಖ್ಯಮಂತ್ರಿ ಜೈರಾಮ್ ಠಾಕೂರ್, ‘ಬುಧವಾರ ಬಜೆಟ್ ಮಂಡನೆಯಾಗಲಿದ್ದು, ಏನೆಲ್ಲಾ ಬೆಳವಣಿಗೆ ನಡೆಯಲಿದೆ ಎಂಬುದನ್ನು ನೋಡುತ್ತೇವೆ. ಆದರೆ, ಈ ಸರ್ಕಾರ ಬಹುಮತ ಕಳೆದುಕೊಂಡಿದೆ’ ಎಂದು ಪ್ರತಿಕ್ರಿಯಿಸಿದರು.
68 ಸದಸ್ಯ ಬಲದ ವಿಧಾನಸಭೆಯಲ್ಲಿ ಕಾಂಗ್ರೆಸ್‌ನ 40 ಮತ್ತು ಬಿಜೆಪಿಯ 25 ಸದಸ್ಯರು ಇದ್ದಾರೆ. ಮೂವರು ಪಕ್ಷೇತರರು ಕಾಂಗ್ರೆಸ್ ಜತೆ ಗುರುತಿಸಿಕೊಂಡಿದ್ದರು. ಆದರೆ ಮಂಗಳವಾರ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್‌ನ ಆರು ಸದಸ್ಯರು ಮತ್ತು ಮೂವರು ಪಕ್ಷೇತರ ಶಾಸಕರು ಬಿಜೆಪಿ ಅಭ್ಯರ್ಥಿ ಪರ ಮತ ಚಲಾಯಿಸಿದ್ದಾರೆ.
ಅಭ್ಯರ್ಥಿಯ ಗೆಲುವಿಗೆ 35 ಮತಗಳು ಬೇಕಿದ್ದವು. ಕಾಂಗ್ರೆಸ್‌ನ 40 ಶಾಸಕರು ಇರುವುದರಿಂದ ಸಿಂಘ್ವಿ ಸುಲಭವಾಗಿ ಗೆಲ್ಲುವರು ಎಂದು ನಿರೀಕ್ಷಿಸಲಾಗಿತ್ತು. ಆದರೆ ಕಾಂಗ್ರೆಸ್‌ನಲ್ಲಿ ‘ಒಡಕು’ ಇರುವುದನ್ನು ಅರಿತಿದ್ದ ಬಿಜೆಪಿ, ಮಹಾಜನ್ ಅವರನ್ನು ಕಣಕ್ಕಿಳಿಸಿತ್ತು.
ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರ ಆಪ್ತ ವಲಯದಲ್ಲಿ ಗುರುತಿಸಿಕೊಂಡಿರುವ ಸುಖು ಅವರು ಸರ್ಕಾರವನ್ನು ಮುನ್ನಡೆಸುತ್ತಿರುವ ರೀತಿ, ಕೆಲವು ಶಾಸಕರ ಅತೃಪ್ತಿಗೆ ಕಾರಣವಾಗಿತ್ತು. ಪಕ್ಷದ ನಿಷ್ಠಾವಂತ ಕಾರ್ಯಕರ್ತರ ಹಿತಾಸಕ್ತಿಗಳನ್ನು ಕಡೆಗಣಿಸುತ್ತಿದ್ದಾರೆ ಎಂದು ಆರೋಪವೂ ಕೇಳಿಬಂದಿತ್ತು.
‘ಹಿಮಾಚಲ ಪ್ರದೇಶದಲ್ಲಿ ಪಕ್ಷದೊಳಗೆ ನಡೆಯುತ್ತಿರುವ ಬೆಳವಣಿಗೆಗಳ ಅರಿವು ಹೈಕಮಾಂಡ್‌ಗೆ ಇತ್ತು. ಅದೇ ಕಾರಣದಿಂದ ಪಕ್ಷದ ನಾಯಕಿ ಸೋನಿಯಾ ಗಾಂಧಿ ಅವರನ್ನು ರಾಜ್ಯಸಭೆಗೆ ಕಳುಹಿಸಲು ಹಿಮಾಚಲ ಪ್ರದೇಶದ ಬದಲು ರಾಜಸ್ಥಾನವನ್ನು ಆಯ್ಕೆಮಾಡಿಕೊಂಡಿದ್ದರು’ ಎಂದು ಪಕ್ಷದ ಹಿರಿಯ ನಾಯಕರೊಬ್ಬರು ಈಚೆಗೆ ಹೇಳಿದ್ದರು.
ಹೆಲಿಕಾಪ್ಟರ್‌ನಲ್ಲಿ ಬಂದು ಮತದಾನ: ಕಾಂಗ್ರೆಸ್ ಶಾಸಕ ಸುದರ್ಶನ್ ಬಬ್ಲೂ ಅವರು ಕೊನೆಯವರಾಗಿ ಮತ ಚಲಾಯಿಸಿದರು. ಅನಾರೋಗ್ಯದಿಂದ ಬಳಲಿದ್ದ ಅವರನ್ನು ಪಂಜಾಬ್‌ನ ಹೋಶಿಯಾರ್‌ಪುರದಿಂದ ಹೆಲಿಕಾಪ್ಟರ್‌ನಲ್ಲಿ ಶಿಮ್ಲಾಕ್ಕೆ ಕರೆತಂದು ಮತದಾನ ಮಾಡಿಸಲಾಯಿತು.
ಬಬ್ಲೂ ಅವರನ್ನು ಕರೆತರಲು ಮುಖ್ಯಮಂತ್ರಿ ಸುಖು ಅವರ ಹೆಲಿಕಾಪ್ಟರ್ ಬಳಸಲಾಗಿದೆ ಎಂದು ಜೈರಾಂ ಠಾಕೂರ್ ಆರೋಪಿಸಿದ್ದರು. ‘ಇದು ನೀತಿ ಸಂಹಿತೆಯ ಉಲ್ಲಂಘನೆಯಾಗಿದ್ದು, ಬಬ್ಲೂ ಅವರ ಮತವನ್ನು ಪರಿಗಣಿಸಬಾರದು’ ಎಂದೂ ಆಗ್ರಹಿಸಿದ್ದರು.
ಬಿಜೆಪಿಯು ಚುನಾಯಿತ ಸರ್ಕಾರಗಳನ್ನು ಪತನಗೊಳಿಸುವ ಪ್ರಕ್ರಿಯೆ ಮುಂದುವರಿಸಿದರೆ, ಪ್ರಜಾಪ್ರಭುತ್ವ ವ್ಯವಸ್ಥೆಯೇ ನಾಶವಾಗಲಿದೆಮಲ್ಲಿಕಾರ್ಜುನ ಖರ್ಗೆ, ಎಐಸಿಸಿ ಅಧ್ಯಕ್ಷ
ಕಾಂಗ್ರೆಸ್‌ನ ಅಭಿಷೇಕ್ ಮನು ಸಿಂಘ್ವಿಗೆ ಸೋಲು
34–34 ಸಮಬಲ; ಚೀಟಿ ಎತ್ತಿದಾಗ ಬಿಜೆಪಿಗೆ ಗೆಲುವಿನ ಅದೃಷ್ಟ
ಐವರು ಶಾಸಕರ ‘ಅಪಹರಣ’: ಸಿ.ಎಂ ಸುಖು ಆರೋಪ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.