ಪ್ರಯಾಗ್‌ರಾಜ್ (ಉತ್ತರಪ್ರದೇಶ): ‘ದೇಶಿಯವಾಗಿ ಅಭಿವೃದ್ಧಿಪಡಿಸಿರುವ ಕುಲಾಂತರಿ ಹೈಬ್ರಿಡ್ ಸಾಸಿವೆ (ಜಿಎಂ) ಪ್ರಾಯೋಗಿಕವಾಗಿ ಬೆಳೆಯುವ ಕೇಂದ್ರ ಸರ್ಕಾರದ ಪ್ರಸ್ತಾವನೆಗೆ ಅವಕಾಶ ನೀಡುವುದಿಲ್ಲ. ಜಿಎಂ ಸಾಸಿವೆಯನ್ನು ನಾವು ಬಹಿಷ್ಕರಿಸುತ್ತೇವೆ’ ಎಂದುಭಾರತೀಯ ಕಿಸಾನ್ ಯೂನಿಯನ್ (ಬಿಕೆಯು) ನಾಯಕ ರಾಕೇಶ್ ಟಿಕಾಯಿತ್ ಭಾನುವಾರ ಹೇಳಿದ್ದಾರೆ.
ಘುಂಗ್ರೂ ಬಳಿ ರೈತರ ಮಹಾಪಂಚಾಯತ್ ಉದ್ದೇಶಿಸಿ ಮಾತನಾಡಿದ ಅವರು, ‘ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವಾಲಯವು ಜಿಎಂ ಸಾಸಿವೆ ಬೆಳೆಯ ಪ್ರಯೋಗಕ್ಕೆ ಅನುಮೋದನೆ ನೀಡಿದೆ. ಉತ್ತರ ಪ್ರದೇಶದ ಶಹಜಾನ್‌ಪುರ ಮತ್ತು ರಾಜಸ್ಥಾನದ ಭರತ್‌ಪುರದಲ್ಲಿ ಪ್ರಯೋಗಕ್ಕೆ ಸಿದ್ಧತೆ ನಡೆಯುತ್ತಿದೆ.ಉತ್ತರ ಪ್ರದೇಶ ಅಥವಾ ರಾಜಸ್ಥಾನದಲ್ಲೇ ಆಗಲಿ ನಾವು ಇದನಕ್ಕೆ ಅನುಮತಿಸುವುದಿಲ್ಲ’ ಎಂದು ಹೇಳಿದ್ದಾರೆ.
ಹಲವಾರು ದೇಶಗಳಲ್ಲಿ ವಿಜ್ಞಾನಿಗಳು ಕುಲಾಂತರಿ ಹೈಬ್ರಿಡ್ ಸಾಸಿವೆಗೆಆಕ್ಷೇಪಣೆ ಎತ್ತಿರುವಾಗ,ಜಿಎಂ ಸಾಸಿವೆಯು ದೇಶಕ್ಕೆ ನುಸುಳಲು ಅನುಮತಿಸುವುದಕ್ಕೆ ಯಾವುದೇ ಕಾರಣಗಳಿಲ್ಲ. ಇಡೀ ಜಗತ್ತಿನಲ್ಲಿ ಇದಕ್ಕೆ ಯಾಕಾಗಿ ನಿಷೇಧಿಸಿದ್ದಾರೆ ಎನ್ನುವುದಕ್ಕೆನಮ್ಮ ಬಳಿ 400 ವಿಜ್ಞಾನಿಗಳ ವರದಿಗಳಿವೆ. ಬಿ.ಟಿ ಹತ್ತಿ ಕೃಷಿಯ ಕೆಟ್ಟ ಫಲಿತಾಂಶಗಳು ನಮ್ಮ ಕಣ್ಣಮುಂದೆ ಇವೆ. ಇದಾದ ಮೇಲೂಜಿಎಂ ಸಾಸಿವೆ ಕೃಷಿಗೆ ಅವಕಾಶ ನೀಡುವುದರ ಉದ್ದೇಶವೇನು?ದೇಶದಲ್ಲಿ ಸಾಸಿವೆಗೆ ಕೊರತೆ ಇದೆಯೇಎಂದು ಅವರು ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರವನ್ನು ತೀವ್ರ ತರಾಟೆಗೆ ತೆಗೆದುಕೊಂಡಿದ್ದಾರೆ.
ರೈತ ವಿರೋಧಿ ನೀತಿಗಳನ್ನು ವಿರೋಧಿಸಿ ಸರ್ಕಾರದ ವಿರುದ್ಧ ಇದೇ 26ರಂದು ಲಖನೌನಲ್ಲಿ ಪ್ರತಿಭಟನಾ ಪ್ರದರ್ಶನ ನಡೆಸುವುದಾಗಿ ಘೋಷಿಸಿದ ಅವರು, ರಾಜ್ಯದಾದ್ಯಂತ ರೈತರು ಇದರಲ್ಲಿ ಪಾಲ್ಗೊಳ್ಳಬೇಕು ಎಂದು ಕರೆನೀಡಿದರು.
ಅಲಹಾಬಾದ್ ವಿಶ್ವವಿದ್ಯಾಲಯದಲ್ಲಿ ಶುಲ್ಕ ಹೆಚ್ಚಳದ ವಿರುದ್ಧದ ಆಂದೋಲನವನ್ನು ಅವರು ಬೆಂಬಲಿಸಿದರು. ವಿ.ವಿಯಲ್ಲಿ ವಿದ್ಯಾರ್ಥಿಗಳ ಜತೆಗೆ ಚಳವಳಿಯಲ್ಲಿ ಪಾಲ್ಗೊಳ್ಳುವಾಗಿ ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.