ADVERTISEMENT

ಅಯೋಧ್ಯೆಯಲ್ಲಿ ಬಾಲರಾಮನ ಪ್ರಾಣ ಪ್ರತಿಷ್ಠಾಪನೆಗೆ ಖರ್ಚಾಗಿದ್ದು ಎಷ್ಟು ಗೊತ್ತೇ?

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 26 ಆಗಸ್ಟ್ 2024, 6:00 IST
Last Updated 26 ಆಗಸ್ಟ್ 2024, 6:00 IST
   

ಅಯೋಧ್ಯೆ: ಜನವರಿ 22ರಂದು ಅಯೋಧ್ಯೆಯಲ್ಲಿ ನಡೆದ ಬಾಲರಾಮನ ಮೂರ್ತಿಯ ಪ್ರಾಣ ಪ್ರತಿಷ್ಠಾಪನೆ ಕಾರ್ಯಕ್ರಮಕ್ಕೆ ಬರೋಬ್ಬರಿ ₹113 ಕೋಟಿ ಖರ್ಚಾಗಿದೆ ಎಂದು ಶ್ರೀರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್ ಮಾಹಿತಿ ನೀಡಿರುವುದಾಗಿ ಟೈಮ್ಸ್ ಆಫ್ ಇಂಡಿಯಾ ವರದಿ ಮಾಡಿದೆ.

ರಾಮ ಮಂದಿರ ನಿರ್ಮಾಣಕ್ಕೆ ಈವರೆಗೆ ₹1,800 ಕೋಟಿ ಖರ್ಚಾಗಿದ್ದು, ಈ ವರ್ಷದ ಅಂತ್ಯದ ವೇಳೆಗೆ ಮುಂದಿನ ಎರಡು ಹಂತಗಳ ಕಾಮಗಾರಿಗೆ ಹೆಚ್ಚುವರಿ ₹670 ಕೋಟಿ ಖರ್ಚಾಗಲಿದೆ ಎಂದೂ ಇತ್ತೀಚಿನ ಸಭೆಯೊಂದರಲ್ಲಿ ಬಹಿರಂಗಪಡಿಸಿತ್ತು.

2023-24ನೇ ಹಣಕಾಸು ವರ್ಷದ ಖರ್ಚು ವೆಚ್ಚಗಳ ಕುರಿತಂತೆಯೂ ಟ್ರಸ್ಟಿಗಳು ಪರಿಶೀಲನೆ ನಡೆಸಲಿದ್ದು, ಸೆಪ್ಟೆಂಬರ್‌ನಲ್ಲಿ ಟ್ರಸ್ಟ್‌ ಆದಾಯ ತೆರಿಗೆ ಸಲ್ಲಿಕೆ ಮಾಡಲಿದೆ.

ADVERTISEMENT

ಕಳೆದ 4 ವರ್ಷಗಳಲ್ಲಿ ಭಕ್ತರು 20 ಕೆ.ಜಿ ಚಿನ್ನ, 13 ಕ್ವಿಂಟಲ್ ಬೆಳ್ಳಿಯ ಆಭರಣಗಳನ್ನು ದೇಗುಲಕ್ಕೆ ನೀಡಿದ್ದಾರೆ.

2024ರ ಏಪ್ರಿಲ್ 1 ರಿಂದ 2025ರ ಮಾರ್ಚ್ 31ರವರೆಗೆ ₹850 ಕೋಟಿ ಖರ್ಚನ್ನು ಅಂದಾಜಿಸಲಾಗಿದೆ ಎಂದು ಟ್ರಸ್ಟ್‌ನ ಪ್ರಧಾನ ಕಾರ್ಯದರ್ಶಿ ಚಂಪತ್ ರಾಯ್ ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.