ADVERTISEMENT

ಅಯೋಧ್ಯೆ | ರಾಮ ಮೂರ್ತಿ ಪ್ರತಿಷ್ಠಾಪನೆ ವಿಧಿವಿಧಾನ ಆರಂಭ

ಪಿಟಿಐ
Published 5 ನವೆಂಬರ್ 2023, 16:05 IST
Last Updated 5 ನವೆಂಬರ್ 2023, 16:05 IST
ವಿಶ್ವ ಹಿಂದೂ ಪರಿಷತ್‌ನ ಕಾರ್ಯಕರ್ತರು ಅಯೋಧ್ಯೆಯ ರಾಮ ಮಂದಿರದ ಸ್ಥಳದಲ್ಲಿ ಪೂಜಿಸಲಾದ ಅಕ್ಷತೆಯನ್ನು ಹೊತ್ತು ಸಾಗಿದರು –ಪಿಟಿಐ ಚಿತ್ರ
ವಿಶ್ವ ಹಿಂದೂ ಪರಿಷತ್‌ನ ಕಾರ್ಯಕರ್ತರು ಅಯೋಧ್ಯೆಯ ರಾಮ ಮಂದಿರದ ಸ್ಥಳದಲ್ಲಿ ಪೂಜಿಸಲಾದ ಅಕ್ಷತೆಯನ್ನು ಹೊತ್ತು ಸಾಗಿದರು –ಪಿಟಿಐ ಚಿತ್ರ   

ಅಯೋಧ್ಯೆ: ಅಯೋಧ್ಯೆಯ ರಾಮ ಮಂದಿರದಲ್ಲಿ ರಾಮನ ಮೂರ್ತಿ ಪ್ರತಿಷ್ಠಾಪನೆಯ ವಿಧಿವಿಧಾನಗಳು ಅಕ್ಷತಾ ಪೂಜೆಯನ್ನು ನೆರವೇರಿಸುವ ಮೂಲಕ ಭಾನು‍ವಾರ ಆರಂಭಗೊಂಡವು.

‘ಅಕ್ಷತಾ ಪೂಜೆಯನ್ನು ದೇವಸ್ಥಾನದ ರಾಮ ದರ್ಬಾರ್‌ನಲ್ಲಿ ನೆರವೇರಿಸಲಾಯಿತು.

100 ಕ್ವಿಂಟಲ್‌ ಅಕ್ಕಿಯನ್ನು ಅರಿಸಿನ ಮತ್ತು ದೇಸಿ ತುಪ್ಪದಲ್ಲಿ ಮಿಶ್ರಣ ಮಾಡಿ ಪೂಜೆ ನಡೆಸಲಾಯಿತು’ ಎಂದು ಶ್ರೀ ರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್‌ ಹೇಳಿದೆ.

ADVERTISEMENT

‘ದೇಶದ 45 ಭಾಗಗಳಿಂದ ಇಲ್ಲಿಗೆ ಬಂದಿರುವ ವಿಶ್ವ ಹಿಂದೂ ಪರಿಷತ್‌ನ (ವಿಎಚ್‌ಪಿ) 90 ಕಾರ್ಯಕರ್ತರಿಗೆ ಪೂಜೆ ಮಾಡಲಾದ ಅಕ್ಷತೆಯನ್ನು ವಿತರಿಸಲಾಗುವುದು. ಈ ಅಕ್ಷತೆಯನ್ನು ಜನವರಿ 22ರೊಳಗಾಗಿ ಅವರು ದೇಶದಾದ್ಯಂತ ಸಂಚರಿಸಿ ವಿತರಿಸುವರು’ ಎಂದು ತಿಳಿಸಿದೆ.

’ಪೂಜೆ ಮಾಡಲಾದ ಅಕ್ಷತೆಯನ್ನು ದೇಶದ ಐದು ಲಕ್ಷ ಹಳ್ಳಿಗಳಲ್ಲಿ ಕಾರ್ಯಕರ್ತರು ಹಂಚಲಿದ್ದಾರೆ‘ ಎಂದು ತಿಳಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.